ಜಗ್ಗೇಶ್ ನಟನೆಯ ‘ಸರ್ವರ್ ಸೋಮಣ್ಣ’ ನಿರ್ದೇಶಕ ಕೆ.ವಾಸು ನಿಧನ

Public TV
1 Min Read

ತೆಲುಗಿನ ಖ್ಯಾತ ನಟ ಚಿರಂಜೀವಿ ಅವರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ ಹಾಗೂ ಕನ್ನಡದಲ್ಲಿ ಜಗ್ಗೇಶ್ ನಟನೆಯ ಸರ್ವರ ಸೋಮಣ್ಣ ಚಿತ್ರವನ್ನು ನಿರ್ದೇಶನ ಮಾಡಿದ್ದ ಖ್ಯಾತ ದಕ್ಷಿಣ ಭಾರತದ ಸಿನಿಮಾ ನಿರ್ದೇಶಕ ಕೆ.ವಾಸು (K.Vasu) ನಿಧನರಾಗಿದ್ದಾರೆ (Passed Away). ಹಲವು ವರ್ಷಗಳಿಂದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.

ಕೆಲ ದಿನಗಳಿಂದ ಅವರು ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲದೇ, ಕಳೆದ ಕೆಲ ತಿಂಗಳಿಂದ ಅವರಿಗೆ ಡಯಾಲಿಸಸ್ ಕೂಡ ಮಾಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಹೈದರಾಬಾದ್ (Hyderabad) ನ ಫಿಲ್ಮ್ ನಗರದಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್‌ಗೆ ಸಿಕ್ತು ಸಿಹಿಸುದ್ದಿ

ಕೆ.ವಾಸು ನಿಧನಕ್ಕೆ ಚಿರಂಜೀವಿ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಚಿರಂಜೀವಿ ಟ್ವೀಟ್ ಕೂಡ ಮಾಡಿದ್ದಾರೆ. ಕೆ.ವಾಸು ನಿರ್ದೇಶನದ ಪ್ರಣಾಮ್ ಖರೀದು ಚಿತ್ರದ ಮೂಲಕ ತಾವು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದನ್ನೂ ಚಿರಂಜೀವಿ ನೆನಪಿಸಿಕೊಂಡಿದ್ದಾರೆ. ಅಲ್ಲದೇ ವಾಸು ಜೊತೆಗಿನ ಒಡನಾಟವನ್ನೂ ಅವರು ಹಂಚಿಕೊಂಡಿದ್ದಾರೆ.

22ನೇ ವಯಸ್ಸಿಗೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದ ಕೆ.ವಾಸು, ಸಹಾಯಕ ನಿರ್ದೇಶಕರಾಗಿ, ನಿರ್ದೇಶಕರಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಕೊತ್ತಲ ರಾಯುಡು, ಶ್ರೀ ಶಿರಡಿ ಸಾಯಿಬಾಬಾ ಮಹಾತ್ಯಮ್, ಸರ್ವರ್ ಸೋಮಣ್ಣ ಹೀಗೆ ಸಾಕಷ್ಟು ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.

Share This Article