ಮಹಾನಗರ ಪಾಲಿಕೆ ಸದಸ್ಯೆಯ ಪತಿ ಹತ್ಯೆ ಪ್ರಕರಣ – ನಾಪತ್ತೆಯಾದ ಐವರ ವಿರುದ್ಧ ಕೇಸ್

By
1 Min Read

ವಿಜಯಪುರ: ಮಹಾನಗರ ಪಾಲಿಕೆ (Municipal Corporation) ಸದಸ್ಯೆಯ ಪತಿ, ರೌಡಿಶೀಟರ್ ಹೈದರ್ ಅಲಿ ನದಾಫ್ ಹತ್ಯೆ (Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವಿರುದ್ಧ ಜಲನಗರ‌ (Jalnagar) ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ನಗರದ ಶೇಖ್ ಅಹ್ಮದ್ ಸುನೇನ್‍ಸಾಬ್ ಮೋದಿ, ಎಸ್.ಎಸ್ ಖಾದ್ರಿ, ತನ್ವೀರ್‌ಪಿರ್, ಇಕ್ಬಾಲ್‍ಪೀರ್ ಪೀರ್‌ಜಾದ್, ವಾಜೀದ್‍ಪೀರ್ ಹಾಗೂ ಶಾನ್‍ವಾಜ್ ದಫೇದಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ತನಿಖೆಯ ನಂತರ ಕೊಲೆಯ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಾಡಹಗಲೇ ಗುಂಡೇಟು – ಮಹಾನಗರ ಪಾಲಿಕೆಯ ಸದಸ್ಯೆಯ ಪತಿಯ ಬರ್ಬರ ಹತ್ಯೆ

ಶನಿವಾರ ಹಾಡ ಹಗಲೇ ದುಷ್ಕರ್ಮಿಗಳು ವಿಜಯಪುರ ನಗರದ ಚಾಂದಪುರ (Chandapura) ಕಾಲೋನಿಯಲ್ಲಿ ಗುಂಡು ಹಾರಿಸಿ ಹೈದರ್ ಅಲಿ ನದಾಫ್‍ನನ್ನು ಹತ್ಯೆಗೈದು ಪರಾರಿಯಾಗಿದ್ದರು. ಆರೋಪಿಗಳು ನದಾಫ್ ಮೇಲೆ ಆರು ಸುತ್ತು ಗುಂಡು ಹಾರಿಸಿದ್ದರು. ಪ್ರಕರಣ ನಡೆದ ಸ್ಥಳಕ್ಕೆ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಆರೋಪಿಗಳ ಬಂಧನಕ್ಕೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದ್ದರು.

ಮೃತನ ಪತ್ನಿ ನಿಶಾತ್ ಹೈದರ್ ನದಾಫ್ ಅವರು ವಿಜಯಪುರದ (Vijayapura) ವಾರ್ಡ್ ನಂಬರ್ 19ರ ಪಾಲಿಕೆ ಸದಸ್ಯೆಯಾಗಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಬೆಂಬಲಿಗನ ಮನೆ ಮೇಲೆ ಐಟಿ ದಾಳಿ

Share This Article