ಸಾಲುಮರದ ತಿಮ್ಮಕ್ಕನ ಆಶೀರ್ವಾದ ಪಡೆದ ಹಿಂದಿ ನಟಿ

Public TV
1 Min Read

ಸಾಲುಮರದ ತಿಮ್ಮಕ್ಕ (Saalu Marada Thimmakka) ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಸಾಲುಮರದ ತಿಮ್ಮಕ್ಕ ಅವರಿಂದ ಹಿಂದಿ ಕಿರುತೆರೆ ನಟಿ ಆಶೀರ್ವಾದ ಪಡೆದಿದ್ದಾರೆ. ಹಿಂದಿ ಬಿಗ್ ಬಾಸ್ ಸೀಸನ್ 16ರ ಸ್ಪರ್ಧಿ ಪ್ರಿಯಾಂಕಾ ಚಹರ್ ಚೌಧರಿ (Priyanka Chahar Choudhary) ಆಶೀರ್ವಾದ (Blessings) ಪಡೆದಿರುವ ವೀಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ.

ಬಿಗ್ ಬಾಸ್ (Bigg Boss Hindi 16)ಪ್ರಿಯಾಂಕಾಗೆ ಅವರ ನಟನೆಗೆ ಮತ್ತು ಬ್ಯೂಟಿಗೆ ದೊಡ್ಡ ಫ್ಯಾನ್ ಬೇಸ್‌ಯಿದೆ. ರಿಯಾಲಿಟಿ ಶೋನಿಂದ ಹೊರಬಂದ ನಂತರ ನಿರಂತರವಾಗಿ ಸುದ್ದಿಯಾಗುತ್ತಲೇ ಇದ್ದಾರೆ ಈ ನಟಿ. ಅವರು ಎಲ್ಲಿಗೆ ಹೋದರೂ, ಕ್ಯಾಮೆರಾದಲ್ಲಿ ಅವರನ್ನು ಗುರುತಿಸುತ್ತಾರೆ.

 

View this post on Instagram

 

A post shared by Instant Bollywood (@instantbollywood)

ಇತ್ತೀಚಿಗೆ ಪ್ರಿಯಾಂಕಾ ಚಹರ್ ಅವರು ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಭಾಗಿಯಾಗಲು ಬಂದಿದ್ದರು. ಈ ವೇಳೆ 110 ವರ್ಷದ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರನ್ನ ಭೇಟಿಯಾಗಿ, ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ನಟಿಯ ನಡೆ ಇದೀಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೂ ಓದಿ: ಅಮ್ಮನ ಮನೆಗೆ ವಿದಾಯ ಹೇಳುವಾಗ ಕಣ್ಣೀರಿಟ್ಟ ನಟಿ ಸ್ವರಾ ಭಾಸ್ಕರ್

ಇನ್ನೂ ಸಾಲುಮರದ ತಿಮ್ಮಕ್ಕ ಅವರು 80 ವರ್ಷಗಳಲ್ಲಿ 8ಸಾವಿರಕ್ಕೂ ಹೆಚ್ಚು ಮರಗಳನ್ನ ನೆಟ್ಟಿದ್ದಾರೆ. ಭಾರತದಲ್ಲಿಯೂ ಮತ್ತು ವಿದೇಶದಲ್ಲಿಯೂ ಇವರು ಫೇಮಸ್ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *