‘ಟ್ವಿಂಕಲ್’ ಹಾಡು ಹೇಳುತ್ತಾ ಬಂದ ಶಿವಾಜಿ ಸುರತ್ಕಲ್ 2

Public TV
2 Min Read

ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿರುವ, ಆಕಾಶ್ ಶ್ರೀವತ್ಸ (Akash Srivatsa) ನಿರ್ದೇಶನದಲ್ಲಿ ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಶಿವಾಜಿ ಸುರತ್ಕಲ್ 2’ (Shivaji Suratkal 2) ಚಿತ್ರದ ‘ಟ್ವಿಂಕಲ್’ ಹಾಡು ಬಿಡುಗಡೆಯಾಗಿದೆ. ಆಕಾಶ್ ಶ್ರೀವತ್ಸ ಬರೆದಿರುವ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಇಶಾ ಸುಚಿ ಹಾಗೂ ಜೂಡಾ ಸ್ಯಾಂಡಿ ಹಾಡಿದ್ದಾರೆ.

‘ಶಿವಾಜಿ ಸುರತ್ಕಲ್ 1’ ಚಿತ್ರವನ್ನು ನಮ್ಮ ಹಾಗೂ ರಾಹುಲ್ ದ್ರಾವಿಡ್ ಕುಟುಂಬದವರು ಇದೇ ಜಾಗದಲ್ಲಿ ಒಟ್ಟಿಗೆ ನೋಡಿದ್ದೆವು. ಈಗ ‘ಶಿವಾಜಿ ಸುರತ್ಕಲ್ 2’ ತೆರೆಗೆ ಬರಲು ಸಿದ್ದಾವಾಗಿದೆ. ಶಿವಾಜಿ ಯಾವುದಾದರೂ ಕೇಸ್ ತೆಗೆದುಕೊಂಡರೆ ‘ಒಂದಾ ಜೈಲಿಗೆ, ಇಲ್ಲವಾ ಸ್ಮಶಾನಕ್ಕೆ’ ಎಂದು ಪ್ರಸಿದ್ದಿ. ‘ಶಿವಾಜಿ ಸುರತ್ಕಲ್ ೨’ ಚಿತ್ರದಲ್ಲಿ ಶಿವಾಜಿ ಯಾವ ಕೇಸ್? ತೆಗದುಕೊಳ್ಳುತ್ತಾನೆ ಎಂಬ ಕುತೂಹಲಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ. ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಉತ್ತಮವಾಗಿದೆ. ಇಂದು ಬಿಡುಗಡೆಯಾಗಿರುವ ಹಾಡು ಚೆನ್ನಾಗಿದೆ ಎಂದರು ನಟ ರಮೇಶ್ ಅರವಿಂದ್ (Ramesh Aravind).

ಇಂದು ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ನಟಿ ಸಂಗೀತ ಶೃಂಗೇರಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜೂಡ ಸ್ಯಾಂಡಿ ಅದ್ಭುತವಾಗಿ ಸಂಗೀತ ನೀಡಿದ್ದಾರೆ. ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ರಮೇಶ್ ಅವರು, ಜೀಪ್ ನಲ್ಲೂ ಸಹ ಕಾಣಿಸಿಕೊಳ್ಳುತ್ತಾರೆ. ಈ ಕುತೂಹಲ ಸದ್ಯಕ್ಕೆ ಹಾಗೆ ಇರಲಿ. ಏಪ್ರಿಲ್ 14 ಚಿತ್ರ ಬಿಡುಗಡೆಯಾಗುತ್ತಿದೆ ಅಂದು ಆ ಕುತೂಹಲಕ್ಕೆ ಉತ್ತರ ಸಿಗಲಿದೆ. ಸಹಕಾರ ನೀಡಿದ್ದ ಇಡೀ ನನ್ನ ತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ಆಕಾಶ್ ಶ್ರೀವತ್ಸ. ಇದನ್ನೂ ಓದಿ: ದೀಪಿಕಾ ಪಡುಕೋಣೆ ನಮ್ಮ ಭಾರತದ ಹೆಮ್ಮೆ ಎಂದು ಹಾಡಿ ಹೊಗಳಿದ ಕಂಗನಾ

ಈ ಚಿತ್ರದಲ್ಲಿ ರಮೇಶ್ ಅವರ ಪಾತ್ರ ನೋಡಿದರೆ, ನನಗೆ “ಅಮೃತ ವರ್ಷಿಣಿ” ಚಿತ್ರದ ಪಾತ್ರ ನೆನಪಾಗುತ್ತದೆ. ನಾನು ಈಗಾಗಲೇ ಸಿನಿಮಾ ನೋಡಿದ್ದೇನೆ. ಜನ ಮೆಚ್ಚಿಕೊಳ್ಳುವ ಭರವಸೆಯಿದೆ ಎನ್ನುತ್ತಾರೆ ನಿರ್ಮಾಪಕ ಅನೂಪ್ ಗೌಡ. ಚಿತ್ರದಲ್ಲಿ ಐದು ಹಾಡುಗಳಿದೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ ಎಂದ ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ, ಹಾಡುಗಳನ್ನು ಬರೆದಿರುವವರ ಹಾಗೂ ಹಾಡಿರುವವರ ಹೆಸರುಗಳನ್ನು ಪರಿಚಯಿಸಿದರು.

ಚಿತ್ರದಲ್ಲಿ ಅಭಿನಯಿಸಿರುವ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್ (Meghana Gaonkar), ಹಾಡಿನಲ್ಲಿ ನಟಿಸಿರುವ ಸಂಗೀತ ಶೃಂಗೇರಿ, ನಟರಾದ ರಘು ರಮಣಕೊಪ್ಪ, ವಿನಾಯಕ್ ಜೋಶಿ ಮುಂತಾದವರು ತಮ್ಮ ಪಾತ್ರ ಹಾಗೂ ಹಾಡಿನ ಬಗ್ಗೆ ಮಾತನಾಡಿದರು.

Share This Article
Leave a Comment

Leave a Reply

Your email address will not be published. Required fields are marked *