ಒಂದೇ ಗ್ರಾಮದಲ್ಲಿ ಶಾಸಕನ ಪುತ್ರನಿಗೆ ಪ್ರತಿಭಟನೆ ಬಿಸಿ, ಸನ್ಮಾನದ ಖುಷಿ

Public TV
1 Min Read

ಮೈಸೂರು: ಕೆ.ಆರ್ ನಗರ ಕ್ಷೇತ್ರ (K R Nagar Constituency) ದಲ್ಲಿ ಚುನಾವಣೆ ಜಿದ್ದಾಜಿದ್ದು ಜೋರಾಗಿದೆ. ಅಪ್ಪನ ಪರ ಪ್ರಚಾರಕ್ಕೆ ಹೋದ ಮಗನಿಗೆ ಒಂದೇ ಊರಿನಲ್ಲಿ ಸನ್ಮಾನ ಮತ್ತು ಟೀಕೆ ಎರಡೂ ಸಿಕ್ಕಿದೆ.

ಮೈಸೂರು ಜಿಲ್ಲೆ ಕೆ.ಆರ್ ನಗರ ಕ್ಷೇತ್ರದ ಸಾಲಿಗ್ರಾಮ ತಾಲೂಕಿನ ಕುಲುಮೆ ಹೊಸೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕ್ಷೇತ್ರದ ಪ್ರತಿಯೊಬ್ಬ ಮತದಾರರಿಗೆ ಶಾಸಕ ಸಾ.ರಾ ಮಹೇಶ್ ಕುಕ್ಕರ್ ವಿತರಣೆ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ಹಲವು ದಿನಗಳಿಂದ ಖುದ್ದು ಪ್ರತಿಯೊಂದು ಗ್ರಾಮಗಳಿಗೆ ಸಾ.ರಾ ಮಹೇಶ್ ಪುತ್ರ ಸಾ.ರಾ ಜಯಂತ್ (Sara Jayanth) ತೆರಳಿ ಜನರನ್ನು ಮಾತಾಡಿಸುತ್ತಿದ್ದಾರೆ. ಇದನ್ನೂ ಓದಿ: ಡಿಸ್ಕೌಂಟ್ ಸಮಯ ವಿಸ್ತರಣೆಯಾದ್ರೂ, ಟ್ರಾಫಿಕ್ ಫೈನ್ ಕಟ್ಟೋಕೆ ಆಸಕ್ತಿ ತೋರದ ವಾಹನ ಸವಾರರು

ಈ ವೇಳೆ ಶಾಸಕ ಸಾ.ರಾ ಮಹೇಶ್ (Sara Mahesh) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥ, ನಾನು ಕಾಂಗ್ರೆಸ್ ನ ರವಿಶಂಕರ್ ಓಟ್ ಹಾಕ್ತೇನೆ ಎನ್ನುವ ಮೂಲಕ ಜೆಡಿಎಸ್ ಕಾರ್ಯಕರ್ತರ ಜೊತೆ ಜಗಳಕ್ಕೆ ಇಳಿದಿದ್ದಾನೆ. ಆಗ ಕೆಲ ಕಾಲ ಸಾ.ರಾ ಮಹೇಶ್ ಬೆಂಬಲಿಗರು ಹಾಗೂ ಗ್ರಾಮಸ್ಥನ ನಡುವೆ ಮಾತಿನ ಚಕಮಕಿ ಆಗಿದೆ. ಪರಿಸ್ಥಿತಿ ಅರಿತು ಸ್ಥಳದಿಂದ ಶಾಸಕರ ಪುತ್ರ ಅಲ್ಲಿಂದ ಮುಂದೆ ಸಾಗಿದ್ದಾರೆ. ಅದೇ ಗ್ರಾಮದ ಮತ್ತೊಬ್ಬ ಗ್ರಾಮಸ್ಥ ಸಾ.ರಾ ಮಹೇಶ್ ಪುತ್ರನಿಗೆ ಹಾರ ಹಾಕಿ ಸನ್ಮಾನ ಮಾಡಿ ಕಳುಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *