ಸ್ಕಾರ್ಪಿಯೋ ಕಾರಿನಲ್ಲಿ ವಿಶ್ವಪರ್ಯಟನೆಗೆ ಮಂದಾದ ಪುತ್ತೂರಿನ ಯುವಕ

Public TV
1 Min Read

75 ರಾಷ್ಟ್ರಗಳನ್ನ ಏಕಾಂಗಿಯಾಗಿ ಸಂಚರಿಸಲಿರೋ ಮುಹಮ್ಮದ್

ಬೆಂಗಳೂರು: ಸ್ಕಾರ್ಪಿಯೋ ಕಾರಿನಲ್ಲೇ (Scorpio Car) ವಿಶ್ವಪರ್ಯಟನೆಗೆ ಪುತ್ತೂರಿನ (Puttur) ಯುವಕ ಮುಂದಾಗಿದ್ದಾರೆ. ಕರ್ನಾಟಕದಿಂದ ಲಂಡನ್‌ವರೆಗೂ (Karnataka To London) ಯುವಕ ವಿಶ್ವಪರ್ಯಟನೆ ಮಾಡಲಿದ್ದಾರೆ.

ಮುಹಮ್ಮದ್ ಸಿನಾನ್ ಎಂಬ ಯುವಕ ಹೊಸ ಚರಿತ್ರೆ ಸೃಷ್ಟಿಸಲು ಮುಂದಾಗಿದ್ದು, ಬೈ ರೋಡ್ ಕಾರಿನಲ್ಲಿ 75 ರಾಷ್ಟ್ರಗಳನ್ನ ಏಕಾಂಗಿಯಾಗಿ ಸಂಚರಿಸಲು ನಿರ್ಧರಿಸಿದ್ದಾರೆ. ಇದೇ ತಿಂಗಳು 29 ರಿಂದ ಕರ್ನಾಟಕದಿಂದ ಲಂಡನ್‌ವರೆಗೂ ಪರ್ಯಟನೆ ಆರಂಭ ಆಗಲಿದೆ. ಇದನ್ನೂ ಓದಿ: ವಿನಾಶ ಕಾಲದಲ್ಲಿ ಕಾಂಗ್ರೆಸ್‌ಗೆ ವಿಪರೀತ ಬುದ್ಧಿ: ಸದಾನಂದ ಗೌಡ ವಾಗ್ದಾಳಿ

ಕನ್ನಡ ನಾಡಿನ ಆಚಾರ-ವಿಚಾರ, ಸಂಸ್ಕೃತಿ ಮತ್ತು ಹಿರಿಮೆಯನ್ನ ಸಾರುವ ಉದ್ದೇಶದಿಂದ ಈ ಸಂಚಾರ ಆರಂಭಿಸಲಾಗಿದೆಯಂತೆ. ಸುಮಾರು 2 ವರ್ಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಕಿ.ಮೀ ವರೆಗೂ 75 ದೇಶಗಳನ್ನ ಸುತ್ತಲಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಇರುವ ಕನ್ನಡಿಗರನ್ನ ಭೇಟಿ ಮಾಡಿ ಕನ್ನಡಿನ ಹಿರಿಮೆಯನ್ನ ಸಾರಲಿದ್ದಾರೆ. ಇದೇ ತಿಂಗಳ 29 ರಿಂದ‌ ಮಂಗಳೂರಿನ ಮೂಲಕ ದುಬೈ ತಲುಪಿ ಅಲ್ಲಿಂದ ಬೇರೆ ಬೇರೆ ರಾಷ್ಟ್ರಗಳಿಗೆ ಸಂಚರಿಸಲಿದ್ದಾರೆ.

ಮುಹಮ್ಮದ್ ಸಿನಾನ್ ಇಂಟಿರಿಯರ್‌ ಡಿಸೈನರ್ ಆಗಿದ್ದು, ಯುಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೇರೆ ರಾಜ್ಯದವರು ಈ ರೀತಿ ಕಾರಿನಲ್ಲಿ ವಿಶ್ವಪರ್ಯಟನೆ ಮಾಡುವುದನ್ನ ನೋಡಿ ತಾನೂ ಈ ನಿರ್ಧಾರ ಮಾಡಿದ್ದರಂತೆ. ಇದನ್ನೂ ಓದಿ: ಬಜರಂಗ ಬಲಿ ಕೀ ಜೈ ಘೋಷಣೆ ಮಾಡಿ ತುಳುವಿನಲ್ಲಿ ಭಾಷಣ ಮಾಡಿದ ಮೋದಿ

2018 ರಲ್ಲೇ ವಿಶ್ವಪರ್ಯಟನೆಗೆ ಪ್ಲ್ಯಾನ್ ಮಾಡಿದ್ದೆ. ಆದರೆ ಕೊರೊನಾದಿಂದ ಸಾಧ್ಯ ಆಗಿರಲಿಲ್ಲ.‌ ಈಗ ಸಾಧ್ಯ ಆಗಿದ್ದು, ಕರ್ನಾಟಕ ಮತ್ತು ಭಾರತದ ಪ್ರವಾಸೋದ್ಯಮವನ್ನ ಉತ್ತೇಜನ ಮಾಡೋದು ನನ್ನ ಉದ್ದೇಶ ಆಗಿದೆ‌. ಇದಕ್ಕೆ 1 ಕೋಟಿ ಖರ್ಚಾಗಲಿದೆ ಎಂದು ಮುಹಮ್ಮದ್‌ ತಿಳಿಸಿದ್ದಾರೆ.

Share This Article