`ಶಿವಾಜಿ ಸುರತ್ಕಲ್ 2′ ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆ ಚಾರ್ಲಿ ಬ್ಯೂಟಿ ಡ್ಯಾನ್ಸ್

Public TV
1 Min Read

ಸ್ಯಾಂಡಲ್‌ವುಡ್ (Sandalwood) ಬಹುನಿರೀಕ್ಷಿತ ಸಿನಿಮಾ `ಶಿವಾಜಿ ಸುರತ್ಕಲ್ 2′ ಸಿನಿಮಾದಲ್ಲಿ ರಮೇಶ್ ಅರವಿಂದ್ ಬ್ಯುಸಿಯಾಗಿದ್ದಾರೆ. ಇದೀಗ ಈ ಚಿತ್ರತಂಡದಿಂದ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ರಮೇಶ್ ಅರವಿಂದ್ ಜೊತೆ ಸ್ಪೆಷಲ್ ಸಾಂಗ್‌ನಲ್ಲಿ ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ಸಾಥ್‌ ನೀಡಿದ್ದಾರೆ.

`ಶಿವಾಜಿ ಸುರತ್ಕಲ್’ (Shivaji Surathkal 2) ಸಿನಿಮಾದಲ್ಲಿ ರಮೇಶ್ ಅರವಿಂದ್ (Ramesh Aravind) ಅವರ ನಟನೆ, ನಿರ್ದೇಶಕ ಆಕಾಶ್ ಶ್ರೀವತ್ಸ ಕಥೆ ಮತ್ತು ನಿರ್ದೇಶನ ನೋಡುಗರಿಗೆ ಮನಮುಟ್ಟಿತ್ತು. ಇದೀಗ ಈ ಚಿತ್ರದ ಪಾರ್ಟ್ 2 ಸಿನಿಮಾದ ಬಹುತೇಕ ಶೂಟಿಂಗ್‌ ಆಗಿದೆ.

ರಮೇಶ್ ಅರವಿಂದ್ ನಟನೆಯ `ಶಿವಾಜಿ ಸುರತ್ಕಲ್ 2′ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರಕ್ಕೆ ಸ್ಪೆಷಲ್ ಸಾಂಗ್‌ನಲ್ಲಿ ಹೆಜ್ಜೆ ಹಾಕಲು ʻಚಾರ್ಲಿʼ ನಟಿ ಸಂಗೀತಾ ಬಂದಿದ್ದಾರೆ. ಡೈರೆಕ್ಟರ್ ಆಕಾಶ್ ಶ್ರೀವತ್ಸ (Akash Srivasta) ಬರೆದಿರುವ ಚೆಂದದ ಹಾಡಿಗೆ ಸಂಗೀತಾ ಸ್ಟೇಪ್‌ ಹಾಕಲಿದ್ದಾರೆ. ಮಾರ್ಚ್‌ 2 ಮತ್ತು 3ರಂದು ಸಾಂಗ್‌ ಶೂಟ್‌ ನಡೆಯಲಿದೆ. ನಟ ರಮೇಶ್‌ ಜೊತೆ ಸಾಂಗ್‌ ಮಾತ್ರವಲ್ಲ ಚಿತ್ರದಲ್ಲಿ ಮೇಜರ್ ರೋಲ್‌ನ ಪ್ಲೇ ಮಾಡ್ತಿದ್ದಾರೆ. ಶರ್ಮಿಳಾ ಎಂಬ ಪಾತ್ರಕ್ಕೆ ಜೀವತುಂಬುತ್ತಿದ್ದಾರೆ.

ಈಗಾಗಲೇ ನಿರ್ಮಾಪಕ ಅನುಪ್ ಗೌಡ ಅವರ ರೆಸಾರ್ಟ್‌ನಲ್ಲಿ ಈ ಸ್ಪೆಷಲ್ ಸಾಂಗನ್ನ ಇದೀಗ ಶೂಟಿಂಗ್‌ ಮಾಡಲಾಗುತ್ತಿದೆ. ಡ್ಯಾನ್ಸ್ ಮಾಸ್ಟರ್ ಧನಂಜಯ್ ಅವರು ಕೊರಿಯಾಗ್ರಾಫಿಯಲ್ಲಿ ಸಾಂಗ್ ಮೂಡಿ ಬರಲಿದೆ. ಇನ್ನೂ ರಮೇಶ್ ಅರವಿಂದ್ ಜೊತೆ ರಾಧಿಕಾ ನಾರಾಯಣ್, ನಾಸರ್, ಮೇಘನಾ ಗಾಂವ್ಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಮತ್ತಷ್ಟು ಅಪ್‌ಡೇಟ್‌ ಸಿಗಲಿದೆ.

Share This Article
Leave a Comment

Leave a Reply

Your email address will not be published. Required fields are marked *