SDRF ತಂಡದಿಂದ 20 ಅಡಿ ಬಾವಿಗೆ ಬಿದ್ದಿದ್ದ ಕುದುರೆಯ ರಕ್ಷಣೆ

Public TV
1 Min Read

ಬೆಳಗಾವಿ: ನಗರದ ಹೊರವಲಯ ಖಾಸಬಾಗ್‍ನ ಟೀಚರ್ಸ್ ಕಾಲೋನಿಯಲ್ಲಿ 20 ಅಡಿ ಆಳದ ಬಾವಿಗೆ ಬಿದ್ದಿದ್ದ ಕುದುರೆ (Horse Rescue) ಯನ್ನು ಅಗ್ನಿ ಮತ್ತು ಎಸ್ ಡಿಆರ್ ಎಫ್ ತಂಡದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ರಕ್ಷಣೆ ಮಾಡಿರುವ ಘಟನೆ ನಡೆದಿದೆ.

ನಗರದ ಹೊರವಲಯ ಖಾಸಬಾಗ್‍ನ ಟೀಚರ್ಸ್ ಕಾಲೋನಿ ಯ ನವೀನ್ ಹೇರೇಕರ್ ಎಂಬವರ ಮನೆ ಎದುರು ನಿರ್ಮಿಸಿದ್ದ ಬಾವಿಯಲ್ಲಿ ಆಯಾತಪ್ಪಿ ಕುದುರೆ ಬಿದ್ದಿತ್ತು. ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ನಡೆದ ಘಟನೆಯ ದೃಶ್ಯ ವೈರಲ್ ಆಗಿದ್ದು, ಮೂರು ಅಡಿ ಅಗಲ ಇರುವ 20 ಅಡಿ ಆಳದ ಬಾವಿಗೆ ಕುದುರೆ ಬಿದ್ದಿತ್ತು.

ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ, ಎಸ್‍ಡಿಆರ್ ಎಫ್ ಸಿಬ್ಬಂದಿ ಕುದುರೆಯ ರಕ್ಷಣೆ ಮಾಡಿದ್ದಾರೆ. ಬಳಿಕ ಮನೆ ಮಾಲೀಕರಿಗೆ ಸೂಕ್ತ ಸುರಕ್ಷಾ ಕ್ರಮ ಅನುಸರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಭಾರೀ ಮಳೆಗೆ ಪ್ರವಾಹದಂತಾದ ಜ್ಯುವೆಲ್ಲರಿ ಶಾಪ್ – ಕೊಚ್ಚಿ ಹೋಯ್ತು 2.5 ಕೋಟಿಯ ಆಭರಣ

 

Share This Article