ಉದ್ಘಾಟನೆಗೂ ಮುನ್ನವೇ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ಗಿನ್ನಿಸ್ ದಾಖಲೆ

Public TV
1 Min Read

– ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ ಭಾನುವಾರ ದೇಶಕ್ಕೆ ಸಮರ್ಪಣೆ
– ರಿಮೋಟ್ ಮೂಲಕ ನರೇಂದ್ರ ಮೋದಿ ಚಾಲನೆ

ಹುಬ್ಬಳಿ: ಉದ್ಘಾಟನೆಗೂ ಮುನ್ನವೇ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ (Shree Siddharoodha Swamiji Railway Station) ಗಿನ್ನಿಸ್ ದಾಖಲೆ (Guinness World Records) ಬರೆದಿದ್ದು, ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರಂ (Railway Platform) ಭಾನುವಾರ ದೇಶಕ್ಕೆ ಸಮರ್ಪಣೆಯಾಗಲಿದೆ. ಧಾರವಾಡದಲ್ಲಿ ನಡೆಯುವ ಐಐಟಿ ಉದ್ಘಾಟನೆ ವೇದಿಕೆ ಕಾರ್ಯಕ್ರಮದಲ್ಲಿ ರಿಮೋಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ಲಾಟ್‌ಫಾರಂಗೆ ಚಾಲನೆ ನೀಡಲಿದ್ದಾರೆ.

 

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಥಾಪನೆಗೊಂಡಿರುವ ಅತಿ ಉದ್ದದ ಪ್ಲಾಟ್‌ಫಾರಂ ಇದಾಗಿದ್ದು, 1,507 ಮೀಟರ್ ಉದ್ದವನ್ನೊಳಗೊಂಡಿದೆ. ಇಷ್ಟು ದಿನ 4 ಪ್ಲಾಟ್‌ಫಾರಂ ಹೊಂದಿದ್ದ ಹುಬ್ಬಳಿ ರೈಲ್ವೆ ನಿಲ್ದಾಣದಲ್ಲಿ ಈಗ ಮತ್ತೆರಡು ಪ್ಲಾಟ್‌ಫಾರಂ ಆರಂಭವಾಗುತ್ತಿದ್ದು, ಒಟ್ಟು 8 ಪ್ಲಾಟ್‌ಫಾರಂಗಳು ಈಗ ಪ್ರಯಾಣಿಕರಿಗೆ ಲಭ್ಯವಿದೆ. ಇದಕ್ಕೂ ಮುನ್ನ ಉತ್ತರ ಪ್ರದೇಶದ ಗೋರಖ್‌ಪುರ್ ರೈಲ್ವೆ ನಿಲ್ದಾಣ ಅತಿ ಉದ್ದದ ಪ್ಲಾಟ್‌ಫಾರಂ ಹೊಂದಿತ್ತು. ಇದನ್ನೂ ಓದಿ: ರಾಜ್ಯಕ್ಕೆ ಇಂದು ಪ್ರಧಾನಿ ಮೋದಿ ಆಗಮನ – ಮಂಡ್ಯ, ಧಾರವಾಡದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

ಇದೀಗ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್‌ಫಾರಂ ಹೊಂದಿದ ಹೆಗ್ಗಳಿಕೆಯನ್ನು ವಾಣಿಜ್ಯ ನಗರಿ ಹುಬ್ಬಳ್ಳಿ ಪಡೆಯುತ್ತಿದೆ. ನೈರುತ್ವ ರೈಲ್ವೆ ವಲಯದಿಂದ ಈ ಅತಿ ದೊಡ್ಡ ಪ್ಲಾಟ್‌ಫಾರಂ ಸ್ಥಾಪನೆ ಮಾಡಲಾಗಿದೆ. ಇದರ ಜೊತೆಗೆ 2 ಎಲೆಕ್ಟ್ರಿಕಲ್ ಇಂಜಿನ್ ಟ್ರೈನ್, ಮೇಲ್ದರ್ಜೆಗೇರಿದ ಹಳಿ ಸೇರಿದಂತೆ 552 ಕೋಟಿ ರೂ. ವೆಚ್ಚದ ರೈಲ್ವೆ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೆ ಕ್ಷಣಗಣನೆ; ಕನ್ನಡದಲ್ಲೇ ಟ್ವೀಟ್‌ ಮಾಡಿ ಮೋದಿ ಬಣ್ಣನೆ


Share This Article
Leave a Comment

Leave a Reply

Your email address will not be published. Required fields are marked *