ಕಬ್ಬನ್ ಪಾರ್ಕ್‌ನಲ್ಲಿ ಮಾರ್ಚ್ 11,12 ರಂದು ಮಹಿಳಾ ಕ್ರೀಡಾ ಹಬ್ಬ: ಡಾ. ನಾರಾಯಣಗೌಡ

Public TV
1 Min Read

ಬೆಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ (International Women’s Day) ಅಂಗವಾಗಿ ಮಾರ್ಚ್ 11 ಮತ್ತು 12 ರಂದು ಮಹಿಳಾ ಕ್ರೀಡಾ ಹಬ್ಬ (Women’s Sports Festival) ಆಯೋಜಿಸುವುದಾಗಿ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ (Narayana Gowda) ತಿಳಿಸಿದ್ದಾರೆ.

ಮಹಿಳೆಯರಲ್ಲಿ ಕ್ರೀಡಾ ಉತ್ಸಾಹವನ್ನು ಹುರಿದುಂಬಿಸಲು ಹಾಗೂ ಕ್ರೀಡಾ ಮನೊಭಾವನೆಯನ್ನು ಮೂಡಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ‘ಮಹಿಳಾ ಕ್ರೀಡಾ ಹಬ್ಬ’ವನ್ನು ಆಯೋಜಿಸಲಾಗುತ್ತಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಉದ್ಘಾಟಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗಾಗಿ ಕ್ರೀಡೆಗಳು, ಸಾಹಸ ಕ್ರೀಡೆಗಳು, ಗ್ರಾಮೀಣ ಮತ್ತು ಸಾಂಪ್ರದಾಯಿಕ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲೆ ಮತ್ತು ಕರಕುಶಲಗಳು, ಮನರಂಜನೆ ಮತ್ತು ಮೋಜಿನ ಆಟಗಳು ನಡೆಯಲಿದ್ದು, ಕಾರ್ನಿವಲ್ ಮಳಿಗೆಗಳು ಮತ್ತು ಆಹಾರದ ಮಳಿಗೆಗಳು ಕೂಡಾ ಇರಲಿವೆ. ಇದನ್ನೂ ಓದಿ: ವಿಧಾನಸಭಾ ಚುನಾವಣೆಗೆ ರಾಯಚೂರು ಜಿಲ್ಲಾಡಳಿತ ಸಿದ್ಧತೆ- ಇವಿಎಂ ಪ್ರಾತ್ಯಕ್ಷಿಕೆ ಕೇಂದ್ರಗಳ ಆರಂಭ

ಹಾಕಿ, ಕಬ್ಬಡಿ, ಆರ್ಚರಿ ಮತ್ತು ಸ್ಕೇಟಿಂಗ್, ಸಾಹಸ ಕ್ರೀಡೆಗಳಲ್ಲಿ ವಾಲ್ ಕ್ಲೈಂಬಿಗ್, ರಾಪಲಿಂಗ್, ಕಯಾಕಿಂಗ್ ಮತ್ತು ರಾಫ್ಟಿಂಗ್, ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಕುಂಟೆ ಬಿಲ್ಲೆ, ಅಳಿಗುಳಿಮನೆ ಆಟ, ಲಗೋರಿ, ಹಗ್ಗ ಜಗ್ಗಾಟ, ಕಲೆ ಮತ್ತು ಕರಕುಶಲಗಳಲ್ಲಿ ರಂಗೋಲಿ, ಮುಖ ಚಿತ್ರೀಕರಣ, ಕ್ಯಾಲಿಗ್ರಫಿ, ಮೆಹಂದಿ ಮತ್ತು ಮಡಿಕೆ ತಯಾರಿಕೆ ಮನರಂಜನೆ ಮತ್ತು ಮೋಜಿನ ಆಟಗಳಲ್ಲಿ ಮ್ಯೂಸಿಕಲ್ ಪಜಲ್‌ಗಳು, ಡಮ್ಸರೇಡ್ಸ್, ಮೆಮೊರಿ ಆಟಗಳು, ಮ್ಯೂಸಿಕಲ್ ಚೇರ್, ಕೆರೆ ದಡ, ಬಕೆಟ್ ಬಾಲ್ ಮತ್ತಷ್ಟು ಹಲವಾರು ಆಟಗಳು, ಮತ್ತಿತರ ಚಟುವಟಿಕೆಗಳು ನಡೆಯಲಿವೆ.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾ ಹಬ್ಬವನ್ನು ಯಶಸ್ವಿಗೊಳಿಸುವಂತೆ ಸಚಿವ ಡಾ. ನಾರಾಯಣಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮಲೆನಾಡಿಗೂ ಕಾಲಿಟ್ಟ ಕುಕ್ಕರ್ ಪಾಲಿಟಿಕ್ಸ್- ಕಾಂಗ್ರೆಸ್ ಶಾಸಕರ ನಡೆಗೆ ತೀವ್ರ ಆಕ್ರೋಶ

Share This Article
Leave a Comment

Leave a Reply

Your email address will not be published. Required fields are marked *