ಹೆಣ್ಣು ಹೆತ್ತ ಪೋಷಕರಿಗೆ The Kerala Story ಚಿತ್ರ ನೋಡುವಂತೆ ಕಲ್ಲಡ್ಕ ಪ್ರಭಾಕರ್ ಸಲಹೆ

Public TV
2 Min Read

ಮೇ 5ರಂದು ತೆರೆಕಂಡ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಇದೀಗ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ಕೂಡ ಹೆಚ್ಚಾಗುತ್ತಿದೆ. ಮಂಗಳೂರಿನಲ್ಲಿ ಈ ಸಿನಿಮಾ ವೀಕ್ಷಿಸಿ, ಮಾಧ್ಯಮಗಳ ಜೊತೆ ಡಾ.ಕಲ್ಲಡ್ಕ ಪ್ರಭಾಕರ್ ಭಟ್ (Kalladka Prabhakar) ಮಾತನಾಡಿದ್ದಾರೆ. ಹೆಣ್ಣು ಹೆತ್ತ ಪೋಷಕರಿಗೆ ಈ ಸಿನಿಮಾ ನೋಡುವಂತೆ ಸಲಹೆ ನೀಡಿದ್ದಾರೆ.

ಈ ಸಿನಿಮಾವನ್ನು ಪ್ರತಿಯೊಬ್ಬ ಹಿಂದೂ ಹೆಣ್ಣು ಮಗಳು ಕುಟುಂಬದ ಜೊತೆಗೆ ನೋಡಬೇಕು. ಅವರ ಅತೀ ಮತೀಯವಾದ ಮತ್ತು ನಮ್ಮ ಮಕ್ಕಳಿಗೆ ಧರ್ಮದ ತಿಳುವಳಿಕೆ ಇಲ್ಲದಿರೋದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಈ ರೀತಿಯ ಅನ್ಯಾಯವನ್ನು ಜಗತ್ತು ಒಪ್ಪಬಾರದು. ಹೆಣ್ಣು ಮಗಳ ಮೇಲೆ ಅನ್ಯಾಯ ಆದಾಗ ಸಮಾಜ ಸುಮ್ಮನೆ ಕೂರಬಾರದು. ಕಾಂಗ್ರೆಸ್, ಕಮ್ಯುನಿಸ್ಟ್, ಜನತಾದಳ ಈ ಅನ್ಯಾಯಕ್ಕೆ ಪ್ರೇರಣೆ ನೀಡುತ್ತಾರೆ ಎಂದು ಈ ವೇಳೆ ಡಾ.ಕಲ್ಲಡ್ಕ ಪ್ರಭಾಕರ್ ಕಿಡಿಕಾರಿದರು. ಇದನ್ನೂ ಓದಿ:ಡಿವೋರ್ಸ್ ಸುದ್ದಿ ಬೆನ್ನಲ್ಲೇ ‘ಪುಷ್ಪ 2’ ಸಿನಿಮಾದಲ್ಲಿ ನಿಹಾರಿಕಾ ಕೊನಿಡೆಲಾ

ಕೇರಳದಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಹೆಣ್ಣುಮಕ್ಕಳ ಮತಾಂತರ ಆಗಿದೆ. ಮತಾಂತರ ಆದ ಬಳಿಕ ಕ್ರೂರ ರೀತಿಯಲ್ಲಿ ಅತ್ಯಾಚಾರ ಮಾಡಲಾಗಿದೆ. ಈ ಚಿತ್ರ ನೋಡಿ ಹೆಣ್ಣು ಮಕ್ಕಳು ಯೋಚನೆ ಮಾಡಬೇಕು. ತಂದೆ-ತಾಯಿ ಮಕ್ಕಳನ್ನು ಎಚ್ಚರಿಕೆಯಿಂದ ನೋಡಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು. ಪೋಷಕರು ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೇರೆ ಊರಿಗೆ ಕಳುಹಿಸೋವಾಗ ಎಚ್ಚರಿಕೆಯಿಂದ ಇರಬೇಕು. ಮತಾಂತರ ನಿಷೇಧ ಕಾಯಿದೆಯನ್ನು ಬಿಜೆಪಿ ತಂದಿದೆ. ಲವ್ ಜಿಹಾದ್‌ನಲ್ಲಿ ಏನಾಗುತ್ತದೆ ಎಂಬುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಹೆಣ್ಣು ಮಕ್ಕಳು ನಮಗೆ ದೇವಿ -ತಾಯಿಯ ರೀತಿ ಎಂದು ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿದರು. ಈ ಸಿನಿಮಾ ನೋಡಿ ಪೋಷಕರಿಗೆ ಸಲಹೆ ನೀಡಿದರು.

‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ‘ರಣವಿಕ್ರಮ’ ನಟಿ ಆದಾ ಶರ್ಮಾ (Adah Sharma), ಯೋಗಿತಾ, ಸಿದ್ಧಿ, ಸೋನಿಯಾ ಕನ್ನಡದ ನಟ ವಿಜಯ್ ಕೃಷ್ಣ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮೇ 5ರಂದು ತೆರೆಕಂಡ ಈ ಸಿನಿಮಾ 2 ದಿನಗಳಲ್ಲಿ 20 ಕೋಟಿ ಕಲೆಕ್ಷನ್ ಮಾಡಿ ಪ್ರೇಕ್ಷಕರ ಗಮನ ಸೆಳೆದಿದೆ.

Share This Article