ಕಾಂಗ್ರೆಸ್‍ನಲ್ಲಿ ಟಿಕೆಟ್ ಫೈಟ್- ದೆಹಲಿಯಲ್ಲಿ ದಲಿತ ಎಡ ನಾಯಕರ ಠಿಕಾಣಿ

Public TV
2 Min Read

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆ (Vidhanasabha Election) ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್‍ (Congres) ನಲ್ಲಿ ಟಿಕೆಟ್ ಫೈಟ್ ಜೋರಾಗಿದೆ. ದಲಿತ ಎಡ ಸಮುದಾಯಕ್ಕೆ 15 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಸಮುದಾಯದ ನಾಯಕರು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ದೆಹಲಿಯಲ್ಲಿ ಠಿಕಾಣಿ ಹಾಕಿದ್ದಾರೆ.

ಮಾಜಿ ಸಂಸದರಾದ ಕೆ.ಹೆಚ್. ಮುನಿಯಪ್ಪ (K H Muniyappa) , ಬಿ.ಎನ್ ಚಂದ್ರಪ್ಪ, ಮಾಜಿ ಸಚಿವ ಹೆಚ್. ಆಂಜನೇಯ (Aanjaneya), ಆರ್.ಬಿ ತಿಮ್ಮಾಪುರ, ಸಂಸದ ಎಲ್. ಹನುಮಂತಯ್ಯ ಎಐಸಿಸಿ ಅಧ್ಯಕ್ಷರ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಭೇಟಿಗೆ ಸಮಯ ಕೇಳಿದ್ದು ಸಂಜೆ 6 ಗಂಟೆಗೆ ಸಭೆ ನಡೆಯುವ ಸಾಧ್ಯತೆಗಳಿದೆ.

ಎಡ ಸಮುದಾಯದ ನಾಯಕರು ಪಾವಗಡ, ದೇವನಹಳ್ಳಿ, ಕೆಜಿಎಫ್, ಹೊಳಲ್ಕೆರೆ, ಶಿವಮೊಗ್ಗ ಗ್ರಾಮಂತರ, ಮಾಯಕೊಂಡ, ಶಿರಹಟ್ಟಿ, ಔರಾದ್, ಲಿಂಗಸ್ಗೂರು ಸೇರಿದಂತೆ 15 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಕಳೆದ ಬಾರಿ 11 ಸ್ಥಾನಗಳನ್ನು ನೀಡಿದ್ದು ಈ ಬಾರಿ ಹದಿನೈದಕ್ಕೆ ಏರಿಸಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ನಿಮಗೆ ಒಳ್ಳೆಯದಾಗಲಿ, ರಾಜಕೀಯವಾಗಿ ಹಾಳಾಗಿ ಹೋಗಿ – ಈಶ್ವರಪ್ಪ

ಈ ಬಗ್ಗೆ ಮಾತನಾಡಿದ ಮಾಜಿ ಸಚಿವ ಹೆಚ್.ಆಂಜನೇಯ, ದೆಹಲಿಯ ಅಕ್ಬರ್ ರಸ್ತೆಯಲ್ಲಿ ಕಾಂಗ್ರೆಸ್ ದೇವಾಲಯ ಇದೆ, ಅಲ್ಲಿ ನಮ್ಮ ಮನವಿಯನ್ನು ಮುಂದಿಡುತ್ತೇವೆ. ಮಾದಿಗ ಸಮುದಾಯದ ರಾಜಕೀಯ ಪ್ರಾತಿನಿಧ್ಯ ಕ್ಷೀಣಿಸುತ್ತಿದೆ. ಸಮುದಾಯದ ರಾಜಕೀಯ ಬಲಪಡಿಸಬೇಕಿದೆ ಸಮುದಾಯದ ನಾಯಕರ ತಂಡ ದೆಹಲಿಗೆ ಬಂದಿದ್ದೇವೆ. ನಮ್ಮ ಅದೃಷ್ಟ ಖರ್ಗೆಯವರು ಅಧ್ಯಕ್ಷರಾಗಿದ್ದಾರೆ. ಅವರಲ್ಲಿ ಮನವಿ ಮಾಡಿ ಅವಕಾಶ ಕೇಳುತ್ತೇವೆ. ಹೆಚ್ಚು ಸೀಟುಗಳನ್ನು ಪಡೆದು ಕಾಂಗ್ರೆಸ್ ಗೆಲ್ಲಿಸುತ್ತೇವೆ. ದೇವನಹಳ್ಳಿಯಲ್ಲಿ ಮುನಿಯಪ್ಪನವರಿಗೆ ಕೇಳುತ್ತಿದ್ದೇವೆ, ಪಾವಗಡ ಬೇಕೆಬೇಕು ಎಂದು ನಾವು ಕೇಳುತ್ತಿದ್ದೇವೆ ಎಂದರು.

ಮಾಜಿ ಸಂಸದ ಬಿ.ಎನ್ ಚಂದ್ರಪ್ಪ (B N Chandrappa) ಮಾತನಾಡಿ, ಟಿಕೆಟ್ ಕೇಳುವ ನಾವು ಮಗು ಇದ್ದ ಹಾಗೆ, ಪಕ್ಷ ತಾಯಿ ಇದ್ದ ಹಾಗೆ. ಮಗು ಅಳದೆ ತಾಯಿ ಹಾಲು ಕುಡಿಸುವುದಿಲ್ಲ. ಹಾಗಾಗಿ ಸಮಯದಾಯದ ಪರ ಮನವಿಗೆ ಬಂದಿದ್ದೇವೆ. ನಮ್ಮ ಸಮುದಾಯವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು, ನಮ್ಮಗೆ ಟಿಕೆಟ್ ನೀಡುವುದು ಸಾಮಾನ್ಯ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ಸಹಕಾರಿಯಾಗಲಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *