ಜ್ಯೂ.ಎನ್‌ಟಿಆರ್ ಎದುರು ಅಬ್ಬರಿಸಲಿದ್ದಾರೆ ಸೈಫ್ ಅಲಿ ಖಾನ್

By
1 Min Read

ರಾಜಮೌಳಿ ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ NTR 30 ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಸಿನಿಮಾದಲ್ಲಿ ತಾರಕ್ ಆಕ್ಟ್ ಮಾಡ್ತಿದ್ದಾರೆ. ಎನ್‌ಟಿಆರ್ 30 ಸಿನಿಮಾಗೆ ಈಗ ಬಾಲಿವುಡ್ ಸ್ಟಾರ್ ನಟನ ಎಂಟ್ರಿಯಾಗಿದೆ. ತಾರಕ್ ಎದುರು ಅಬ್ಬರಿಸೋಕೆ ಸೈಫ್ ಅಲಿ ಖಾನ್ (Saif Ali Khan) ಸಜ್ಜಾಗಿದ್ದಾರೆ.

ವರ್ಷಕ್ಕೆ ಒಂದೇ ಸಿನಿಮಾ ಮಾಡಿದ್ರು ಜನರ ಮನಸ್ಸಿನಲ್ಲಿ ತಾವು ಉಳಿಯಬೇಕು ಎಂಬುದನ್ನ ತಾರಕ್ ರೂಡಿಸಿಕೊಂಡಿದ್ದಾರೆ. ಆರ್‌ಆರ್‌ಆರ್ ಸಿನಿಮಾ ಬಳಿಕ ಚಿತ್ರದ ಸೆಲೆಕ್ಷನ್‌ನಲ್ಲಿ ಮತ್ತಷ್ಟು ಸೆಲೆಕ್ಟೀವ್ ಆಗಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಟಾಪ್ ಸ್ಟಾರ್‌ಗಳಲ್ಲಿ ಒಬ್ಬರಾಗಿ ಮಿಂಚ್ತಿದ್ದಾರೆ. ಇದನ್ನೂ ಓದಿ:ಸಮಂತಾ ಮುಖ ಕಿತ್ತು ಹೋಗಿದೆ, ದುಡ್ಡಿಗಾಗಿ ಅರೆಬೆತ್ತಲೆ ಕುಣಿಯುತ್ತಾಳೆ ಎಂದು ಕುಟುಕಿದ ನಿರ್ಮಾಪಕ

ಎನ್‌ಟಿಆರ್ 30 ಚಿತ್ರದಲ್ಲಿ ಭಿನ್ನವಾಗಿ ತಾರಕ್ ಕಾಣಿಸಿಕೊಳ್ತಿದ್ದಾರೆ. ಡಬಲ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಸಾಥ್ ನೀಡಿರುವ ಬೆನ್ನಲ್ಲೇ ಮತ್ತೋರ್ವ ಬಾಲಿವುಡ್ ಸ್ಟಾರ್ ನಟನ ಆಗಮನವಾಗಿದೆ. ತಾರಕ್‌ಗೆ ವಿಲನ್ ಆಗಿ ಸೈಫ್ ಅಲಿ ಖಾನ್ ಅಬ್ಬರಿಸುತ್ತಿದ್ದಾರೆ.

ಈಗಾಗಲೇ ಮೊದಲ ಹಂತದ ಶೂಟಿಂಗ್  ಹೈದರಾಬಾದ್‌ನಲ್ಲಿ ನಡೆದಿದ್ದು, ಎರಡು- ಮೂರನೇ ಹಂತದ ಶೂಟಿಂಗ್‌ನಲ್ಲಿ ಸೈಫ್ ಅಲಿ ಖಾನ್ ಭಾಗಿಯಾಗುತ್ತಿದ್ದಾರೆ. ಡಿಫರೆಂಟ್ ಶೇಡ್‌ನಲ್ಲಿ ಮಿಂಚಲಿದ್ದಾರೆ.

ಜ್ಯೂ.ಎನ್‌ಟಿಆರ್ ಲಿಸ್ಟ್‌ನಲ್ಲಿ ಕೊರಟಾಲ ಶಿವ ನಿರ್ದೇಶನದ ಎನ್‌ಟಿಆರ್ 30, ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಚಿತ್ರ, ಹೃತಿಕ್ ರೋಷನ್ ಜೊತೆ ಬಾಲಿವುಡ್‌ನ ‘ವಾರ್ 2’ ಸಿನಿಮಾಗಳಿವೆ.

Share This Article