ಕರಾವಳಿ ಬೆಡಗಿ ಕೃತಿ ಶೆಟ್ಟಿ (Krithi Shetty) ಸೌತ್ ಸಿನಿಮಾ ರಂಗದಲ್ಲಿ ಸಖತ್ ಬೇಡಿಕೆ ಇರುವ ನಟಿ. ಸ್ಟಾರ್ ನಟರಿಗೆ ನಾಯಕಿಯಾಗುತ್ತಿರುವ ಕೃತಿ ಇದೀಗ ಸಿನಿಮಾವೊಂದರಲ್ಲಿ ಬಿಕಿನಿ ತೊಡಲು ದುಬಾರಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರೆ.
10ನೇ ವಯಸ್ಸಿಗೆ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದ ಕೃತಿ ಶೆಟ್ಟಿ, 17ನೇ ವಯಸ್ಸಿಗೆ ಹೃತಿಕ್ ರೋಷನ್ (Hrithik Roshan) ನಟನೆಯ ‘ಸೂಪರ್ 30’ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದರು. ಮೊದಲ ಚಿತ್ರ ‘ಉಪ್ಪೇನ’ ಮತ್ತು ‘ಬಂಗಾರ್ರಾಜು’ ಸಿನಿಮಾ ಗೆಲ್ತಿದ್ದಂತೆ ತಮ್ಮ ಸಂಭಾವನೆಯನ್ನ ಏರಿಸಿದ್ದರು. ಆ ನಂತರ ನಟಿಸಿದ ಕೆಲ ಚಿತ್ರಗಳು ಗೆಲ್ಲಾಪೆಟ್ಟಿಗೆ ಕಲೆಕ್ಷನ್ ಮಾಡೋದರಲ್ಲಿ ಸೋತಿತ್ತು. ಇದನ್ನೂ ಓದಿ:ಸೀರೆಯುಟ್ಟು ಮಿಂಚಿದ ನಿವೇದಿತಾಗೆ ರಾ ರಾ ನಾಗವಲ್ಲಿ ಎಂದ ನೆಟ್ಟಿಗರು
ತಮಿಳಿನ ಸಿನಿಮಾವೊಂದರಲ್ಲಿ (Tamil Film) ಕೃತಿ ಶೆಟ್ಟಿಗೆ ಬಿಕಿನಿ ತೊಡುವಂತೆ ಸಲಹೆ ನೀಡಿದ್ದಾರಂತೆ. ಪ್ರೇಕ್ಷಕರಿಗೆ ಗ್ಲಾಮರ್ ಡೋಸ್ ನೀಡಲು ಬಿಕಿನಿ ತೊಟ್ಟರೆ ಒಳ್ಳೆಯದೆಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇದೂವರೆಗೂ ಕೃತಿ ಶೆಟ್ಟಿ ಬಿಕಿನಿ ತೊಟ್ಟಿಲ್ಲ. ಈ ಕಾರಣಕ್ಕೆ ಕೃತಿ ಬಿಕಿನಿ ತೊಟ್ಟರೆ, ಈ ಸಿನಿಮಾ ಮತ್ತಷ್ಟು ಬೂಸ್ಟ್ ಸಿಗುತ್ತೆ ಎಂದು ಚಿತ್ರತಂಡ ಲೆಕ್ಕಾಚಾರ ಹಾಕಿದೆ.
ಕರಾವಳಿ ಬ್ಯೂಟಿ ಕೃತಿ ಕೂಡ ಬಿಕಿನಿ ಧರಿಸಲು ಓಕೆ ಎಂದಿದ್ದಾರೆ. ಬಿಕಿನಿ ಧರಿಸೋಕೆ 5 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಚಿತ್ರತಂಡ ಕೂಡ ಕೃತಿ ಮಾತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ನಟಿ, ಈಗ 5 ಕೋಟಿ ರೂಪಾಯಿ ಚಾರ್ಜ್ ಮಾಡಿರೋದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.