ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪಟ್ಟಿ ಔಟ್ – ಯಾರಿಗೆ ವರ್ಷಕ್ಕೆ ಎಷ್ಟು ಸಂಭಾವನೆ?

Public TV
1 Min Read

ನವದೆಹಲಿ: ಬಿಸಿಸಿಐ (BCCI) 2022-23ರ ಆವೃತ್ತಿಗಾಗಿ ಸೆಂಟ್ರಲ್ ಕಾಂಟ್ರ್ಯಾಂಕ್ಟ್ (Central Contract) ಪಡೆದ ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ.

ರವೀಂದ್ರ ಜಡೇಜಾ (Ravindra Jadeja) ಅತ್ಯುನ್ನತ ಶ್ರೇಣಿಗೆ ಆಯ್ಕೆಯಾಗಿದ್ದಾರೆ. ಕೆ.ಎಲ್ ರಾಹುಲ್ (KL Rahul) ಎ ಶ್ರೇಣಿಯಿಂದ ಬಿ ಶ್ರೇಣಿಗೆ ಕುಸಿದಿದ್ದಾರೆ. ಹಲವು ಆಟಗಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ.

ಕಾಂಟ್ರ್ಯಾಕ್ಟ್ ಪಟ್ಟಿಯ ಎ+ ಶ್ರೇಣಿ ಆಟಗಾರರು 7 ಕೋಟಿ ರೂ., ಎ ಶ್ರೇಣಿಯ ಆಟಗಾರರು 5 ಕೋಟಿ ರೂ., ಬಿ ಶ್ರೇಣಿಯ ಆಟಗಾರರು 3 ಕೋಟಿ ರೂ., ಹಾಗೂ ಸಿ ಶ್ರೇಣಿಯ ಆಟಗಾರರು 1 ಕೋಟಿ ರೂ. ವಾರ್ಷಿಕ ಸಂಭಾವನೆ ಪಡೆಯಲಿದ್ದಾರೆ. ಇದನ್ನೂ ಓದಿ: ಐಪಿಎಲ್- ಆರ್‌ಸಿಬಿ ಕೆಲವು ಪಂದ್ಯಗಳಿಗೆ ಮ್ಯಾಕ್ಸ್‌ವೆಲ್ ಅನುಮಾನ

 

ಭುವನೇಶ್ವರ್ ಕುಮಾರ್, ಅಜಿಂಕ್ಯ ರಹಾನೆ, ಇಶಾಂತ್ ಶರ್ಮಾ, ವೃದ್ಧಿಮಾನ್ ಸಹಾ, ದೀಪಕ್ ಚಹಾರ್ ಮತ್ತು ಹನುಮ ವಿಹಾರಿ ಪಟ್ಟಿಯಿಂದ ಹೊರಗುಳಿದಿದ್ದಾರೆ. ಪ್ರಸ್ತುತ ಪಟ್ಟಿಯಲ್ಲಿ ದೀಪಕ್ ಹೂಡಾ, ಕೆಎಸ್ ಭರತ್, ಶಿಖರ್ ಧವನ್ ಮತ್ತು ಅರ್ಷದೀಪ್ ಸಿಂಗ್ ಹಾಗೂ ಇನ್ನಿತರರ ಹೆಸರುಗಳು ಗ್ರೇಡ್ ಸಿ ವಿಭಾಗದ ಅರ್ಹ ಪಟ್ಟಿಯಲ್ಲಿವೆ.

ಆರಂಭಿಕ ಆಟಗಾರ ಶಿಖರ್ ಧವನ್ ಏಕದಿನ ಪಂದ್ಯಗಳಲ್ಲಿ (ODI) ಮಾತ್ರ ಆಡಿದ್ದರು. ಅವರನ್ನು ಪಟ್ಟಿಯಲ್ಲಿ ಉಳಿಸಿಕೊಂಡ ಬಿಸಿಸಿಐ ನಡೆ ಅಚ್ಚರಿ ತಂದಿದೆ.

ಯಾವ ಆಟಗಾರರಿಗೆ ಯಾವ ಶ್ರೇಣಿ
ಗ್ರೇಡ್ ಎ+: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ

ಗ್ರೇಡ್ ಎ: ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ರಿಷಬ್ ಪಂತ್, ಅಕ್ಷರ್ ಪಟೇಲ್

ಗ್ರೇಡ್ ಬಿ: ಚೇತೇಶ್ವರ ಪೂಜಾರ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್

ಗ್ರೇಡ್ ಸಿ: ಉಮೇಶ್ ಯಾದವ್, ಶಿಖರ್ ಧವನ್, ಶಾರ್ದೂಲ್ ಠಾಕೂರ್, ಇಶಾನ್ ಕಿಶನ್, ದೀಪಕ್ ಹೂಡಾ, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಕೆಎಸ್ ಭರತ್. ಇದನ್ನೂ ಓದಿ: ರೋಚಕ ಫೈನಲ್‌ – ಮುಂಬೈ ಇಂಡಿಯನ್ಸ್‌ ಚೊಚ್ಚಲ WPL ಚಾಂಪಿಯನ್‌

Share This Article