ಶಿಲ್ಪಾ ಶೆಟ್ಟಿಗೆ ಕನ್ನಡ-ತೆಲುಗು ವ್ಯತ್ಯಾಸ ಗೊತ್ತಿಲ್ವಾ? ಕಿಡಿಕಾರಿದ ಕನ್ನಡಿಗರು

Public TV
2 Min Read

ರಾವಳಿ ಬ್ಯೂಟಿ ಶಿಲ್ಪಾ ಶೆಟ್ಟಿ (Shilpa Shetty)  17 ವರ್ಷಗಳ ನಂತರ ಕನ್ನಡ ಸಿನಿಮಾಗೆ ಕಂಬ್ಯಾಕ್ ಮಾಡಿದ್ದಾರೆ. `ಕೆಡಿ’ (KD Film) ಧ್ರುವ ಸರ್ಜಾ (Dhruva Sarja) ಸಿನಿಮಾಗೆ ನಟಿ ಸಾಥ್ ನೀಡಿದ್ದಾರೆ. ನಟಿಯ ಲುಕ್‌ಗೆ ಮೆಚ್ಚುಗೆ ವ್ಯಕ್ತವಾದ ಬೆನ್ನಲ್ಲೇ ಕನ್ನಡ (Kannada) ಚಿತ್ರವನ್ನ ತೆಲುಗಿನಲ್ಲಿ (Telagu) ಶುಭಾಶಯ ಹೇಳುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಶಿಲ್ಪಾ ಶೆಟ್ಟಿ ಗುರಿಯಾಗಿದ್ದಾರೆ.

ಯುಗಾದಿ ಹಬ್ಬದಂದು `ಕೆಡಿ’ ಚಿತ್ರದ ಶಿಲ್ಪಾ ಶೆಟ್ಟಿ ಪಾತ್ರದ ಸತ್ಯವತಿ ಲುಕ್‌ನ ರಿವೀಲ್ ಮಾಡಿದ್ದರು. ತೊಂಬತ್ತರ ದಶಕದ ಸೀರೆ, ಹೇರ್‌ಸ್ಟೈಲ್, ಕನ್ನಡಕ ಹಾಗೂ ಕೈಯಲ್ಲೊಂದು ಬ್ಯಾಗ್ ಹಿಡಿದು ನಡೆದು ವಿಂಟೇಜ್ ಕಾರೊಂದರ ಮುಂದೆ ಶಿಲ್ಪಾ ಶೆಟ್ಟಿ ನಡೆದು ಬರುತ್ತಿರುವ ಪೋಸ್ಟರ್ ಇದಾಗಿದ್ದು, ಈ ಪೋಸ್ಟರ್ ಅನ್ನು ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಆದರೆ ಪೋಸ್ಟರ್ ಹಂಚಿಕೊಳ್ಳುವಾಗ ಶಿಲ್ಪಾ ಶೆಟ್ಟಿ ಬರೆದಿರುವ ಸಾಲುಗಳು ಇದೀಗ ಕನ್ನಡಿಗರ ಕೋಪಕ್ಕೆ ಕಾರಣವಾಗಿವೆ. ಶಿಲ್ಪಾ ಶೆಟ್ಟಿ ತೆಲುಗಿನಲ್ಲಿ `ಯುಗಾದಿ ಶುಭಾಕಾಂಕ್ಷಲು’ ಎಂದು ತೆಲುಗಿನಲ್ಲಿ ಶುಭ ಕೋರಿದ್ದಾರೆ. ಈ ಪೋಸ್ಟ್‌ನಲ್ಲಿ ಎಲ್ಲಿಯೂ ಸಹ ಕನ್ನಡವಿಲ್ಲ. ಕನ್ನಡ ಚಿತ್ರದ ಪೋಸ್ಟರ್ ಹಂಚಿಕೊಳ್ಳುವಾಗ, ಕನ್ನಡ ಚಿತ್ರರಂಗಕ್ಕೆ ಹಲವು ವರ್ಷಗಳ ಬಳಿಕ ಮರಳಿ ಬರುತ್ತಿರುವ ವಿಷಯವನ್ನು ಯುಗಾದಿ ಹಬ್ಬದ ವಿಶೇಷ ದಿನದಂದು ತಿಳಿಸುವಾಗ ಕನ್ನಡದ ಬದಲು ತೆಲುಗು ಬಂದದ್ದಾದರೂ ಯಾಕೆ ಎಂಬ ಪ್ರಶ್ನೆ ಕನ್ನಡಿಗರಲ್ಲಿ ಮನೆ ಮಾಡಿದೆ.

ಶಿಲ್ಪಾ ಶೆಟ್ಟಿ ಮಾಡಿರುವ ಪೋಸ್ಟ್ ಕಂಡ ಕೂಡಲೇ ಪ್ರತಿಕ್ರಿಯಿಸಿರುವ ಹಲವಾರು ನೆಟ್ಟಿಗರು ಕನ್ನಡ ಚಿತ್ರದ ಪೋಸ್ಟರ್‌ಗೂ ತೆಲುಗು ಭಾಷೆಗೂ ಎನು ಸಂಬಂಧ, ಅನುಭವಿ ನಟಿಯಾಗಿ ಈ ರೀತಿ ಮಾಡೋದು ಸರಿನಾ, ಮೂಲತಃ ಕರ್ನಾಟಕದವರೇ ಆಗಿ ಕನ್ನಡ ಕಡೆಗಣನೆ ಎಷ್ಟು ಸರಿ ಎಂದು ಕಿಡಿಕಾರಿದ್ದಾರೆ.  ಇಷ್ಟೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ನಟಿಯನ್ನ ಟ್ರೋಲ್ ಮಾಡ್ತಾ ಇದ್ದರೂ ಕೂಡ ಶಿಲ್ಪಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *