ಸ್ಮಾರ್ಟ್ ಕ್ಲಾಸ್‍ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ಶೋ- ಶಿಕ್ಷಕ ಅರೆಸ್ಟ್

Public TV
1 Min Read

ಚಂಡೀಗಢ: ಶಾಲೆಯೊಂದರ ಸ್ಮಾರ್ಟ್ ಕ್ಲಾಸ್‍ನ ಎಲ್‍ಸಿಡಿ ಪರದೆ ಮೇಲೆ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋವನ್ನು (Obscene Video) ತೋರಿಸಿದ ಶಿಕ್ಷಕನನ್ನು ಪಂಜಾಬ್ (Punjab) ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ರಾಜೀವ್ ಶರ್ಮಾ ಎಂದು ಗುರುತಿಸಲಾಗಿದೆ. ಆರೋಪಿ ಗೋಬಿಂದಪುರ ಮೊಹಲ್ಲಾದ (Gobindpura Mohalla) ಸರ್ಕಾರಿ ಮಿಡಲ್ ಸ್ಮಾರ್ಟ್ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಆತ ಆರನೇ ತರಗತಿಯ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿದ್ದ. ಅಲ್ಲದೆ ಅಸಭ್ಯವಾಗಿ ಸನ್ನೆ (Vulgar Gestures) ಮಾಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಅಲ್‍ಖೈದಾ ಜೊತೆ ನಂಟು ಶಂಕೆ – ಶಂಕಿತ ಭಯೋತ್ಪಾದಕನ ಸೆರೆ

ಶಾಲಾ ಬಾಲಕಿಯೊಬ್ಬಳ ತಂದೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಮೇಲೆ ಪೋಕ್ಸೊ (POCSO) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಸತ್ನಾಂಪುರನ (Satnampura) ಠಾಣಾಧಿಕಾರಿ ಗುರಿಂದರ್ಜಿತ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಮೊದಲ ಕೇಬಲ್ ರೈಲ್ವೇ ಸೇತುವೆ ಪೂರ್ಣ – ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ

Share This Article