ಅಕ್ಟೋಬರ್ 8ಕ್ಕೆ ಪ್ರತಿಷ್ಠಿತ ಬೆಂಗಳೂರು ಮ್ಯಾರಥಾನ್

Public TV
1 Min Read

ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ಮ್ಯಾರಥಾನ್ (Bengaluru Marathon) 10ನೇ ಅವೃತ್ತಿ ಇದೇ ಅಕ್ಟೋಬರ್ 8 ರಂದು ನಡೆಯಲಿದೆ. ಅಂತಾರಾಷ್ಟ್ರೀಯ ಮ್ಯಾರಥಾನ್ ಸಂಸ್ಥೆಯಿಂದ ಮಾನ್ಯತೆ ಪಡೆದಿರುವ ಮ್ಯಾರಥಾನ್ ನ ಮುಂದಿನ ಮೂರು ಆವೃತ್ತಿಗೆ ಹೆಸರಾಂತ ಸಂಸ್ಥೆ ವಿಪ್ರೋ (Wipro) ಲಿಮಿಟೆಡ್‌ ಶೀರ್ಷೀಕೆ ಪ್ರಾಯೋಜಕತ್ವ ಪಡೆದುಕೊಂಡಿದೆ. ಖಾಸಗಿ ಹೊಟೇಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ 10ನೇ ಆವೃತ್ತಿಯ ಹೊಸ ಲೋಗೋ ಕೂಡ ಬಿಡುಗಡೆ ಮಾಡಲಾಯಿತು.

ಇದೇ ಅಕ್ಟೋಬರ್ 8 ರಿಂದ ನಡೆಯಲಿರುವ ಮ್ಯಾರಥಾನ್ (Marathon) ನಲ್ಲಿ 20 ಸಾವಿರಕ್ಕೂ ಹೆಚ್ಚು ಓಟಗಾರರು ಭಾಗಿಯಾಗಲಿದ್ದಾರೆ. ಕಳೆದ 10 ವರ್ಷಗಳಿಂದ ನಡೆಯುತ್ತಿರುವ ವಾರ್ಷಿಕ ಸಿಟಿ ರನ್ ಮೂರು ವಿಭಾಗಗಳಲ್ಲಿ ನಡೆಯಲಿದೆ. 42 ಕಿಮೀ ಪೂರ್ಣ ಮ್ಯಾರಥಾನ್, 21 ಕಿಮೀ ಹಾಫ್ ಮ್ಯಾರಥಾನ್, 5 ಕಿಮೀ ಹೋಪ್ ರನ್ ಇರಲಿದೆ.

ಇನ್ನೂ ಕಾರ್ಯಕ್ರಮದಲ್ಲಿ ವಿಪ್ರೋ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಜತಿನ್ ದಲಾಳ್ ಮಾತನಾಡಿ, ಬೆಂಗಳೂರು ಮ್ಯಾರಥಾನ್ ಶೀರ್ಷಿಕೆ ಪ್ರಯೋಜಕರಾಗಿರೋದು ಸಂತಸ ತಂದಿದೆ. ಕಳೆದ 17 ವರ್ಷಗಳಿಂದ ಸ್ಪೀರಿಟ್ ಆಫ್ ವಿಪ್ರೋ ಹೆಸರಿನಲ್ಲಿ ನಮ್ಮ ಉದ್ಯೋಗಿಗಳಿಗೆ ಓಟವನ್ನ ಆಯೋಜಿಸುತ್ತಿದ್ದೇವೆ. ಸಮುದಾಯದಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಠಿಸುವ ನಿಟ್ಟಿನಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆ. ಆರೋಗ್ಯಕರ ಜೀವನ ಶೈಲಿ ರೂಪಿಸಿಕೊಳ್ಳುವಂತೆ ಜನರನ್ನ ಪ್ರೋತ್ಸಾಹಿಸಲು ಹಾಗೂ ಬೆಂಬಲಿಸಲು ಇದು ಉತ್ತಮ ಅವಕಾಶ ಎಂದು ಸಲಹೆ ನೀಡಿದರು.

ಇನ್ನೂ ಕಾರ್ಯಕ್ರಮದಲ್ಲಿ ರೇಸ್ ನಿರ್ದೇಶಕ ನಾಗರಾಜ್ ಅಡಿಗ, ಅರ್ಜುನ ಪ್ರಶಸ್ತಿ ವಿಜೇತೆ ರೀತ್ ಅಬ್ರಾಹಂ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Share This Article