ಹುಲಿಯಂತೆ ಜಾರಕಿಹೊಳಿ ಗೋಕಾಕ್‍ನಲ್ಲಿ ಕಂಟ್ರೋಲ್ ಹೊಂದಿದ್ದಾರೆ: ಪ್ರತಾಪ್ ಸಿಂಹ

Public TV
2 Min Read

ಬೆಳಗಾವಿ: ದಕ್ಷಿಣ ಕರ್ನಾಟಕದವರು ಉತ್ತರ ಕರ್ನಾಟಕ ಹಿಂದುಳಿದ ಪ್ರದೇಶ ಅಂತಾರೆ. ಆದರೆ ಗೋಕಾಕ್ ಕ್ಷೇತ್ರ (Gokak Constituency) ನೋಡಿದ್ರೆ ಅಭಿವೃದ್ಧಿ ಗೊತ್ತಾಗುತ್ತದೆ. ಹುಲಿಯಂತೆ ಜಾರಕಿಹೊಳಿ ಕ್ಷೇತ್ರದಲ್ಲಿ ಕಂಟ್ರೋಲ್ ಹೊಂದಿದ್ದಾರೆ. 2023ರಲ್ಲಿ ರಮೇಶ್ ಜಾರಕಿಹೊಳಿ (Ramesh Jarakiholi) ಗೆದ್ದು ಮಂತ್ರಿಯಾಗಿ ಕ್ಷೇತ್ರಕ್ಕೆ ಬರಬೇಕು. 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ರಮೇಶ್ ಜಾರಕಿಹೊಳಿ ಗೆಲ್ಲಬೇಕು ಎಂದು ಸಂಸದ ಪ್ರತಾಪ್ ಸಿಂಹ (Pratap Simha) ಹಾಡಿಹೊಗಳಿದರು.

ಗೋಕಾಕ್ ನಲ್ಲಿ ಬಿಜೆಪಿ (BJP) ಯುವ ಸಂಕಲ್ಪ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, 2023ರಲ್ಲಿ ರಮೇಶ್ ಜಾರಕಿಹೊಳಿ ಗೆದ್ದು ಮಂತ್ರಿಯಾಗಿ ಕ್ಷೇತ್ರಕ್ಕೆ ಬರಬೇಕು. 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ರಮೇಶ್ ಜಾರಕಿಹೊಳಿ ಗೆಲ್ಲಬೇಕು. ರಮೇಶ್ ಜಾರಕಿಹೊಳಿ ಇಡೀ ಜಿಲ್ಲೆಯಲ್ಲಿ ಪ್ರಭಾವ ಹೊಂದಿದ್ದಾರೆ. ಕ್ವಾಟರ್, ಬಿರಿಯಾನಿ ಕೊಡಿಸಿ ನಾನೇ ಸಿಎಂ ಅಂತಾ ಸಿದ್ದರಾಮಯ್ಯ, ಡಿಕೆಶಿ (DK Shivakumar) ಪ್ರಚಾರ ನಡೆಸುತ್ತಿದ್ದಾರೆ. ಜನರಿಗೆ ಅನೇಕ ಭಾಗ್ಯ ಕೊಟ್ಟೆ ಎನ್ನುತ್ತಾರೆ. ಆದರೆ ಅವರಿಗೆ ಕ್ಷೇತ್ರ ಭಾಗ್ಯ ಸಿಗುತ್ತಿಲ್ಲ, ಚುನಾವಣೆಗೆ ನಿಲ್ಲಲು ಒಂದು ಕ್ಷೇತ್ರ ಇಲ್ಲ ಎಂದರು.

ವರುಣಾ (Varuna Constituency) ದಲ್ಲಿ ಸ್ಪರ್ಧೆಗೆ ಹೆಂಡ್ತಿ ಮಕ್ಕಳನ್ನು ಕೇಳುವ ಸ್ಥಿತಿ ಬಂದಿದೆ. ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ, ವರುಣಾ ಬರೋಕೆ ಮನೆಯಲ್ಲಿ ವಿರೋಧವಿದೆ. ಹೆಚ್‍ಡಿಕೆಗೆ ಮಗ ನಿಖಿಲ್ (Nikhil Kumaraswamy) ಚಿಂತೆ, ರೇವಣ್ಣಗೆ ಪತ್ನಿ ಭವಾನಿ ಚಿಂತೆ, ಇಂತಹ ನಾಯಕರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಬಸವರಾಜ ಬೊಮ್ಮಾಯಿರವರ ಮಾತು ಸೌಮ್ಯವಾಗಿದೆ. ವಿರೋಧ ಪಕ್ಷದವರು ಮಾತು ಎತ್ತಿದ್ರೆ ಧಮ್ ಬಗ್ಗೆ ಮಾತನಾಡುತ್ತಾರೆ. ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ಕಳಸಾ ಬಂಡೂರಿ ಯೋಜನೆ ಸಾಕಾರಗೊಳ್ತಿದೆ ಅದು ಧಮ್ ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗ ಆರೋಪ – ಸುಪ್ರೀಂಕೋರ್ಟ್ ಮೆಟ್ಟಿಲೇರಿದ ವಿಪಕ್ಷಗಳು

ಸಮಾಜ ಕಟ್ಟುವ ರೈತರಿಗೆ ಭವಿಷ್ಯ ಕಲ್ಪಿಸುತ್ತಿದ್ದಾರಲ್ಲ ಅದು ಧಮ್. ಭದ್ರಾ ಮೇಲ್ದಂಡೆ ಯೋಜನೆ ಜಾರಿ ಮಾಡ್ತಿದ್ದಾರಲ್ಲ ಅದು ಧಮ್. ಜಲಜೀವನ್ ಮಿಷನ್ ಆಗಿರಬಹುದು ಬೇರೆ ಯೋಜನೆ ಇರಬಹುದು ನಾವು ತಾರತಮ್ಯ ಮಾಡ್ತಿಲ್ಲ. ಕೇವಲ ಹಿಂದೂಗಳು ಇರುವ ಬೀದಿಗಳಲ್ಲಿ ಮಾತ್ರ ಅಭಿವೃದ್ಧಿ ಮಾಡ್ತಿಲ್ಲ. ಮುಸಲ್ಮಾನರು ವಾಸವಿರುವ ಬೀದಿಗಳಲ್ಲಿಯೂ ಅಭಿವೃದ್ಧಿ ಆಗಿದೆ. ಕೇಂದ್ರದಲ್ಲಿ ಮೋದಿ, ಭಾರತದಲ್ಲಿ ಬೊಮ್ಮಾಯಿ ಸರ್ಕಾರ ಇಂತಹ ಡಬಲ್ ಎಂಜಿನ್ ಸರ್ಕಾರ ಮುಂದಿನ ದಿನಗಳಲ್ಲಿ ಬರಬೇಕು. ರಮೇಶ್ ಜಾರಕಿಹೊಳಿ ಮತ್ತೆ ಕ್ಯಾಬಿನೆಟ್‍ನಲ್ಲಿ ಇರಬೇಕು ಎಂದು ತಿಳಿಸಿದರು.

ರಾಹುಲ್ ಗಾಂಧಿ ಭಾರತ್ ಜೋಡೋ (Bharat Jodo) ಪಾದಯಾತ್ರೆ ಮಾಡಿದ್ರು. ಕಾಶ್ಮೀರಕ್ಕೆ ಹೋದ ಅವರು ಅಣ್ಣ ತಂಗಿ ಬರಫ್ ಮೇಲೆ ಆಟ ಆಡಿದ್ರು. ಮುಸಲ್ಮಾನರು ದೇಶ ಪ್ರೇಮಿಗಳು ಇದ್ದಾರೆ. ನೀವು ಅವರ ಕೈಯಲ್ಲಿ ಗನ್ ಕೊಟ್ಟಿದ್ರಿ, ಮೋದಿ ಅವರ ಕೈಯಲ್ಲಿ ಧ್ವಜ ಕೊಟ್ಟಿದ್ದಾರೆ. ಹೆಂಡತಿ ಮಕ್ಕಳ ಬಗ್ಗೆ ವಿಚಾರ ಮಾಡುವ ರಾಜಕಾರಣಿಗಳಿಗೆ ರಿಟೈರ್‍ಮೆಂಟ್ ಕೊಡಿ ಎಂದು ಪ್ರತಾಪ್ ಸಿಂಹ ಹೇಳಿದರು.

 

Share This Article
Leave a Comment

Leave a Reply

Your email address will not be published. Required fields are marked *