ದೆಹಲಿ ಶಾಸಕರ ಸಂಬಳ ಭರ್ಜರಿ ಹೆಚ್ಚಳ

Public TV
1 Min Read

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಶಾಸಕರ (MLA) ವೇತನವನ್ನು ಭಾರೀ ಹೆಚ್ಚಳ (Salary Hike) ಮಾಡಲಾಗಿದೆ. ದೆಹಲಿ ಶಾಸಕರ ವೇತನ ಭತ್ಯೆ, ಪಿಂಚಣಿ ತಿದ್ದುಪಡಿಗೆ ದೆಹಲಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರ ಪರಿಣಾಮವಾಗಿ ದೆಹಲಿ ಶಾಸಕರ ವೇತನ ತಿಂಗಳಿಗೆ 54,000 ರೂ. ಯಿಂದ 90,000 ರೂ.ಗೆ ಏರಿಕೆಯಾಗಿದೆ.

ಕಾಯಿದೆ ಅಂಗೀಕಾರದ ಬಳಿಕ ದೆಹಲಿ ವಿಧಾನಸಭೆಯ ಶಾಸಕರು ತಮ್ಮ ಮಾಸಿಕ ವೇತನ ಹಾಗೂ ಭತ್ಯೆಗಳಲ್ಲಿ ಶೇ.66.7 ರಷ್ಟು ಹೆಚ್ಚಳವನ್ನು ಪಡೆಯಲಿದ್ದಾರೆ. ಇದರ ಪ್ರಕಾರ ತಿಂಗಳಿಗೆ ಸುಮಾರು 54,000 ರೂ. ಯಿಂದ 90,000 ರೂ. ವರೆಗೆ ವೇತನದಲ್ಲಿ ಹೆಚ್ಚಳವನ್ನು ಪಡೆಯಲಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಬಗ್ಗೆ ಮಾತನಾಡಲು ಮೋದಿಯವರಿಗೆ ಸಬ್ಜೆಕ್ಟ್ ಇಲ್ಲ: ಹೆಚ್‍ಡಿಕೆ

ಇದಲ್ಲದೇ ಮುಖ್ಯಮಂತ್ರಿ, ಸಚಿವರು, ಸ್ಪೀಕರ್, ಉಪಸಭಾಪತಿ, ಮುಖ್ಯ ಸಚೇತಕರು ಮತ್ತು ವಿರೋಧ ಪಕ್ಷದ ನಾಯಕರ ಸಂಬಳ ಮಾಸಿಕವಾಗಿ 72,000 ರೂ. ಯಿಂದ 1,70,000 ರೂ.ಗೆ ಏರಿಕೆಯಾಗಿದೆ.

ದೆಹಲಿ ಸರ್ಕಾರದ ಕಾನೂನು, ನ್ಯಾಯ ಮತ್ತು ಶಾಸಕಾಂಗ ವ್ಯವಹಾರಗಳ ಇಲಾಖೆ ಗುರುವಾರ ಹೊರಡಿಸಿದ ಅಧಿಸೂಚನೆಯಲ್ಲಿ ಈ ಬದಲಾವಣೆಗಳನ್ನು ಪ್ರಕಟಿಸಿದೆ. 2011ರ ಬಳಿಕ ದೆಹಲಿ ಶಾಸಕರ ವೇತನದಲ್ಲಿ ಮಾಡಲಾಗಿರುವ ಮೊದಲ ಪರಿಷ್ಕರಣೆ ಇದಾಗಿದೆ. ಈ ಕ್ರಮಕ್ಕೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿದ್ದು, ಈ ಬದಲಾವಣೆಗಳು ಫೆಬ್ರವರಿ 14ರಿಂದ ಜಾರಿಗೆ ಬಂದಿದೆ. ಇದನ್ನೂ ಓದಿ: ತುರ್ತು ವೈದ್ಯಕೀಯ ಚಿಕಿತ್ಸೆ- ಕರಾಚಿಯಲ್ಲಿ ಭೂಸ್ಪರ್ಶ ಮಾಡುವ ಮೊದಲೇ ಪ್ರಯಾಣಿಕ ಸಾವು

Share This Article
Leave a Comment

Leave a Reply

Your email address will not be published. Required fields are marked *