ಸಿಟಾಡೆಲ್ ಶೂಟಿಂಗ್ ಗಾಗಿ ವಿಮಾನ ಏರಿದ ಸಮಂತಾ

Public TV
1 Min Read

ಮಂತಾ (Samantha) ನಟನೆಯ ‘ಶಾಕುಂತಲಂ’ (Shakunthalam) ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಅಷ್ಟೇನೂ ಕಮಾಲ್ ಮಾಡಲಿಲ್ಲ. ಐವತ್ತು ಕೋಟಿ ವೆಚ್ಚದಲ್ಲಿ ತಯಾರಾದ ಈ  ಸಿನಿಮಾ  ನಿರ್ಮಾಪಕರಿಗೆ ಹಣ ತಂದುಕೊಡಲಿಲ್ಲ. ಹಾಗಾಗಿ ಮತ್ತೆ ಸಮಂತಾ ವಿರುದ್ಧ ಟ್ರೋಲ್ ಹಾವಳಿ ಹೆಚ್ಚಾಗಿದೆ. ಸಮಂತಾ ವಿರುದ್ಧ ನೆಗೆಟಿವ್ ಕಾಮೆಂಟ್ ಕೂಡ ಬರೆಯುತ್ತಿದ್ದಾರೆ. ಇದೆಲ್ಲದನ್ನೂ ತಲೆ ಕೆಡಿಸಿಕೊಳ್ಳದೇ ಸಮಂತಾ ಮುಂದಿನ ಪ್ರಾಜೆಕ್ಟ್ ಬಗ್ಗೆ ಗಮನ ಕೊಟ್ಟಿದ್ದಾರೆ.

ಸಮಂತಾ ಕನಸಿನ ಪ್ರಾಜೆಕ್ಟ್ ಸಿಟಾಡೆಲ್ (Citadel) ವೆಬ್ ಸೀರಿಸ್ (Web Series) ಶೂಟಿಂಗ್ ಇನ್ನೇನು ಶುರುವಾಗಲಿದೆ. ಈ ವೆಬ್ ಸರಣಿಯ ಚಿತ್ರೀಕರಣಕ್ಕೆ ವಿದೇಶದಲ್ಲಿ ನಡೆಯಲಿದೆ. ಹಾಗಾಗಿ ಅವರು ವಿಮಾನ ಏರಿದ್ದಾರೆ. ತಾವು ವಿದೇಶ ಪ್ರಯಾಣವನ್ನು ಮಾಡುತ್ತಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ತೆಲುಗು ಸಿನಿಮಾ ರಂಗದಲ್ಲೇ ಇನ್ನೂ ಹತ್ತು ವರ್ಷ ಪ್ರಶಾಂತ್ ನೀಲ್ ಲಾಕ್?

ಸಿಟಾಡೆಲ್ ರಾಜ್ ಮತ್ತು ಡಿಕೆ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವೆಬ್ ಸಿರೀಸ್. ವರುಣ್ ಧವನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸರಣಿಯಲ್ಲಿ ಸಮಂತಾ ವಿಶೇಷ ಪಾತ್ರವನ್ನು ಮಾಡಲಿದ್ದಾರೆ. ಈ ಪಾತ್ರಕ್ಕಾಗಿ ಅವರು ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಭಾರೀ ಬಜೆಟ್ ನಲ್ಲಿ ಈ ವೆಬ್ ಸಿರೀಸ್ ಮೂಡಿ ಬರಲಿದೆ. ಈ ನಡುವೆ ಮತ್ತೊಂದು ಹೊಸ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದರು. ಅದರ ಮಾಹಿತಿಯನ್ನು ಸದ್ಯದಲ್ಲೇ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Share This Article