KGF 2 ಸೆಟ್‌ನಲ್ಲಿ ರಾಕಿ- ರಾಧಿಕಾ ಭೇಟಿ, ವಿಶೇಷ ವೀಡಿಯೋ ಹಂಚಿಕೊಂಡ ನಟಿ

Public TV
1 Min Read

ಭಾರತೀಯ ಸಿನಿಮಾರಂಗದಲ್ಲಿ ದಾಖಲೆ ಬರೆದ ಸಿನಿಮಾ ಕೆಜಿಎಫ್ 2ಗೆ ಏ.14ಕ್ಕೆ ಒಂದು ವರ್ಷದ ಸಂಭ್ರಮ. ಹೊಂಬಾಳೆ ಸಂಸ್ಥೆ ಕಡೆಯಿಂದ ಪಾರ್ಟ್ 3 (KGF 3) ಬಗ್ಗೆ ಅಪ್‌ಡೇಟ್ ನೀಡಿದ್ದರೆ, ಯಶ್‌ ಪತ್ನಿ ರಾಧಿಕಾ ಪಂಡಿತ್ (Radhika Pandit) ಅವರು ರಾಕಿ ಜೊತೆಗಿನ ವೀಡಿಯೋ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಕೆಜಿಎಫ್ 2 (KGF 2) ಸೆಟ್‌ಗೆ ಆಗಮಿಸಿದ ಹಳೆಯ ವೀಡಿಯೋವನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: KGF 2ಗೆ 1 ವರ್ಷ- ಪಾರ್ಟ್ 3 ಬಗ್ಗೆ ಸಿಹಿಸುದ್ದಿ ಕೊಟ್ಟ ಹೊಂಬಾಳೆ ಫಿಲ್ಮ್ಸ್

ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ‘ಕೆಜಿಎಫ್ 2’ ಚಿತ್ರ ರಿಲೀಸ್ ಆಗಿ ಈ ಏ.14ಕ್ಕೆ ಒಂದು ವರ್ಷ ಪೂರೈಸಿದೆ. ರಾಕಿ ಭಾಯ್- ರೀನಾ ಜೋಡಿ, ಸಂಜಯ್ ದತ್- ರಾಕಿ ಕಾಳಗ, ರವೀನಾ ಟಂಡನ್ ನಟನೆ ಇವೆಲ್ಲವೂ ಸಿನಿಮಾಗೆ ಸಕ್ಸಸ್‌ಗೆ ಪ್ಲಸ್ ಆಗಿತ್ತು. ಹೊಂಬಾಳೆ ಸಂಸ್ಥೆ ಕೂಡ ಈ ಸಿನಿಮಾವನ್ನ ಅದ್ದೂರಿ ನಿರ್ಮಾಣ ಮಾಡಿ, ಕೋಟಿ ಕೋಟಿ ಗಲ್ಲಾಪೆಟ್ಟಿಗೆಯಲ್ಲಿ ಲೂಟಿ ಮಾಡಿತ್ತು.

ಈ ಸಿನಿಮಾದ ಮೊದಲ ಭಾಗ ಬಂದಿದ್ದು, 2018ರಲ್ಲಿ. ನಾಲ್ಕು ವರ್ಷಗಳ ಗ್ಯಾಪ್ ಬಳಿಕ ಎರಡನೇ ಚಾಪ್ಟರ್ ಬಂತು. ಈ ಸಿನಿಮಾ ಕೆಲಸ ವಿಳಂಬ ಆಗಲು ಕೊವೀಡ್ ಕೂಡ ಕಾರಣ ಆಗಿತ್ತು. ಅದೇನೆ ಇದ್ದರೂ ಸಿನಿಮಾ ರಿಲೀಸ್ ಆಗಿ ಮಾಡಿದ ದಾಖಲೆಗಳು ಹಲವು. ‘ಕೆಜಿಎಫ್ 2’ ಸೆಟ್‌ನಲ್ಲಿ ಯಾವ ರೀತಿಯ ಮೂಡ್ ಇತ್ತು ಎಂಬುದನ್ನು ತೋರಿಸಲು ರಾಧಿಕಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಯಶ್ ಅವರು ರಾಕಿ ಪಾತ್ರಕ್ಕಾಗಿ ರೆಡಿ ಆಗಿದ್ದರು. ಈ ವೇಳೆ ಅಲ್ಲಿಗೆ ರಾಧಿಕಾ ಪಂಡಿತ್ ಬರುತ್ತಾರೆ. ನಾನು 70ರ ದಶಕದಲ್ಲಿದ್ದೀನಿ. ಸಖತ್ ಆಗಿದೆ ನಿಮ್ಮ ಲುಕ್ ಎಂದು ರಾಧಿಕಾ ಪಂಡಿತ್ ಅವರು ವಿಡಿಯೋದಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ‘ರಾಕಿನ ರಾಧಿಕಾ ಭೇಟಿ ಮಾಡಿದಾಗ’ ಎನ್ನುವ ಅಡಿಬರಹನೀಡಲಾಗಿದೆ. ಅಭಿಮಾನಿಗಳು ಈ ವಿಡಿಯೋನ ಇಷ್ಟಪಟ್ಟಿದ್ದಾರೆ.

Share This Article