ರಶ್ಮಿಕಾಳನ್ನ ನೋಡಲು ಒಬ್ಬಳೇ ಓಡೋಡಿ ಬಂದ ತಂಗಿ ಶಿಮನ್ ಮಂದಣ್ಣ

By
1 Min Read

ಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸದ್ಯ ‘ರೈನ್‌ಬೋ’ (Rainbow) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ನಡುವೆ ಅಕ್ಕನನ್ನು ನೋಡಲು ತಂಗಿ ಶಿಮನ್ ಓಡೋಡಿ ಬಂದಿದ್ದಾರೆ. ಈ ಬಗ್ಗೆ ನಟಿ ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಪುಷ್ಪ 2’ (Pushpa 2) ಸಿನಿಮಾ ಬಳಿಕ ಫೀಮೇಲ್ ಓರಿಯೆಂಟೆಡ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ನಟ ದೇವ್ ಮೋಹನ್ ಜೊತೆ ಶ್ರೀವಲ್ಲಿ ಆಕ್ಟ್ ಮಾಡ್ತಿದ್ದಾರೆ. ಸಿನಿಮಾ ಮತ್ತು ಆ್ಯಡ್ ಶೂಟ್‌ಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಊರ್ವಶಿ ರೌಟೇಲಾ ತೊಟ್ಟ ಬಟ್ಟೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ.!

ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಿರುವ ರಶ್ಮಿಕಾಳನ್ನ ಮುದ್ದು ತಂಗಿ ಶಿಮನ್ (Shiman Mandanna) ಮಿಸ್ ಮಾಡಿಕೊಂಡಿದ್ದಾರೆ. ರೈನ್‌ಬೋ ಸಿನಿಮಾ ತಂಡದ ಶ್ರಮದ ಬಗ್ಗೆ ಚಿತ್ರದ ಶೂಟಿಂಗ್ ಬಗ್ಗೆ ಅಪ್‌ಡೇಟ್ ನೀಡಿರೋ ಶ್ರೀವಲ್ಲಿ, ನನ್ನ ಕೆಲಸ ನೋಡಲು ನನ್ನ ತಂಗಿ ಶಿಮನ್ ಮಂದಣ್ಣ ಚೆನ್ನೈಗೆ (Chennai) ಒಬ್ಬಳೇ ಎಂದು ರಶ್ಮಿಕಾ ಮಂದಣ್ಣ ತಿಳಿಸಿದ್ದಾರೆ.

ತಂಗಿ ಶಿಮನ್‌ನನನ್ನು ಕರೆದುಕೊಮಡು ಹೋಗಲು ಅಮ್ಮಾ ಕೂಡ ಚೆನ್ನೈಗೆ ಬಂದಿದ್ದರು. ಈ ಹ್ಯಾಪಿ ಮೂಮೆಂಟ್‌ನಲ್ಲಿ ತೆಗೆದ ಫೋಟೋ ಎಂದು ಕೆಲ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.

ಸದ್ಯ ರಶ್ಮಿಕಾ ಕೈಯಲ್ಲಿ, ಪುಷ್ಪ 2, ಅನಿಮಲ್, ರೈನ್‌ಬೋ, ನಿತಿನ್ ಜೊತೆಗಿನ ಹೊಸ ಸಿನಿಮಾ, ವಿಕ್ಕಿ ಕೌಶಲ್ ಜೊತೆ ‘ಚವಾ’ ಸಿನಿಮಾಗಳಿವೆ. ಈ ವರ್ಷ ಒಂದೊಂದೇ ಸಿನಿಮಾ ತೆರೆಗೆ ಬರಲಿದೆ.

Share This Article