ಭಗವಂತ್ ಖೂಬಾ ವಿರುದ್ಧ ಕಿರುಕುಳ ಆರೋಪ ಮಾಡಿ ಗಳಗಳನೆ ಅತ್ತ ಪ್ರಭು ಚವ್ಹಾಣ್

Public TV
1 Min Read

ಬೀದರ್: ಕೇಂದ್ರದ ಮಂತ್ರಿಯಾಗಿ ತಾಯಿಗೆ ಮೋಸ ಮಾಡಿದ್ದಾರೆ. ತಾಯಿಗೆ ಮೋಸ ಮಾಡಿದವರನ್ನು ಆ ದೇವರೇ ನೋಡಿಕೊಳ್ಳುತ್ತಾನೆ ಎಂದು ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ವಿರುದ್ಧ ಕಿರುಕುಳ ಆರೋಪ ಮಾಡಿ ಸಚಿವ ಪ್ರಭು ಚವ್ಹಾಣ್ (Prabhu Chauhan) ಕಣ್ಣೀರು ಹಾಕಿದ್ದಾರೆ.

ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಭು ಚವ್ಹಾಣ್, ನಮ್ಮಗೆ ಬಹಳ ನೋವಾಗಿದೆ. ಅವರ ಚುನಾವಣೆಯಲ್ಲಿ ಸಂಸದರ ಎಲ್ಲಾ ಕ್ಷೇತ್ರದಲ್ಲಿ ಓಡಾಡಿದ್ದೇನೆ. ಅವರಿಗೆ ಟಿಕೆಟ್ ನೀಡಲು ಸೇರಿದಂತೆ ತನುಮನ ಧನ ನೀಡಿ ಖೂಬಾಗೆ ಸಹಾಯ ಮಾಡಿದ್ದೇನೆ. ಆದರೆ ನಮ್ಮನ್ನು ಸೋಲಿಸಲು ನಮ್ಮ ಕಾರ್ಯಕರ್ತರಿಗೆ ರಾಜೀನಾಮೆ ಕೊಡಿಸಿದ್ದಾರೆ. ಕೇಂದ್ರ ಮಂತ್ರಿಯಾಗಿ ಈ ರೀತಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯದ ಚುನಾವಣಾ ಫಲಿತಾಂಶ ಲೋಕಸಭೆಗೆ ದಿಕ್ಸೂಚಿ ಅಲ್ಲ: ಬಿಎಸ್‍ವೈ

ಎಲ್ಲರಿಗೂ ಕೇಂದ್ರ ಸಚಿವ ಖೂಬಾ ವಿರುದ್ಧ ದೂರು ನೀಡುತ್ತೇನೆ. 30 ಸಾವಿರ ಲೀಡ್ ಬರುತ್ತಿತ್ತು ಆ ರೀತಿ ಕೆಲಸ ಮಾಡಿದ್ದೇನೆ. ನಮ್ಮ ಕಾರ್ಯಕರ್ತರಿಗೆ ಪೋನ್ ಮಾಡಿ ಪ್ರಭು ಚವ್ಹಾಣ್‌ಗೆ ವೋಟ್ ಮಾಡಬೇಡ ಎಂದು ಅವಾಜ್ ಹಾಕುತ್ತಾರೆ ಎಂದು ಪ್ರಭು ಚವ್ಹಾಣ್ ಆರೋಪಿಸಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ 135, ಬಿಜೆಪಿ 65, ಜೆಡಿಎಸ್‌ 20 ಮುನ್ನಡೆ LIVE Updates

Share This Article