2024ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ದೀಪ‌ ಹಚ್ಚುವುದಕ್ಕೂ ಯಾರೂ ಸಿಗುವುದಿಲ್ಲ: ಕಾರಜೋಳ

By
2 Min Read

ಧಾರವಾಡ: 2024ರ ಲೋಕಸಭೆ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಸಮಾಪ್ತಿ ಆಗುತ್ತದೆ, ಆ ಸಮಯದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ದೀಪ‌ ಹಚ್ಚುವುದಕ್ಕೂ ಯಾರೂ ಸಿಗುವುದಿಲ್ಲ ಎಂದು ಸಚಿವ ಗೋವಿಂದ ಕಾರಜೋಳ (Govind Karjol) ವ್ಯಂಗ್ಯವಾಡಿದರು.

ಧಾರವಾಡ (Dharwad) ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah) 5 ವರ್ಷ ಏನು ಮಾಡಿದ್ದಾರೆ ಹೇಳಲಿ, ಇದು ರಾಷ್ಟ್ರೀಯ ಕಾಂಗ್ರೆಸ್ ಅಲ್ಲ, ಜವಾಹರಲಾಲ್ ಕಾಂಗ್ರೆಸ್ (Congress) ಅಲ್ಲ, ತಾಯಿ, ಮಕ್ಕಳ ಕಾಂಗ್ರೆಸ್ ಆಗಿದೆ. ತಾಯಿ, ಮಕ್ಕಳಿಗೆ ನಿಷ್ಠೆ ತೋರಿಸಿದವರಿಗೆ ಮಾತ್ರ ಪದಾಧಿಕಾರಿ ಮಾಡುತ್ತಾರೆ. ಸದ್ಯ ಕಾಂಗ್ರೆಸ್ ಅಳಿವಿನಂಚಿನಲ್ಲಿದೆ ಎಂದು ಟೀಕಿಸಿದರು.

ಕೆಂಪಣ್ಣನಿಗೆ ಕಾಂಗ್ರೆಸ್‌ನವರೇ ಕುಳಿತು ಅರ್ಜಿ ಬರೆಸಿದ್ದಾರೆ. ಕಾಂಗ್ರೆಸ್‌ನವರು ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬಂದವರು ಜಾಮೀನಿನ ಮೇಲೆ ಓಡಾಡುತ್ತಿದ್ದಾರೆ‌. ಅಂಥವರು ಈಗ ಬಿಜೆಪಿ (BJP) ಮೇಲೆ ಆರೋಪ‌ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗುವುದಕ್ಕೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಯೋಜನೆ ಆಧರಿಸಿ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದೇವೆ. ಮೋದಿಯವರು ದೇಶದ ಅಭಿವೃದ್ಧಿಯ ಅದ್ಭುತ ಕನಸುಗಾರರು. ಜನ್‌ಧನ್ ಖಾತೆ ಬಡವರಿಗೆ ಬ್ಯಾಂಕ್ ಅಕೌಂಟ್ ಆರಂಭಿಸುವಂತೆ ಮಾಡಿದ ಯೋಜನೆ 48 ಕೋಟಿ ಜನರಿಗೆ ಇದು ತಲುಪಿದೆ. ಕಾಂಗ್ರೆಸ್ (Congress) ಪಕ್ಷ ಬಡವರಿಗೆ ಬ್ಯಾಂಕ್ ತೋರಿಸುವ ಕೆಲಸ ಮಾಡಿರಲಿಲ್ಲ, ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ ಪಡೆದರೆ ಅಭಿವೃದ್ಧಿ ಹೆಚ್ಚಾಗುತ್ತದೆ ಎಂದು ಹೇಳಿದರು.

18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ, ಅಂತಹ ಹಳ್ಳಿಗಳಿಗೆ ಒಂದೇ ವರ್ಷದಲ್ಲಿ ವಿದ್ಯುತ್ ಕೊಟ್ಟಿದ್ದಾರೆ. ಅಲ್ಪಸಂಖ್ಯಾತ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ವಿಶೇಷ ಯೋಜನೆ ಕೊಟ್ಟಿದೆ. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಏನೂ ಮಾಡಿಲ್ಲ, ಆದರೆ ಕೀಳು ಮಟ್ಟಕ್ಕೆ ಇಳಿದು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ದೊಣ್ಣೆಯಿಂದ ತಲೆಗೆ ಹೊಡೆದು ತಂದೆಯಿಂದ್ಲೇ ಮಗಳ ಕೊಲೆ

ಮಹದಾಯಿ ಯೋಜನೆಗೆ ಡಿಪಿಆರ್‌ಗೆ ಅನುಮೋದನೆ ಆಗಿದೆ. ಪರಿಸರ ಸಚಿವಾಲಯದ ಅನುಮತಿ ಸಿಕ್ಕಿದೆ. ಈಗ ಅರಣ್ಯ ಸಚಿವಾಲಯದಿಂದ ಒಪ್ಪಿಗೆ ಹಂತದಲ್ಲಿದ್ದೇವೆ. ಕೂಡಲೇ ಟೆಂಡರ್ ಕರೆದು ಕೆಲಸ ಆರಂಭಿಸುತ್ತೇವೆ. ಮಹದಾಯಿಗೆ 1,000 ಕೋಟಿ ರೂ. ಬಜೆಟ್‌ನಲ್ಲಿ ತೆಗೆದಿಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಶಸ್ತ್ರಚಿಕಿತ್ಸೆ ನಂತ್ರ ಎರಡೂವರೆ ತಿಂಗಳ ಮಗು ಸಾವು – ನಕಲಿ ಡಾಕ್ಟರ್‌ ವಿರುದ್ಧ ಪ್ರಕರಣ ದಾಖಲು

Share This Article
Leave a Comment

Leave a Reply

Your email address will not be published. Required fields are marked *