Delhi Metro Girl: ನಾನೂ ಸಂಪ್ರದಾಯಸ್ಥ ಹುಡ್ಗಿ, ಏನ್ ಬೇಕಾದ್ರೂ ಧರಿಸ್ತೀನಿ ಎಂದ ಬಿಕಿನಿ ಗರ್ಲ್

By
3 Min Read

– `ಉರ್ಫಿ ಜಾವೇದ್ ಯಾರೂ ಅಂತಾನೇ ಗೊತ್ತಿರಲಿಲ್ಲ’

ನವದೆಹಲಿ: ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಫ್ಯಾಷನ್ ತಾರೆ ಉರ್ಫಿ ಜಾವೇದ್ (Urfi Javed) ರೀತಿಯಲ್ಲಿ 19ರ ಯುವತಿ ಬಿಕಿನಿ ತೊಟ್ಟು ದೆಹಲಿ ಮೆಟ್ರೋದಲ್ಲಿ (Delhi Metro) ಸಂಚರಿಸಿದ್ದಳು. ಈ ಕುರಿತ ವೀಡಿಯೋ ಜಾಲತಾಣದಲ್ಲಿ ಹರಿದಾಡಿತ್ತು. ಯುವತಿಯ ನಡೆಗೆ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಘಟನೆ ಬೆಳಕಿಗೆ ಬಂದ ಒಂದು ದಿನದ ಬಳಿಕ ಯುವತಿ ನೆಟ್ಟಿಗರ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟಿದ್ದಾಳೆ. ನಾನು ಏನು ಬೇಕಾದರೂ ಧರಿಸುತ್ತೇನೆ, ಅದು ನನ್ನ ಸ್ವಾತಂತ್ರ್ಯ. ಆದ್ರೆ ನಾನು ಇದನ್ನು ಪ್ರಚಾರಕ್ಕಾಗಿ, ಸ್ಟಂಟ್ ಮಾಡೋಕಾಗಲಿ ಅಥವಾ ಫೇಮಸ್ ಆಗ್ಬೇಕು ಅಂತಾ ಮಾಡಿಲ್ಲ ಎಂದು ಹೇಳಿದ್ದಾಳೆ

ಅಲ್ಲದೇ ನನಗೆ ಉರ್ಫಿ ಜಾವೇದ್ ಯಾರೂ ಅಂತಾನೆ ಗೊತ್ತಿರಲಿಲ್ಲ. ನನ್ನ ಸ್ನೇಹಿತೆ ಆಕೆಯ ಫೋಟೋ ತೋರಿಸಿದಳು. ಆಮೇಲೆ ಆಕೆ ಸ್ಟೋರಿ ನನಗೆ ಗೊತ್ತಾಗಿದ್ದು ಎಂದು ತಿಳಿಸಿದ್ದಾಳೆ.

ನನಗೆ ಈ ರೀತಿ ಮಾಡಬೇಕು ಎಂಬ ಯೋಚನೆ ಬಂದಿದ್ದು ಒಂದು ದಿನದಲ್ಲಿ ಅಲ್ಲ. ನಾನು ಸಹ ಸಂಪ್ರದಾಯಸ್ಥ ಕುಟುಂಬಕ್ಕೆ ಸೇರಿದ್ದೇನೆ. ಅಲ್ಲಿ ನನಗೆ ಬೇಕಾದ್ದನ್ನು ಮಾಡಲು ಅವಕಾಶ ಇರಲಿಲ್ಲ. ಆದ್ದರಿಂದ ಒಂದು ದಿನ ನಾನು ಬಯಸಿದಂತೆ ಇರಬೇಕು ಅಂತಾ ಹೀಗೆ ಮಾಡಿದೆ. ಕೆಲವು ತಿಂಗಳಿನಿಂದ ನಾನು ಹೀಗೆಯೇ ಓಡಾಡುತ್ತಿದ್ದೇನೆ, ಆದ್ರೆ ಈಗ ವೈರಲ್ ಆಗಿದೆ. ದೆಹಲಿ ನೇರಳೆ ಮಾರ್ಗದಲ್ಲಿ ಮಾತ್ರ ನನಗೆ ಪ್ರಯಾಣಿಸಲು ಅನುಮತಿ ನೀಡಲಿಲ್ಲ. ಉಳಿದೆಲ್ಲೂ ಎಲ್ಲೂ ನನಗೆ ಸಮಸ್ಯೆಯಾಗಿಲ್ಲ ಎಂದು 19ರ ಯುವತಿ ಸ್ಪಷ್ಟನೆ ನೀಡಿದ್ದಾಳೆ.

ಈ ಕುರಿತು ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (DMRC) ಹೇಳಿಕೆ ಬಿಡುಗಡೆ ಮಾಡಿದ್ದು, ಸಮಾಜದಲ್ಲಿ ಸ್ವೀಕಾರಾರ್ಹವಾಗಿರುವ ಸಾಮಾಜಿಕ ಶಿಷ್ಟಾಚಾರವನ್ನು ಮೆಟ್ರೋದಲ್ಲಿ ಅನುಸರಿಸಬೇಕಾಗುತ್ತದೆ. ಪ್ರಯಾಣಿಕರು ಇತರರ ಸಂವೇಧನೆಗೆ ಧಕ್ಕೆ ತರುವಂತಹ ಉಡುಪುಗಳ್ನು ಧರಿಸಬಾರದು. ಒಂದು ವೇಳೆ ಇನ್ಮುಂದೆ ಅಂತಹ ಸನ್ನಿವೇಶಗಳು ಕಂಡುಬಂದಲ್ಲಿ ಡಿಎಂಆರ್‌ಸಿ ನಿರ್ವಹಣೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 59ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಎಚ್ಚರಿಸಿದೆ. ಇದನ್ನೂ ಓದಿ: ಮೆಟ್ರೋದಲ್ಲಿ ಬಿಕಿನಿ ಗರ್ಲ್; ಉರ್ಫಿ ಜಾವೇದ್ ತಂಗಿ ಎಂದ ನೆಟ್ಟಿಗರು

ಏನಿದು ಘಟನೆ?
ಎರಡು ದಿನಗಳ ಹಿಂದೆಯಷ್ಟೇ ದೆಹಲಿಯ ಮೆಟ್ರೋದಲ್ಲಿ ಯುವತಿಯೊಬ್ಬಳು ಬಿಕಿನಿ ತೊಟ್ಟು ಓಡಾಡಿದ್ದಳು. ಎನ್‌ಸಿಎಂ ಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ಸುಮಾರು 9 ಸೆಕೆಂಡುಗಳ ವೀಡಿಯೋದಲ್ಲಿ, ಯುವತಿ ಬಿಕಿನಿ ಧರಿಸಿ ಸಂಚರಿಸುತ್ತಿರುವುದು ಕಂಡುಬಂದಿತ್ತು.

ಯುವತಿ ಮೆಟ್ರೋದಲ್ಲಿ ಸಂಚರಿಸುತ್ತಿದ್ದ ವೇಳೆ ತೊಡೆಯ ಮೇಲೆ ಬ್ಯಾಗ್ ಇಟ್ಟುಕೊಂಡು ಕುಳಿತಿದ್ದಳು. ಆಕೆ ಎದ್ದು ನಿಂತಾಗ ಬಿಕಿನಿ ಧರಿಸಿರುವುದು ಕಂಡಿದೆ, ತಕ್ಷಣವೇ ಚಾಲಾಕಿಯೊಬ್ಬ ವೀಡಿಯೋ ಸೆರೆಹಿಡಿದು ಜಾಲತಾಣದಲ್ಲಿ ಹರಿಬಿಟ್ಟಿದ್ದನು.

ನೆಟ್ಟಿಗರಿಂದ ಫುಲ್ ಕ್ಲಾಸ್:
ದೆಹಲಿ ಯುವತಿಯ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಂಡಿದ್ದರು. ಕೆಲವರು ಇದು ಪ್ರಜಾಪ್ರಭುತ್ವ, ಸ್ವಾತಂತ್ರ‍್ಯದ ಹಕ್ಕು ಎಂದು ಆಕೆಯನ್ನು ಬೆಂಬಲಿಸಿದರೆ ಉಳಿದವರು ಆಕೆಯ ನಡವಳಿಕೆಯನ್ನು ಖಂಡಿಸಿದ್ದರು. ಇದನ್ನೂ ಓದಿ: ಸಿಸಿ ಕ್ಯಾಮೆರಾಗೆ ಬಟ್ಟೆ ಮುಚ್ಚಿ ಹುಂಡಿ ಕಳ್ಳತನ- ಅರ್ಚಕರಿಂದಲೇ ಕೃತ್ಯ ಆರೋಪ

ಮೆಟ್ರೋ ಸಿಬ್ಬಂದಿ ಆಕೆಯನ್ನು ಹೇಗಾದರೂ ಒಳಗೆ ಬಿಟ್ಟರು? ಐಪಿಸಿ ಸೆಕ್ಷನ್ 293 (ಯುವ ವ್ಯಕ್ತಿಗೆ ಅಶ್ಲೀಲ ವಸ್ತುಗಳನ್ನು ಮಾರಾಟ ಮಾಡುವುದು), ಸೆಕ್ಷನ್ 294ರ (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು) ಅಡಿಯಲ್ಲಿ ಕೇಸ್ ದಾಖಲಿಸಬಹುದು ಎಂದು ಕಾಮೆಂಟ್ ಮಾಡಿದ್ದರು. ಈ ಮಧ್ಯೆ ಮತ್ತಷ್ಟು ಮಂದಿ ಆಕೆ? ದೆಹಲಿಯ ಮೆಟ್ರೊ ಹುಡುಗಿ’, ಉರ್ಫಿ ಜಾವೇದ್‌ನಿಂದ ಪ್ರೇರಣೆ ಪಡೆದಿರಬೇಕು, ಪಾಪ ಬಟ್ಟೆ ಖರೀದಿಸಲು ಹಣವಿಲ್ಲ ಅನ್ನಿಸುತ್ತೆ ಎಂದು ಹಾಸ್ಯ ಮಾಡಿದ್ದರು.

Share This Article