ಯುರೋಪ್ ರಾಷ್ಟ್ರಗಳು ಅಮೆರಿಕ ಅವಲಂಬನೆ ಬಿಡಬೇಕು : ಫ್ರಾನ್ಸ್ ಅಧ್ಯಕ್ಷ

Public TV
1 Min Read

ಪ್ಯಾರಿಸ್: ಯುರೋಪ್ (Europe) ರಾಷ್ಟ್ರಗಳು ಅಮೆರಿಕದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಬೇಕು. ಹಾಗೂ ತೈವಾನ್ (Taiwan) ಬಗ್ಗೆ ಚೀನಾ (China) ಮತ್ತು ಯುಎಸ್ ನಡುವಿನ ಘರ್ಷಣೆಗೆ ತಲೆ ಹಾಕಬಾರದು ಎಂದು ಫ್ರೆಂಚ್ (French) ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ (Emmanuel Macron) ಹೇಳಿದ್ದಾರೆ.

ಚೀನಾಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡು ಹಿಂದಿರುಗುವ ವೇಳೆ ವಿಮಾನದಲ್ಲಿ ನಡೆಸಿದ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ (Xi Jinping) ಅವರ ಜೊತೆ ಆರು ಗಂಟೆಗಳ ಕಾಲ ಇದ್ದರು. ಪ್ರವಾಸ ಮುಗಿಸಿ ಹಿಂದಿರುಗುವಾಗ ಇಬ್ಬರು ಫ್ರೆಂಚ್ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಮ್ಯಾಕ್ರನ್ ಯುರೋಪ್‍ಗೆ ಸ್ವಾಯತ್ತತೆಯನ್ನು ಒತ್ತಿಹೇಳಿದರು. ಇದನ್ನೂ ಓದಿ: ಅಪ್ರಾಪ್ತ ಬಾಲಕನಿಗೆ ತನ್ನ ನಾಲಿಗೆ ನೆಕ್ಕುವಂತೆ ಸೂಚಿಸಿದ ದಲೈ ಲಾಮಾ – ಭಾರೀ ಟೀಕೆ

ಯುರೋಪ್ ಎದುರಿಸುತ್ತಿರುವ ದೊಡ್ಡ ಅಪಾಯವೆಂದರೆ ಅದು ತಮ್ಮದಲ್ಲದ ಬಿಕ್ಕಟ್ಟುಗಳಲ್ಲಿ ಸಿಲುಕಿಕೊಳ್ಳುವುದು. ಅದು ಸ್ವಾಯತ್ತತೆಯನ್ನು (Autonomy) ನಿರ್ಮಾಣವನ್ನು ತಡೆಯುತ್ತದೆ. ಕ್ಸಿ ಜಿನ್‍ಪಿಂಗ್ ಮತ್ತು ಚೀನಿ ಕಮ್ಯುನಿಸ್ಟ್ ಪಕ್ಷವು ಸ್ವಾಯತ್ತತೆಯ ಪರಿಕಲ್ಪನೆಯನ್ನು ಉತ್ಸಾಹದಿಂದ ಅನುಮೋದಿಸಿದ್ದಾರೆ. ಚೀನಿ ಅಧಿಕಾರಿಗಳು ಯುರೋಪಿಯನ್ ದೇಶಗಳೊಂದಿಗಿನ ತಮ್ಮ ವ್ಯವಹಾರಗಳಲ್ಲಿ ಇದನ್ನು ನಿರಂತರವಾಗಿ ಉಲ್ಲೇಖಿಸುತ್ತಾರೆ ಎಂದರು.

ಚೀನಾ ಇತ್ತೀಚಿನ ವರ್ಷಗಳಲ್ಲಿ ತೈವಾನ್ ಭೂ ಪ್ರದೇಶಕ್ಕೆ ಆಕ್ರಮಣ ಮಾಡುವುದಾಗಿ ಪದೇ ಪದೇ ಬೆದರಿಕೆ ಹಾಕಿದೆ ಮತ್ತು ಅದು ಚೀನಾದ ಭಾಗವಾಗಿದೆ ಎಂದು ಹೇಳಿಕೊಂಡಿದೆ. ಚೀನಾ ತನ್ನ ಭೂಪ್ರದೇಶವೆಂದು ಹೇಳಿಕೊಳ್ಳುವ ತೈವಾನ್‍ನ ಸುತ್ತಲೂ ದೊಡ್ಡ ಮಿಲಿಟರಿ ತಾಲೀಮು ಪ್ರಾರಂಭಿಸಿದೆ. ಆದರೆ ಅಮೇರಿಕ ತೈವಾನ್ ರಕ್ಷಿಸುವ ಭರವಸೆ ನೀಡಿದೆ. ಇದನ್ನೂ ಓದಿ: ರಾಹುಲ್‌ ವಿರುದ್ಧ ಮಾನಹಾನಿ ಕೇಸ್‌ ದಾಖಲಿಸುತ್ತೇನೆ: ಅಸ್ಸಾಂ ಸಿಎಂ

Share This Article