ಚುನಾವಣೆ ಫಲಿತಾಂಶ – ಕರ್ನಾಟಕದ ಜನರಿಗಾಗಿ ದೇವಾಲಯದಲ್ಲಿ ಪ್ರಾರ್ಥನೆ ಮಾಡಿದ ಪ್ರಿಯಾಂಕಾ ಗಾಂಧಿ

Public TV
1 Min Read

ಶಿಮ್ಲಾ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ (Karnataka Election Result) ನಡೆಯುತ್ತಿದ್ದು, ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಶನಿವಾರ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ದೇವಾಲಯದಲ್ಲಿ (Temple) ಪ್ರಾರ್ಥನೆ ನಡೆಸಿದ್ದಾರೆ.

ಹಿಮಾಚಲ ರಾಜಧಾನಿ ಶಿಮ್ಲಾದ ಜಖುವಿನಲ್ಲಿ ಹನುಮಾನ್ ದೇವಾಲಯಕ್ಕೆ ತೆರಳಿದ ಪ್ರಿಯಾಂಕಾ ಗಾಂಧಿ, ದೇಶದ ಹಾಗೂ ಕರ್ನಾಟಕದ ಶಾಂತಿ, ಸಮೃದ್ಧಿಗಾಗಿ ಪ್ರಾರ್ಥಿಸಿರುವುದಾಗಿ ತಿಳಿಸಿದ್ದಾರೆ.

ಇದೀಗ ಕರ್ನಾಟಕ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್ ಆರಂಭದಿಂದಲೂ ಮುನ್ನಡೆ ಸಾಧಿಸುತ್ತಿದೆ. ಅಧಿಕಾರದಲ್ಲಿರುವ ಬಿಜೆಪಿ ಮತ್ತು ಜೆಡಿಎಸ್ ಭಾರೀ ಹಿನ್ನಡೆ ಮೂಲಕ ನಷ್ಟ ಅನುಭವಿಸುತ್ತಿದೆ.

224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸ್ವತಂತ್ರ ಸರ್ಕಾರ ರಚಿಸಲಿದೆ ಎಂದು ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ 115, ಬಿಜೆಪಿ 77, ಜೆಡಿಎಸ್‌ 27 ಮುನ್ನಡೆ LIVE Updates

Share This Article