ಕನ್ನಡ ವರ್ಷನ್‌ನಲ್ಲಿ ರಿಲೀಸ್ ಮಾಡಲು ನಿರ್ಲಕ್ಷಿಸಿದ ‘ಜವಾನ್’ ಸಿನಿಮಾ ವಿರುದ್ಧ ಕನ್ನಡಿಗರು ಗರಂ

Public TV
2 Min Read

‘ಪಠಾಣ್’ (Pathaan) ಸೂಪರ್ ಸಕ್ಸಸ್ ಬಳಿಕ ‘ಜವಾನ್’ (Jawan) ಆಗಿ ಶಾರುಖ್ ಖಾನ್ ಬರುತ್ತಿದ್ದಾರೆ. ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಜವಾನ್ ಚಿತ್ರ ಕನ್ನಡದಲ್ಲಿ (Kannada) ಮಾತ್ರ ರಿಲೀಸ್ ಆಗುತ್ತಿಲ್ಲ. ಇದೀಗ ಈ  ಬಗ್ಗೆ ಫ್ಯಾನ್ಸ್ (Fans) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡಿಗರು ಜವಾನ್‌ ಚಿತ್ರತಂಡದ ವಿರುದ್ಧ ಗರಂ ಆಗಿದ್ದಾರೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕತ್ರಿನಾ ದಂಪತಿ? ನಟಿ ಸ್ಪಷ್ಟನೆ

ಶಾರುಖ್, ನಯನತಾರಾ (Nayanatara) ನಟನೆಯ ‘ಜವಾನ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ‘ಜವಾನ್’ ಸಿನಿಮಾವು ಸೆಪ್ಟೆಂಬರ್ ಏಳನೇ 7ರಂದು ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಮಲಯಾಳಂ- ಕನ್ನಡ ಭಾಷೆಗಳಲ್ಲಿ ಜವಾನ್ ಸಿನಿಮಾ ಬಿಡುಗಡೆ ಆಗುತ್ತಿಲ್ಲ.

ಸಿನಿಮಾ ಮತ್ತೆ ಮುಂದಕ್ಕೆ ಹೋಗಿದ್ದಕ್ಕೆ ಶಾರುಖ್ ಖಾನ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. 100-200 ರೂ. ಹೆಚ್ಚು ಹಣ ತೆಗೆದುಕೊಳ್ಳಿ ಆದರೆ ಸಿನಿಮಾವನ್ನು ನಾಳೆಯೇ ಬಿಡುಗಡೆ ಮಾಡಿ ಎಂದು ಶಾರುಖ್ ಖಾನ್‌ಗೆ ಟ್ವೀಟ್ ಮಾಡಿರುವ ಅಭಿಮಾನಿ ಒಬ್ಬರಿಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಶಾರುಖ್ ಖಾನ್, 100-200 ರುಪಾಯಿಗೆ ಒಟಿಟಿ ಸಬ್‌ಸ್ಕ್ರಿಪ್ಷನ್ ಬರುವುದಿಲ್ಲ, ಇನ್ನು ನಿನಗೆ ಪೂರ್ತಿ ಸಿನಿಮಾ ನೀಡಬೇಕಾ ಎಂದು ಅಭಿಮಾನಿಯ ಕಾಲೆಳೆದಿದ್ದಾರೆ. ಸಿನಿಮಾವನ್ನು ಕನ್ನಡ ಹಾಗೂ ಮಲಯಾಳಂನಲ್ಲಿ ಡಬ್ ಮಾಡದೇ ಇರುವ ಬಗ್ಗೆಯೂ ನೆಟ್ಟಿಗರು ಕಿಡಿಕಾರಿದ್ದಾರೆ. ಎರಡೂ ಭಾಷೆಗಳನ್ನು ನಿರ್ಲಕ್ಷ್ಯ ಮಾಡಿರುವುದಕ್ಕೆ ಟೀಕೆಗಳು ವ್ಯಕ್ತವಾಗಿವೆ. ಕನ್ನಡದಲ್ಲಿಯೂ(Kannada) ಸಿನಿಮಾವನ್ನು ಡಬ್ (Dub)ಮಾಡುವಂತೆ ಕೆಲವರು ಮನವಿ ಮಾಡಿದ್ದಾರೆ. ಫ್ಯಾನ್ಸ್ ಮನವಿಗೆ ಚಿತ್ರತಂಡ ಓಕೆ ಹೇಳ್ತಾರಾ ಎಂದು ಕಾದುನೋಡಬೇಕಿದೆ.

ಅಟ್ಲಿ ನಿರ್ದೇಶನದ ಜವಾನ್‌ನಲ್ಲಿ ಶಾರುಖ್ ಖಾನ್, ನಯನತಾರಾ, ಹಾಸ್ಯ ನಟ ಯೋಗಿ ಬಾಬು ನಟಿಸಿದ್ದಾರೆ. ತಮಿಳಿನ ಸ್ಟಾರ್ ವಿಜಯ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

Share This Article