ನನ್ನನ್ನು ಮದುವೆ ಆಗ್ತೀರಾ?: ಸಲ್ಮಾನ್ ಗೆ ಡೈರೆಕ್ಟ್ ಆಗಿ ಕೇಳಿದ ಪತ್ರಕರ್ತೆ

Public TV
1 Min Read

ಬಾಲಿವುಡ್ (Bollywood) ಬ್ಯಾಡ್ ಬಾಯ್ ಸಲ್ಮಾನ್ ಖಾನ್ (Salman Khan) ಮದುವೆ ಮೇಲೆಯೇ ಎಲ್ಲರದ್ದೂ ಕಣ್ಣು. ವಯಸ್ಸು ಐವತ್ತಾದರೂ ಇನ್ನೂ ಮದುವೆ (Marriage) ಬಗ್ಗೆ ಪ್ರಶ್ನೆ ಮಾಡುವುದನ್ನು ಮತ್ತು ಪ್ರಪೋಸ್ ಮಾಡುವುದನ್ನು ಬಿಟ್ಟಿಲ್ಲ. ಸಲ್ಲು ಎದುರಾದಾಗೊಮ್ಮೆ ಮದುವೆ ವಿಚಾರ ಪ್ರಸ್ತಾಪವಾಗುತ್ತದೆ. ಯಾರು ಅತೀ ಹೆಚ್ಚು ಬಾರಿ ಸಲ್ಲುವನ್ನು ‘ಮದುವೆ ಯಾವಾಗ?’ ಎಂದು ಕೇಳುತ್ತಿದ್ದರೋ, ಅವರೇ ಇಂದು ಮದುವೆ ಆಗುತ್ತೀಯಾ? ಎಂದು ಕೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

salman

ಇತ್ತೀಚೆಗಷ್ಟೇ ಸಿನಿಮಾವೊಂದರ ಪ್ರಚಾರದಲ್ಲಿ ಭಾಗಿಯಾಗಿದ್ದ ಸಲ್ಮಾನ್ ಖಾನ್ ಅವರನ್ನು ಹಾಲಿವುಡ್ ಪತ್ರಕರ್ತೆಯೊಬ್ಬರು (Journalist) ನೇರವಾಗಿ ಮದುವೆ ವಿಷಯ ಪ್ರಸ್ತಾಪ ಮಾಡಿದ್ದಾರೆ. ‘ನಾನು ಹಾಲಿವುಡ್ (Hollywood) ನಿಂದ ಬಂದಿದ್ದೇನೆ. ನಿಮ್ಮನ್ನು ನೋಡಿದ ತಕ್ಷಣ ಫಿದಾ ಆದೆ. ನನ್ನನ್ನು ಮದುವೆ ಆಗುತ್ತೀರಾ? ಎಂದು ಕೇಳಿದ್ದಾರೆ. ಇದನ್ನೂ ಓದಿ:ಮಗಳ ವಯಸ್ಸಿನ ಫಾತಿಮಾ ಜೊತೆ ಮತ್ತೆ ಮದುವೆಗೆ ಸಜ್ಜಾದ ಆಮೀರ್‌ ಖಾನ್

ಪತ್ರಕರ್ತೆಯ ಮಾತಿಗೆ ನಗುತ್ತಲೇ ಉತ್ತರಿಸಿರುವ ಸಲ್ಮಾನ್ ಖಾನ್, ‘ನೀವು ಶಾರುಖ್ ಖಾನ್ (Shahrukh Khan) ಬಗ್ಗೆ ಹೇಳ್ತಾ ಇದ್ದೀರಿ. ಕನ್ಫ್ಯೂಸ್ ಮಾಡಿಕೊಂಡಿದ್ದೀರಿ’ ಎಂದು ಉತ್ತರಿಸುತ್ತಾರೆ. ‘ಇಲ್ಲ ನಾನು ನಿಮ್ಮನ್ನೇ ಕೇಳ್ತಾ ಇರೋದು. ಸಖತ್ ಹ್ಯಾಂಡ್ ಸಮ್ ಆಗಿದ್ದೀರಿ. ನೀವು ಒಪ್ಪಿದರೆ ನಾನು ಮದುವೆ ಆಗಲು ತಯಾರು’ ಎಂದು ಮತ್ತೆ ಪತ್ರಕರ್ತೆ ಮರು ಪ್ರಶ್ನೆ ಮಾಡುತ್ತಾರೆ.

ಪತ್ರಕರ್ತೆಯ ಮಾತಿಗೆ ಮತ್ತೆ ಉತ್ತರಿಸುವ ಸಲ್ಮಾನ್, ‘ನೀವು ಇಪ್ಪತ್ತು ವರ್ಷಗಳ ಹಿಂದೆ ಬಂದು ಕೇಳಿದ್ದರೆ ಒಪ್ಪಬಹುದಿತ್ತು. ನನಗೀಗ ಮದುವೆ ಕಾಲ ಮುಗಿದಿದೆ. ತಡವಾಗಿದೆ’ ಎಂದು ಮತ್ತೆ ತಮಾಷೆ ಮಾಡುತ್ತಲೇ ಉತ್ತರಿಸುತ್ತಾರೆ. ಒಂದು ರೀತಿಯಲ್ಲಿ ಇಬ್ಬರ ಮಾತು ಪ್ರತಿಮಾತುಗಳು ಸಖತ್ ತಮಾಷೆಯನ್ನು  ನೀಡಿವೆ.

Share This Article