ಐಎಎಸ್ ಅಧಿಕಾರಿಯನ್ನೇ ಒತ್ತೆಯಾಳಾಗಿ ಇರಿಸಿ, ಥಳಿಸಿದ ಜನಸಮೂಹ

Public TV
2 Min Read

ಗಾಂಧಿನಗರ: ಐಎಎಸ್ ಅಧಿಕಾರಿಯೊಬ್ಬರನ್ನು (IAS officer) ಜನಸಮೂಹವೊಂದು ಒತ್ತೆಯಾಳಾಗಿ (Hostage) ಇರಿಸಿ ಥಳಿಸಿರುವ ಘಟನೆ ಗುಜರಾತ್‌ನಲ್ಲಿ (Gujarat) ನಡೆದಿದೆ.

ಗುಜರಾತ್‌ನ ಐಎಎಸ್ ಅಧಿಕಾರಿ ನಿತಿನ್ ಸಾಂಗ್ವಾನ್ (Nitin Sangwan) ಅವರು ಸಬರ್‌ಕಾಂತ್ ಜಿಲ್ಲೆಯ ಘರೋಯ್ ಅಣೆಕಟ್ಟಿನ ಬಳಿಯ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭ ಮೀನುಗಾರಿಕೆಯಲ್ಲಿ ತೊಡಗಿದ್ದ ಗುಂಪೊಂದು ಅವರನ್ನು ಒತ್ತೆಯಾಳಾಗಿ ಇರಿಸಿ, ಥಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

CRIME 2

ವರದಿಗಳ ಪ್ರಕಾರ ಮೀನುಗಾರಿಕೆ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದ್ದು, ಈ ಹಿನ್ನೆಲೆ ಐಎಎಸ್ ಅಧಿಕಾರಿಯನ್ನು ಜನರ ಗುಂಪು ಒತ್ತೆಯಾಳಾಗಿ ಇರಿಸಿ ಥಳಿಸಿದೆ ಎನ್ನಲಾಗಿದೆ.

ಮೀನುಗಾರಿಕಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಾಂಗ್ವಾನ್ ಅವರು ಸೋಮವಾರ ತಮ್ಮ ಅಧೀನ ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮೀನುಗಾರಿಕೆಯಲ್ಲಿ ತೊಡಗಿದ್ದವರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ತಮ್ಮ ಜೊತೆಗಿದ್ದ ಸಿಬ್ಬಂದಿ ಹಲ್ಲೆಯಲ್ಲಿ ಗಾಯಗೊಂಡಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

KILLING CRIME

ಸಾಂಗ್ವಾನ್ ಅವರು ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ಮೀನುಗಾರಿಕಾ ಗುತ್ತಿಗೆದಾರರಲ್ಲಿ ಒಬ್ಬರಾದ ಬಾಬು ಪರ್ಮಾರ್ ಪ್ರಮುಖ ಆರೋಪಿ. ಸಾಂಗ್ವಾನ್ ಸ್ಥಳಕ್ಕೆ ಭೇಟಿ ನೀಡಿದ್ದಾಗ ಆತ ವಾಗ್ವಾದ ಪ್ರಾರಂಭಿಸಿದ್ದಾನೆ. ಇದಕ್ಕೆ ಸಾಂಗ್ವಾನ್ ಬಾಬು ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಅಂತರ ಕಾಯ್ದುಕೊಂಡ ನಾರಾಯಣಗೌಡ- ಶಕ್ತಿಪ್ರದರ್ಶನಕ್ಕೆ ಸಿದ್ಧತೆ ನಡೆಸ್ತಿದ್ದಾರಾ ಸಚಿವರು?

ಈ ವೇಳೆ ಕೋಪಗೊಂಡ ಬಾಬು, ಸಾಂಗ್ವಾನ್ ಅವರ ಮೊಣಕಾಲನ್ನು ಕಚ್ಚಿದ್ದಾನೆ. ಬಳಿಕ ಇನ್ನೂ ನಾಲ್ವರು ಅಲ್ಲಿಗೆ ಬಂದು ಐಎಎಸ್ ಅಧಿಕಾರಿಗೆ ಥಳಿಸಿದ್ದಾರೆ. ಬಳಿಕ ಬಾಬು ಇನ್ನೂ 10-12 ಜನರನ್ನು ಕರೆದಿದ್ದು, ಅವರೆಲ್ಲರೂ ಮಾರಕಾಸ್ತ್ರಗಳನ್ನು ಹಿಡಿದು ಬಂದಿದ್ದಾರೆ. ಬಳಿಕ ಸಾಂಗ್ವಾನ್ ಅವರನ್ನು ಒತ್ತೆಯಾಳಾಗಿ ಇರಿಸಿ, ಥಳಿಸಿದ್ದಾರೆ.

CRIME

ತಮ್ಮ ಮೇಲೆ ಪೊಲೀಸ್ ದೂರನ್ನು ನೀಡಬಾರದು ಎಂದು ಜನರ ಗುಂಪು ಸಾಂಗ್ವಾನ್ ಅವರಿಗೆ ಬೆದರಿಕೆ ಹಾಕಿದೆ. ಇದಕ್ಕೆ ಸಾಂಗ್ವಾನ್ ಒಪ್ಪಿದ್ದು, ಕಾಗದದಲ್ಲಿ ಇದನ್ನು ಬರೆದು ಸಹಿಯನ್ನೂ ಹಾಕಿದ್ದಾರೆ. ಬಳಿಕ ಸಾಂಗ್ವಾನ್ ಅವರನ್ನು ಗುಂಪು ಹೋಗಲು ಬಿಟ್ಟಿದೆ.

ಐಎಎಸ್ ಅಧಿಕಾರಿ ಮೇಲೆ ದಾಳಿ ನಡೆಸಿರುವ ಆರೋಪದ ಮೇಲೆ ಪೊಲೀಸರು ಇದೀಗ ಮೂವರನ್ನು ಬಂಧಿಸಿದ್ದಾರೆ. ಇತರ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಎಂಎಫ್ ಹಾಲು ವಿತರಣೆಯಲ್ಲಿ ತೊಂದರೆ- ನಂದಿನಿ ಬೂತ್‍ಗಳಿಗೆ ಅರ್ಧಕರ್ಧ ಸಪ್ಲೈ

Share This Article
Leave a Comment

Leave a Reply

Your email address will not be published. Required fields are marked *