ಓಲ್ಡ್ ಮೈಸೂರೇ ಮೋದಿ ಟಾರ್ಗೆಟ್- ಒಂದೇ ದಿನ 4 ಜಿಲ್ಲೆಗಳಲ್ಲಿ ನಮೋ ಮಿಂಚಿನ ಸಂಚಾರ

Public TV
1 Min Read

ಮೈಸೂರು: ಹಳೇ ಮೈಸೂರಿ (Old Mysuru) ನ ನಾಲ್ಕು ಜಿಲ್ಲೆಗಳಲ್ಲಿ ಮೋದಿ ಇವತ್ತು (ಭಾನುವಾರ) ಮಿಂಚಿನ ಸಂಚಾರ ನಡೆಸಲಿದ್ದಾರೆ. ಅಮಿತ್ ಶಾ (Amitshah) ಬಂದು ಹೋದ ಬಳಿಕ ಓಲ್ಡ್ ಮೈಸೂರಿಗೆ ಮೋದಿ ಎಂಟ್ರಿಯಾಗ್ತಿದ್ದು, ಕೋಲಾರ, ಚನ್ನಪಟ್ಟಣ, ಬೇಲೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಸಂಜೆ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಅದ್ಧೂರಿ ರೋಡ್ ಶೋ ಮಾಡಲಿದ್ದು, ಮೈಸೂರು ಕರ್ನಾಟಕ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ಮತಬೇಟೆ ಮಾಡಲಿದ್ದಾರೆ. ಜೆಡಿಎಸ್ (JDS) ಭದ್ರ ಕೋಟೆಗಳಲ್ಲಿ ನಮೋ ಭರ್ಜರಿ ಕ್ಯಾಂಪೇನ್ ಮಾಡಲಿದ್ದು, ಜೆಡಿಎಸ್ ಕೋಟೆಗಳಲ್ಲಿ ಬಿಜೆಪಿ ಮತಕೀಳಲು ಮೋದಿ (Narendra Modi) ರಣತಂತ್ರ ನಡೆಸಲಿದ್ದಾರೆ. ಇದನ್ನೂ ಓದಿ: ಜೆ.ಪಿ.ನಡ್ಡಾ ರೋಡ್ ಶೋನಲ್ಲಿ ಜೂನಿಯರ್ ಮೋದಿ ಮೋಡಿ

50:50 ಇರೋ ಕ್ಷೇತ್ರಗಳಲ್ಲಿ ಮೋದಿ ಸೂತ್ರದ ಮೂಲಕ ಗೆಲ್ಲಲು ಬಿಜೆಪಿ (BJP) ತಂತ್ರ ನಡೆಸಿದ್ದು, ಓಲ್ಡ್ ಮೈಸೂರಿನಲ್ಲಿ ಸದ್ಯ ಬಿಜೆಪಿ ಬಲ 11 ಕ್ಷೇತ್ರ ಮಾತ್ರ. ಈ ಸಲ ಟಾರ್ಗೆಟ್ 25 ಟಾಸ್ಕ್ ಇಟ್ಟುಕೊಂಡು ಬಿಜೆಪಿಯಿಂದ ನಾನಾ ತಂತ್ರಗಾರಿಕೆ ಪ್ರಯೋಗ ನಡೆಸಲಿದ್ದಾರಂತೆ. ಚುನಾವಣೆ ಸಮೀಪ ಬಂದಾಗ ಮೈಸೂರು ಕರ್ನಾಟಕ ಅಖಾಡಗಳಲ್ಲಿ ಮೋದಿಯೇ ಬಿಜೆಪಿ ಟ್ರೆಂಡ್ ಚೇಂಜರ್ ಮಾಡಲಿದ್ದು, ಆ ಮೂಲಕ ಹಳೇ ಮೈಸೂರಿನಲ್ಲಿ ಮೋದಿ ಪ್ರಚಾರದ ಮೂಲಕ ಪಿಕ್ಚರ್ ಅಭಿ ಬಾಕಿ ಹೈ ಎಂಬ ಸಂದೇಶ ರವಾನಿಸಲಿದ್ದಾರೆ.

Share This Article