‘ಏಜೆಂಟ್’ ಸಿನಿಮಾ ಸೋಲಿನ ಬೆನ್ನಲ್ಲೇ ಪತ್ರ ಬರೆದ ಅಖಿಲ್ ಅಕ್ಕಿನೇನಿ

Public TV
1 Min Read

ಸ್ಟಾರ್ ನಟ ನಾಗಾರ್ಜುನ (Nagarjuna) ಪುತ್ರ ಅಖಿಲ್ ಅಕ್ಕಿನೇನಿ (Akhil Akkineni) ನಟನೆಯ ‘ಏಜೆಂಟ್’ (Agent) ಸಿನಿಮಾದ ಸೋಲಿಗೆ ನೆಟ್ಟಿಗರಿಂದ ಭಾರೀ ಟೀಕೆಗೆ ಒಳಗಾಗಿದ್ದರು. ‘ಏಜೆಂಟ್’ ಚಿತ್ರದ ಹೀನಾಯ ಸೋಲಿನ (Flop) ಬೆನ್ನಲ್ಲೇ ಅಖಿಲ್ ಅಭಿಮಾನಿಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ.

2015ರಲ್ಲಿ ‘ಅಖಿಲ್’ (Akhil) ಸಿನಿಮಾ ಸಿನಿರಂಗಕ್ಕೆ ಕಾಲಿಟ್ಟ ಅಖಿಲ್ ಅಕ್ಕಿನೇನಿ, ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆದರೂ ಅವರಿಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಗಲಿಲ್ಲ. ಇತ್ತೀಚಿಗೆ ‘ಏಜೆಂಜ್’ ಚಿತ್ರದ ಮೂಲಕ ಗ್ರ್ಯಾಂಡ್ ಎಂಟ್ರಿ ಕೊಟ್ರು ಕೂಡ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಮಕಾಡೆ ಮಲಗಿತ್ತು. ಅಖಿಲ್ ಸಿನಿಮಾ ಟ್ರೋಲಿಗರ (Troll) ಬಾಯಿಗೆ ಆಹಾರವಾಗಿತ್ತು. ಚಿತ್ರಕ್ಕೆ ಹಾಕಿದ ಬಂಡವಾಳ ಗಳಿಸುವುದರಲ್ಲೂ ಏಡವಿತ್ತು. ಇದನ್ನೂ ಓದಿ:ಪವಿತ್ರಾ ಲೋಕೇಶ್ ಗೆ ಪ್ರೀತಿಯಿಂದ ‘ಅಮ್ಮು’ ಎಂದು ಕರೆಯುತ್ತೇನೆ : ನಟ ನರೇಶ್

ನಟ ಅಖಿಲ್ ಅಕ್ಕಿನೇನಿ ‘ಏಜೆಂಟ್’ ಸಿನಿಮಾ ಬಗ್ಗೆ ಬಹಿರಂಗ ಪತ್ರ ಬರೆದಿದ್ದಾರೆ. ‘ಏಜೆಂಟ್ ಚಿತ್ರತಂಡಕ್ಕೆ, ಈ ಸಿನಿಮಾ ನಿರ್ಮಾಣಕ್ಕೆ ತಮ್ಮ ಜೀವನವನ್ನು ಪಣವಾಗಿಟ್ಟ ಪ್ರತಿಯೊಬ್ಬರಿಗೂ ಧನ್ಯವಾದ. ಎಷ್ಟೇ ಕಷ್ಟ ಬಿದ್ದರೂ ದುರದೃಷ್ಟವಶಾತ್ ನಾವು ಅಂದುಕೊಂಡಿದ್ದನ್ನು ತೆರೆಮೇಲೆ ತರಲು ಸಾಧ್ಯವಾಗಲಿಲ್ಲ. ಆ ಮೂಲಕ ಒಳ್ಳೆ ಸಿನಿಮಾ ಕೊಡಲು ಸಾಧ್ಯವಾಗಲಿಲ್ಲ. ನನಗೆ ಬೆಂಬಲವಾಗಿ ನಿಂತ ನಿರ್ಮಾಪಕ ಅನಿಲ್ ಸುಂಕರ ಅವರಿಗೆ ಕೃತಜ್ಞತೆಗಳು.

 

View this post on Instagram

 

A post shared by Akhil Akkineni (@akkineniakhil)

ನಮ್ಮ ಸಿನಿಮಾ ನಂಬಿದ ವಿತರಕರು, ಬೆಂಬಲಕ್ಕೆ ನಿಂತ ಮಾಧ್ಯಮಗಳಿಗೆ ಧನ್ಯವಾದಗಳು. ಅಭಿಮಾನಿಗಳು- ಶ್ರೇಯೋಭಿಲಾಷಿಗಳ ಪ್ರೀತಿಯಿಂದಲೇ ನಾನು ಕಷ್ಟ ಬಿದ್ದು ಕೆಲಸ ಮಾಡುತ್ತಿದ್ದೇನೆ. ನನ್ನ ಮೇಲೆ ನಂಬಿಕೆ ಇಟ್ಟುಕೊಂಡವರಿಗೆ ಮತ್ತಷ್ಟು ಗಟ್ಟಿಯಾಗಿ ವಾಪಸ್ ಬರ್ತೀನಿ ಎಂದು ಅಖಿಲ್ ಬರೆದುಕೊಂಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿದ್ದ ಈ ಚಿತ್ರದಲ್ಲಿ ಮಲಯಾಳಂ ನಟ ಮಮ್ಮುಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

Share This Article