ಮ್ಯಾಜಿಕ್‌ ಮಹಿಗೆ 200ರ ಸಂಭ್ರಮ – ಕೊನೆಯ IPLನಲ್ಲಿ ವಿಶೇಷ ಸಾಧನೆ ಮಾಡಿದ ಧೋನಿ!

Public TV
2 Min Read

ಚೆನ್ನೈ: ಸಿಎಸ್‌ಕೆ (CSK) ತಂಡದ ನಾಯಕ ಎಂ.ಎಸ್ ಧೋನಿ (MS Dhoni) ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುವ ಮೂಲಕ ಐಪಿಎಲ್‌ನಲ್ಲಿ (IPL 2023) ವಿಶೇಷ ಸಾಧನೆ ಮಾಡಿದ್ದಾರೆ.

ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು 200ನೇ ಪಂದ್ಯದಲ್ಲಿ ಮುನ್ನಡೆಸಿದ ವಿಶೇಷ ಸಾಧನೆ ಮಾಡಿದ್ದು, ಈ ಮೂಲಕ ನಾಯಕನಾಗಿ ಒಂದೇ ತಂಡವನ್ನು ಅತ್ಯಧಿಕಬಾರಿ ಮುನ್ನಡೆಸಿದ ಸಾಧನೆ ಮಾಡಿದ್ದಾರೆ. ತವರಿನಲ್ಲಿಯೇ ಈ ವಿಶೇಷ ಪಂದ್ಯ ನಡೆಯುತ್ತಿರುವುದು ಅಭಿಮಾನಿಗಳಲ್ಲಿ ಖುಷಿ ಹೆಚ್ಚಿಸಿದೆ. ಇದನ್ನೂ ಓದಿ: IPL 2023: 0, 0, 0, 0 – ವಿಶ್ವದ ನಂ.1 ಬ್ಯಾಟ್ಸ್‌ಮ್ಯಾನ್‌ ಮಿಸ್ಟರ್‌ 360ಗೆ ಏನಾಯ್ತು?

ಧೋನಿ ಅಂದ್ರೆ ಅದೊಂದು ಮ್ಯಾಜಿಕ್‌, ಎಂತಹ ಆಟಗಾರನಿದ್ದರೂ ಧೋನಿ ನಾಯಕತ್ವದಲ್ಲಿ ಒಂದು ಅದ್ಭುತವನ್ನೇ ಸೃಷ್ಟಿಸುತ್ತಾನೆ. ಮುಂಬೈ ಇಂಡಿಯನ್ಸ್‌ ವಿರುದ್ಧ ಅಂಜಿಕ್ಯ ರಹಾನೆ (Ajinkya Rahane) ಅವರ ಅಮೋಘ ಇನ್ನಿಂಗ್ಸ್‌ ಅದಕ್ಕೆ ತಾಜಾ ಉದಾಹರಣೆಯಾಗಿದೆ. ಆದರೆ ಧೋನಿ ಈ ಬಾರಿ ಐಪಿಎಲ್‌ನೊಂದಿಗೆ ಕ್ರಿಕೆಟ್‌ ವೃತ್ತಿ ಬದುಕನ್ನು ಕೊನೆಗೊಳಿಸಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: IPl 2023: ರಂಗೇರಿಸಿದ ರಹಾನೆ ಬ್ಯಾಟಿಂಗ್‌, ಜಡೇಜಾ ಸ್ಪಿನ್‌ ಜಾದು- ಚೆನ್ನೈಗೆ 7 ವಿಕೆಟ್‌ಗಳ ಭರ್ಜರಿ ಜಯ

2021ರ ಐಪಿಎಲ್ ಆವೃತ್ತಿಯಲ್ಲೇ ಧೋನಿ ನಾಯಕ ನಾಯಕನಾಗಿ 200 ಪಂದ್ಯಗಳನ್ನು ಪೂರ್ಣಗೊಳಿಸಿದ ಮೊದಲ ಆಟಗಾರನೆಂಬ ಸಾಧನೆ ಮಾಡಿದ್ದರು. ಆದರೆ 2016ರಲ್ಲಿ ರೈಸಿಂಗ್‌ಪುಣೆ ಸೂಪರ್‌ ಜೈಂಟ್ಸ್‌ ತಂಡದ ನಾಯಕತ್ವ ವಹಿಸಿದ್ದರು. ಇದರ ಹೊರತಾಗಿ ಸಿಎಸ್‌ಕೆ ತಂಡಕ್ಕೇ ನಾಯಕ ಎನ್ನುವುದನ್ನ ನೋಡುವುದಾದ್ರೆ ಧೋನಿ ಇಂದು ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ 200ನೇ ಪಂದ್ಯವನ್ನ ಮುನ್ನಡೆಸುತ್ತಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ 200 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಸಿಎಸ್‌ಕೆ ನಾಯಕನಾಗಿ 199 ಪಂದ್ಯಗಳನ್ನು ಮುನ್ನಡೆಸಿರುವ ಧೋನಿ 120 ಪಂದ್ಯಗಳಲ್ಲಿ ಗೆಲುವು ಸಾಧಿಸಿ, 4 ಬಾರಿ ಚಾಂಪಿಯನ್ಸ್‌ ಪಟ್ಟ ಗೆದ್ದು ತಂದಿದ್ದಾರೆ. ಆದರೆ 78 ಪಂದ್ಯಗಳಲ್ಲಿ ಚೆನ್ನೈ ತಂಡ ಸೋತಿದೆ. ಒಟ್ಟಾರೆ ಐಪಿಎಲ್‌ನಲ್ಲಿ ನಾಯಕನಾಗಿ ಧೋನಿ 213 ಪಂದ್ಯಗಳನ್ನು ಮುನ್ನಡೆಸಿದ್ದು, 125 ಪಂದ್ಯಗಳಲ್ಲಿ ಗೆಲುವು ತಂದರೆ, 87 ಪಂದ್ಯದಲ್ಲಿ ತಂಡ ಸೋಲನ್ನು ಅನುಭವಿಸಿದೆ. ಸದ್ಯ ಬುಧವಾರ (ಏಪ್ರಿಲ್‌ 12) ರಾಜಸ್ಥಾನ್‌ ವಿರುದ್ಧ ಸಿಎಸ್‌ಕೆ ನಾಯಕನಾಗಿ 200ನೇ ಪಂದ್ಯವನ್ನು ಮುನ್ನಡೆಸುತ್ತಿದ್ದಾರೆ. ಧೋನಿ ನಾಯಕನಾಗಿ 4,482 ರನ್‌ ಗಳಿಸಿದ್ದರೆ, ಒಟ್ಟಾರೆ ಐಪಿಎಲ್‌ನಲ್ಲಿ 5,000 ರನ್‌ ಪೂರೈಸಿದ್ದಾರೆ.

Share This Article