ಬೆಂಗಳೂರು ಆಟೋದಲ್ಲಿ ಸಿಕ್ತು ಬರೋಬ್ಬರಿ 1 ಕೋಟಿ ಹಣ

Public TV
1 Min Read

ಬೆಂಗಳೂರು: ಆಟೋದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ ರೂ. ಹಣವನ್ನು ಪೊಲೀಸರು (Police) ಜಪ್ತಿ ಮಾಡಿದ್ದಾರೆ.

ಚುನಾವಣೆಯ ಹಿನ್ನೆಲೆಯಲ್ಲಿ ಎಸ್ ಜೆ ಪಾರ್ಕ್ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು. ಅನುಮಾನಗೊಂಡು ಆಟೋ ಒಂದನ್ನು ತಪಾಸಣೆ ಮಾಡುತ್ತಿದ್ದಾಗ ಬರೋಬ್ಬರಿ 1 ಕೋಟಿ ರೂ. ಹಣ ಪತ್ತೆಯಾಗಿದೆ.  ಇದನ್ನೂ ಓದಿ: ಏ.18ವರೆಗೆ ಹೊಸ ಮೀಸಲಾತಿ ಅನ್ವಯ ನೇಮಕಾತಿ, ಪ್ರವೇಶಾತಿ ನೀಡುವಂತಿಲ್ಲ: ಮುಸ್ಲಿಮರು, ಒಕ್ಕಲಿಗ & ಲಿಂಗಾಯತರ ಪರ ವಾದ ಏನಿತ್ತು?

ಬ್ಯಾಗ್‌ನಲ್ಲಿ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಆಟೋದಲ್ಲಿದ್ದ ಸುರೇಶ್ ಮತ್ತು ಪ್ರವೀಣ್ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ವಿಚಾರಣೆ ವೇಳೆ ಈ ಹಣ ರಾಜೇಶ್ ಎಂಟರ್‌ಪ್ರೈಸಸ್ ಗೆ ಸೇರಿದೆ ಎಂದು ಇಬ್ಬರು ಹೇಳಿದ್ದಾರೆ. ಹಣದ ಮೂಲದ ಬಗ್ಗೆ ಅನುಮಾನಗೊಂಡ ಪೊಲೀಸರು ಆದಾಯ ತೆರಿಗೆ ಅಧಿಕಾರಿಗಳನ್ನು ಕರೆಸಿ ಪ್ರಕರಣವನ್ನು ಹಸ್ತಾಂತರ ಮಾಡಿದ್ದಾರೆ.

ಹಣದ ಮೂಲ ಯಾವುದು? ಎಲ್ಲಿಂದ ತರಲಾಗುತ್ತಿತ್ತು ಹೀಗೆ ಹಲವಾರು ಆಯಾಮಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಈಗ ವಿಚಾರಣೆ ಆರಂಭಿಸಿದ್ದಾರೆ.

Share This Article