ಮ್ಯಾರೇಜ್ ಆ್ಯನಿವರ್ಸರಿ ದಿನ ಮೊದಲ ಬಾರಿಗೆ ಮಗನ ಮುಖ ರಿವೀಲ್‌ ಮಾಡಿದ ಸೋನಂ ಕಪೂರ್

Public TV
1 Min Read

ಬಾಲಿವುಡ್ (Bollywood) ನಟಿ ಸೋನಂ ಕಪೂರ್ (Sonam Kapoor) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 5 ವರ್ಷಗಳಾಗಿದೆ. ಈ ಖುಷಿಯ ಸಂದರ್ಭದ ವೇಳೆ ಮೊದಲ ಬಾರಿಗೆ ಮಗ ವಾಯು (Vayu) ಮುಖವನ್ನ ನಟಿ ರಿವೀಲ್ ಮಾಡಿದ್ದಾರೆ.

‘ಸಾವರಿಯಾ’ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ಸೋನಂ ಕಪೂರ್ ಅವರು ‘ಐ ಹೇಟ್ ಲವ್ ಸ್ಟೋರಿ’ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. 2018ರಲ್ಲಿ ಉದ್ಯಮಿ ಆನಂದ್ ಅಹುಜಾ ಜೊತೆ ಸೋನಂ ಮದುವೆಯಾದರು. ಇದೀಗ ಮಗ ವಾಯು ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ನಾನ್ ವೆಜ್ ತಿನ್ನಲ್ಲ ಅಂತಾ ಹೇಳಿ ತಗ್ಲಾಕೊಂಡ ರಶ್ಮಿಕಾ ಮಂದಣ್ಣಗೆ ನೆಟ್ಟಿಗರಿಂದ ತರಾಟೆ

ಇಷ್ಟು ದಿನ ಮಗ ವಾಯು ಮುಖ ಎಲ್ಲೂ ಕಾಣದಂತೆ ಕ್ಯಾಮೆರಾ ಕಣ್ಣಿಂದ ದೂರ ಇಟ್ಟಿದ್ದರು ಸೋನಂ. ಆಲಿಯಾ ಭಟ್ ಅವರಂತೆಯೇ ಮಗನ ಫೋಟೋ ಎಲ್ಲೂ ರಿವೀಲ್ ಮಾಡಿರಲಿಲ್ಲ. ಇದೀಗ ತಮ್ಮ ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಗ ವಾಯು ಫೋಟೋ ರಿವೀಲ್ ಮಾಡಿದ್ದಾರೆ.

 

View this post on Instagram

 

A post shared by Sonam Kapoor Ahuja (@sonamkapoor)

ಮ್ಯಾರೇಜ್ ಆ್ಯನಿವರ್ಸರಿ ಖುಷಿಯಲ್ಲಿ ಸೋನಂ ಕಪೂರ್ ವಿಶೇಷ ಫೋಟೋಗಳನ್ನ ಹಂಚಿಕೊಂಡು ಪತಿ ಆನಂದ್‌ಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಈ ಕುರಿತ ಪೋಸ್ಟ್ ಸಖತ್ ಸದ್ದು ಮಾಡ್ತಿದೆ.

Share This Article