ಮಲೇಷಿಯಾದಲ್ಲಿ ರಸ್ತೆ ಅಪಘಾತ- ‘ಪೊನ್ನಿಯನ್ ಸೆಲ್ವನ್ 2’ ಸಿಂಗರ್ ಪ್ರಾಣಾಪಾಯದಿಂದ ಪಾರು

Public TV
1 Min Read

‘ಪೊನ್ನಿಯನ್ ಸೆಲ್ವನ್2′ (Ponniyin Selvan 2) ಸಿನಿಮಾದ ಹಿನ್ನಲೆ ಗಾಯಕಿ ರಕ್ಷಿತಾ ಸುರೇಶ್ (Rakshitha Suresh) ಕಾರು ಅಪಘಾತವಾಗಿದೆ. ಮೇ 7ರಂದು ಬೆಳಿಗ್ಗೆ ರಕ್ಷಿತಾ ಸುರೇಶ್ ಚಲಾಯಿಸುತ್ತಿದ್ದ ಕಾರು, ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಗಾಯಕಿ ರಕ್ಷಿತಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಮಲೇಷಿಯಾದಲ್ಲಿ ನಡೆದಿದೆ. ಗಾಯಕಿ ರಕ್ಷಿತಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಈ ಬಗ್ಗೆ ಸ್ವತಃ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ನನ್ನ ಸಂಪೂರ್ಣ ಜೀವನ ನನ್ನ ಕಣ್ಣು ಮುಂದೆ ಬಂದು ಹೋಯಿತು ಎಂದು ಹೇಳಿದ್ದಾರೆ. ಏರ್‌ಬ್ಯಾಗ್‌ಗಳಿಂದಾಗಿ ಜೀವ ಉಳಿಯಿತು ಎಂದು ಬರೆದುಕೊಂಡಿದ್ದಾರೆ. ಇಂದು ದೊಡ್ಡ ಅಪಘಾತ ಸಂಭವಿಸಿದೆ. ನಾನು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ನಾನು ಪ್ರಯಾಣಿಸುತ್ತಿದ್ದ ಕಾರು ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆಯಿತು. ಕಾರು ಜಖಂಗೊಂಡಿದೆ. ಇಂದು ಬೆಳಿಗ್ಗೆ ಮಲೇಷಿಯಾದಲ್ಲಿ 10 ಸೆಕೆಂಡುಗಳಲ್ಲಿ ನನ್ನ ಇಡೀ ಜೀವನ ನನ್ನ ಮುಂದೆ ಬಂದುಹೋಯಿತು ಎಂದು ಹೇಳಿದ್ದಾರೆ.

ಗಾಯಕಿ ರಕ್ಷಿತಾ, ‘ಏರ್‌ಬ್ಯಾಗ್‌ಗಳಿಗೆ ಧನ್ಯವಾದ, ಇಲ್ಲವಾಗಿದ್ದರೆ ಪರಿಸ್ಥಿತಿ ಕೆಟ್ಟದಾಗಿರುತ್ತಿತ್ತು. ಆ ಘಟನೆ ನೆನೆದರೆ ಇನ್ನೂ ನಡುಕ ಬರುತ್ತದೆ. ಆದರೆ ನಾನು, ಚಾಲಕ ಮತ್ತು ಮುಂದಿನ ಸೀಟಿನಲ್ಲಿ ಕುಳಿತಿದ್ದ ಇತರ ಸಹ-ಪ್ರಯಾಣಿಕರು ಸುರಕ್ಷಿತವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಕೇವಲ ಸಣ್ಣ ಪುಟ್ಟ ಗಾಯಗಳಾಗಿದೆ. ನಾವು ಜೀವಂತವಾಗಿರುವುದಕ್ಕೆ ಅದೃಷ್ಟವಂತರು ಎಂದು ಹೇಳಿದ್ದಾರೆ. ಇದನ್ನೂ ಓದಿ:ಶಿವಣ್ಣ ಅಭಿಮಾನಿಗಳ ಆಕ್ರೋಶಕ್ಕೆ ಮಣಿದು, ಹೇಳಿದ ಮಾತು ಹಿಂಪಡೆದ ಸಂಬರ್ಗಿ

 

View this post on Instagram

 

A post shared by Rakshita Suresh (@rakshitasuresh)

ರಕ್ಷಿತಾ ಸುರೇಶ್ ಅವರು, ತಮಿಳು-ತೆಲುಗು ಮತ್ತು ಹಿಂದಿ ಸಿನಿಮಾಗಳಿಗೆ ಹಾಡುವ ಮೂಲಕ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದಾರೆ. ಪೊನ್ನಿಯನ್ ಸೆಲ್ವನ್ ಚಿತ್ರಕ್ಕೆ ರಕ್ಷಿತಾ ಹಾಡಿರುವ ಸಾಂಗ್ ಸೂಪರ್ ಹಿಟ್ ಆಗಿದೆ.

Share This Article