ದೇವೇಗೌಡರ ಆರೋಗ್ಯ, ಆಯಸ್ಸು ನನಗೆ ಮುಖ್ಯ : ಹೆಚ್‍ಡಿಕೆ

By
1 Min Read

ಬೆಂಗಳೂರು: ದೇವೇಗೌಡರು (HD Devegowda) ನನ್ನ ಜೊತೆ ನೊಂದು ಮಾತನಾಡಿದ್ದಾರೆ. ನನಗೆ ಅವರ ಆರೋಗ್ಯ, ಆಯಸ್ಸು ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು.

ಹಾಸನದ ಟಿಕೆಟ್‌ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗ್ಗೆ ದೇವೇಗೌಡರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಜೆ ಮನೆಗೆ ವಾಪಸ್ ಆಗ್ತಾರೆ. ನನಗೂ ಬರುವುದಕ್ಕೆ ಹೇಳಿದ್ದಾರೆ. ಅವರು ನನ್ನ ಜೊತೆ ನೊಂದು ಮಾತನಾಡಿದ್ದಾರೆ. ಕುಟುಂಬದಲ್ಲಿ ಯಾವುದು ಬಿನ್ನಾಭಿಪ್ರಾಯ ಇರಬಾರದು ಅನ್ನೋದನ್ನು ಹೇಳಿದ್ದಾರೆ. ನನಗೆ ದೇವೇಗೌಡರ ಆರೋಗ್ಯ, ಆಯಸ್ಸು ಮುಖ್ಯ. ಇವತ್ತಿನ ಪರಿಸ್ಥಿತಿ ಅವರಲ್ಲೂ ಮನವರಿಕೆ ಇದೆ ಎಂದರು.

ದೇವೇಗೌಡರು ಕೂಡ ಜನಾಭಿಪ್ರಾಯ ಸಂಗ್ರಹ ಮಾಡಿದ್ದಾರೆ. ನಮ್ಮ ಯಾವುದೇ ತೀರ್ಮಾನಗಳಿರಲಿ, ಅವರ ಅಂತಿಮ ನಿರ್ಧಾರಕ್ಕೆ ಹಿಂದಿನಿಂದಲೂ ಕುಟುಂಬ ತಲೆಬಾಗಿದೆ. ಇವತ್ತಿನ ಅವರ ಮಧ್ಯಸ್ಥಿಕೆ ಎಲ್ಲದಕ್ಕೂ ಅಂತಿಮ ತೆರೆ ಎಳೆಯಲಿದೆ. ಒಂದು ತಿಂಗಳಿಂದ ಇರುವ ಸಮಸ್ಯೆಯನ್ನು ದೇವೇಗೌಡರು ಬಗೆಹರಿಸಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ಜೆಡಿಎಸ್‌ನ ಶಿವಲಿಂಗೇಗೌಡ ರಾಜೀನಾಮೆ

ದೇವೇಗೌಡರು ರೊಟೀನ್ ಚೆಕಪ್‍ಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ಆರೋಗ್ಯ ಸ್ಥಿರವಾಗಿದೆ ಯಾವುದೇ ಸಮಸ್ಯೆ ಇಲ್ಲ. ಸಂಜೆ 6 ಗಂಟೆ ಮೇಲೆ ಅವರೇ ಸಭೆ ಕರೆದಿದ್ದಾರೆ. ನಾನು ಕೂಡ ಸಭೆಯಲ್ಲಿ ಭಾಗಿಯಾಗುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಪರಿಶಿಷ್ಟ ಜಾತಿ, ಪಂಗಡ ಬಿಜೆಪಿ ಕೈ ಹಿಡಿಯಲಿವೆ – ಕೋಟ ಶ್ರೀನಿವಾಸ ಪೂಜಾರಿ

Share This Article