IPL 2023 – ಚಿಯರ್‌ ಗರ್ಲ್ಸ್‌ ಝಲಕ್‌ ನೋಡಿ

Public TV
1 Min Read

16ನೇ ಐಪಿಎಲ್‌ (IPL 2023) ಆವೃತ್ತಿ ಆರಂಭವಾಗಿದ್ದು, ಪ್ರಮುಖ ತಂಡಗಳ ನಡುವೆ ಹಣಾಹಣಿ ನಡೆಯುತ್ತಿದೆ. ಬ್ಯಾಟರ್‌ಗಳು ಗ್ರೌಂಡ್‌ನಲ್ಲಿ ನಿಂತು ಸಿಕ್ಸರ್‌, ಬೌಂಡರಿ ಅಬ್ಬರಿಸುತ್ತಿದ್ದರೆ, ಇತ್ತ‌ ವೇದಿಕೆಯಲ್ಲಿ ಹೆಜ್ಜೆ ಹಾಕುತ್ತಾ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದಾರೆ ಚಿಯರ್‌ ಗರ್ಲ್ಸ್‌.

ಹೌದು. ಐಪಿಎಲ್‌ನ ತಂಡಗಳು ವಿಶೇಷವಾಗಿ ನಿರ್ಮಿಸಲಾದ ವೇದಿಕೆಯ ಮೇಲೆ ಹುಡುಗಿಯರ ಗುಂಪು ತಮ್ಮ ತಂಡದ ಬಣ್ಣಗಳೊಂದಿಗೆ ನೃತ್ಯ ಮಾಡುತ್ತಾ ತಂಡವನ್ನು ಪ್ರೋತ್ಸಾಹಿಸುವ ಕಲ್ಪನೆಯೇ ಚಿಯರ್ ಗರ್ಲ್ಸ್‌ (CheerGirls). ಬಹುತೇಕ ಎಲ್ಲ ಐಪಿಎಲ್ ತಂಡಗಳೂ ತಮ್ಮದೇ ಆದ ಚಿಯರ್ ಗರ್ಲ್ಸ್‌ ತಂಡವನ್ನು ಹೊಂದಿರುತ್ತವೆ. ಕಡಿಮೆ ಬಟ್ಟೆ, ಹುರುಪಿನ ಕುಣಿತ ಮುಂತಾದವುಗಳಿಂದ ಪ್ರೇಕ್ಷಕರನ್ನ ತಮ್ಮತ್ತ ಸೆಳೆಯುತ್ತಾರೆ. ಎಷ್ಟೋ ಕ್ರಿಕೆಟ್‌ ಅಭಿಮಾನಿಗಳು ಐಪಿಎಲ್ ಕ್ರೀಡಾಂಗಣದಲ್ಲಿ ಇವರ ಕುಣಿತ ನೋಡಲೆಂದೇ ನೆರೆಯುತ್ತಾರೆ. ಇಂತಹ ಮನಮೋಹಕ ದೃಶ್ಯಗಳು ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಅವುಗಳನ್ನಿಲ್ಲಿ ಕಣ್ತುಂಬಿಕೊಳ್ಳಬಹುದು.

 

 

 

 

Share This Article