ಟೈಗರ್ ಪ್ರಭಾಕರ್ ಹುಟ್ಟುಹಬ್ಬಕ್ಕೆ ‘ಲಂಕಾಸುರ’ ಚಿತ್ರದ ವಿಶೇಷ ಟೀಸರ್

Public TV
1 Min Read

ನ್ನಡದ ಹೆಸರಾಂತ ನಟ, ಟೈಗರ್ ಖ್ಯಾತಿಯ ಪ್ರಭಾಕರ್ (Tiger Prabhakar) ಹುಟ್ಟು ಹಬ್ಬದ ದಿನ ಲಂಕಾಸುರ ಸಿನಿಮಾದ ವಿಶೇಷ ಟೀಸರ್ ರಿಲೀಸ್ ಆಗಿದೆ. ತಮ್ಮ ತಂದೆಯ ಹುಟ್ಟು ಹಬ್ಬದ ದಿನದಂದು ಟೀಸರ್ ರಿಲೀಸ್ ಮಾಡುವುದಾಗಿ ಪ್ರಭಾಕರ್ ಪುತ್ರ ವಿನೋದ್ ಟೀಸರ್ ರಿಲೀಸ್ ಮಾಡುವುದಾಗಿ ಘೋಷಿಸಿದ್ದರು. ಇದು ವಿನೋದ್ ಚೊಚ್ಚಲು ನಿರ್ಮಾಣದ ಸಿನಿಮಾವಾಗಿದ್ದರಿಂದ ಸಖತ್ ಪ್ಲ್ಯಾನ್ ಮಾಡಿಯೇ ಸಿನಿಮಾವನ್ನು ಜನರಿಗೆ ಅರ್ಪಿಸುತ್ತಿದ್ದಾರೆ.

‘ನಮ್ಮ ನಿರ್ಮಾಣ ಸಂಸ್ಥೆ ಟೈಗರ್ ಟಾಕೀಸ್ ಲಾಂಛನದಿಂದ ನಿರ್ಮಾಣವಾಗಿರುವ ಮೊದಲ ಚಿತ್ರ ಲಂಕಾಸುರದ (Lancasura) ವಿಶೇಷ ಟೀಸರ್ ಬಿಡುಗಡೆ ಆಗಿದೆ. ನಾವು ಈ ಚಿತ್ರ ಪ್ರಾರಂಭಿಸಿದ ದಿನದಿಂದಲೂ ನಮಗೆ ನೀವು ನೀಡುತ್ತಿರುವ ಪ್ರೋತ್ಸಾಹಕ್ಕೆ ನಾವು ಚಿರ ಖುಣಿ. ನಮಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ’ ಎನ್ನುತ್ತಾರೆ ವಿನೋದ್ ಪ್ರಭಾಕರ್ (Vinod Prabhakar) ಹಾಗೂ ನಿಶಾ ವಿನೋದ್ ಪ್ರಭಾಕರ್. ಇದನ್ನೂ ಓದಿ: ʻಪೊನ್ನಿಯಿನ್ ಸೆಲ್ವನ್-2ʼ ಟ್ರೈಲರ್ ರಿಲೀಸ್: ಚೋಳಾ ಸಾಮ್ರಾಜ್ಯಕ್ಕಾಗಿ ಮುಂದುವರೆದ ಹೋರಾಟ

ಈಗಾಗಲೇ ಲಂಕಾಸುರ  ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಕನ್ನಡ ಸಿನಿರಸಿಕರ ಮನ ಗೆದ್ದಿದೆ. ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ?  ಎಂಬ ಕಾತುರ ಅಭಿಮಾನಿಗಳಿಗಿದೆ.  ಅನುಭವಿ ಕಲಾವಿದರ ಅಭಿನಯ ಹಾಗೂ ಉತ್ತಮ ತಂತ್ರಜ್ಞರ ಕಾರ್ಯವೈಖರಿಯಲ್ಲಿ ಲಂಕಾಸುರ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ.

ಲಂಕಾಸುರ ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದ್ದು, ವಿನೋದ್ ಪ್ರಭಾಕರ್ ಹೊಸ ಬಗೆಯ ಪಾತ್ರವನ್ನು ಮಾಡಿದ್ದಾರೆ. ಈ ಚಿತ್ರಕ್ಕಾಗಿಯೇ ಅವರು ವಿಶೇಷ ಗೆಟಪ್ ಕೂಡ ಹಾಕಿದ್ದಾರೆ. ಸಾಹಸ ಪ್ರಧಾನ ಚಿತ್ರವಾಗಿದ್ದು, ವಿಭಿನ್ನ ಕಥೆಯನ್ನು ಹೊತ್ತು ಪ್ರೇಕ್ಷಕರ ಮುಂದೆ ಬರಲಿದೆ.

Share This Article