ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪವನ್ ಕಲ್ಯಾಣ್ ಪುತ್ರ

By
1 Min Read

ಸೂಪರ್ ಸ್ಟಾರ್ ಪವನ್ ಕಲ್ಯಾಣ್ (Pawan Kalyan) ಚಿತ್ರರಂಗ- ರಾಜಕೀಯ (Politics) ಎರಡು ಕ್ಷೇತ್ರದಲ್ಲೂ ಆಕ್ಟೀವ್ ಆಗಿದ್ದಾರೆ. ಇದೀಗ ಪವನ್ ಕಲ್ಯಾಣ್ ಪುತ್ರ ಚಿತ್ರರಂಗಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಹೀರೋ ಆಗಿ ಅಲ್ಲ.

ಪವನ್ ಕಲ್ಯಾಣ್‌ಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಜನಸೇವೆ ಮಾಡೋದರ ಜೊತೆ ಸಿನಿಮಾ ಕೆಲಸಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡುತ್ತಾರೆ. ಸಾಲು ಸಾಲು ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಸದ್ಯ ಟಿಟೌನ್ ಗಲ್ಲಿಯಿಂದ ಶುಭ ಸಮಾಚಾರ ಸಿಕ್ಕಿದೆ.

ಪವರ್ ಸ್ಟಾರ್ ಪವನ್ ಕಲ್ಯಾಣ್ – ಮಾಜಿ ಪತ್ನಿ ರೇಣು ದೇಸಾಯಿ ಸುಪುತ್ರ ಅಕಿರಾ ನಂದರ್ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ನಾಯಕ ನಟನಾಗಿ ಬೆಳ್ಳಿಪರದೆಯಲ್ಲಿ ಮಿಂಚುತ್ತಾರೆ ಎಂದು ನಿರೀಕ್ಷಿಸಿದ ಫ್ಯಾನ್ಸ್‌ಗೆ ಈಗ ನಿರಾಸೆ ಆಗಿದೆ. ಅಕಿರಾ ನಂದನ್ ಹೀರೋ ಆಗಿ ಮಿಂಚುವ ಬದಲು ಮ್ಯೂಸಿಕ್ ಡೈರೆಕ್ಟರ್ ಆಗಿ ಸಿನಿ ಜರ್ನಿ ಶುರು ಮಾಡಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್‌ಗೆ ಜೋಡಿಯಾದ ಆಲಿಯಾ ಭಟ್

ಕಾರ್ತಿಕೇಯ ಯರ್ಲಾಗಡ್ಡಾ ನಿರ್ದೇಶನದ ರೈಟರ್ಸ್ ಬ್ಲಾಕ್ ಚಿತ್ರಕ್ಕೆ ಅಕಿರಾ ನಂದನ್ ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡ್ತಿದ್ದಾರೆ.

Share This Article