60ಕ್ಕೂ ಹೆಚ್ಚು ಪ್ರಕರಣ- ಯುಪಿಯಲ್ಲಿ ಮತ್ತೊಬ್ಬ ಗ್ಯಾಂಗ್‌ಸ್ಟರ್‌ ಎನ್‍ಕೌಂಟರ್

Public TV
1 Min Read

ಲಕ್ನೋ: 60ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದ ಗ್ಯಾಂಗ್‌ಸ್ಟರ್‌ನನ್ನು ಉತ್ತರಪ್ರದೇಶದ (Uttar Pradesh) ವಿಶೇಷ ಪೊಲೀಸ್ ಪಡೆ (STF) ಎನ್‍ಕೌಂಟರ್‌ನಲ್ಲಿ (Encounter) ಹೊಡೆದುರುಳಿಸಿದೆ.

ದೆಹಲಿಯ ನೋಯ್ಡಾ, ಘಾಜಿಯಾಬಾದ್ ಮತ್ತು ಇತರ ಪ್ರದೇಶಗಳಲ್ಲಿ ಜನರನ್ನು ಭಯಭೀತರನ್ನಾಗಿಸಿ ದರೋಡೆಯಲ್ಲಿ ಕುಖ್ಯಾತಿ ಪಡೆದಿದ್ದ ಅನಿಲ್ ದುಜಾನಾ ಸಾವಿಗೀಡಾದ ವ್ಯಕ್ತಿ. ದುಜಾನಾ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ವಾರದ ಹಿಂದೆಯಷ್ಟೇ ಜೈಲಿನಿಂದ (Jail) ಬಿಡುಗಡೆಯಾಗಿದ್ದ. ನಂತರ ಅವನು ತನ್ನ ವಿರುದ್ಧ ದಾಖಲಾದ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬನಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದ. ಅಲ್ಲದೆ ಸಾಕ್ಷಿಯನ್ನು ಕೊಲ್ಲಲು ನಿರ್ಧರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಯಾವುದೇ ಸಮಸ್ಯೆ ಇದ್ದಲ್ಲಿ ಕೆಳ ನ್ಯಾಯಾಲಯಕ್ಕೆ ಹೋಗಿ: ಕುಸ್ತಿಪಟುಗಳಿಗೆ ಸುಪ್ರೀಂ ಸೂಚನೆ

ಈ ವಿಚಾರ ತಿಳಿದು ಎಸ್‍ಟಿಎಫ್ (STF) ತಂಡವು ಮೀರತ್‍ನಲ್ಲಿ (Meerut) ಅವನನ್ನು ಬಂಧಿಸಲು ತೆರಳಿತ್ತು. ಈ ವೇಳೆ ಪೊದೆಯಲ್ಲಿ ಅಡಗಿದ್ದ ದುಜಾನಾ ಮತ್ತು ಅವನ ಗ್ಯಾಂಗ್ ಪೊಲೀಸರ ಮೇಲೆ ಗುಂಡು ಹಾರಿಸಿದೆ. ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ದುಜಾನ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕಿರುಕುಳ – ವಿಡಿಯೋ ವೈರಲ್ ಬೆನ್ನಲ್ಲೇ ಪೇದೆ ಅಮಾನತು

Share This Article