ಹೆಂಡತಿ ಮಕ್ಕಳನ್ನು ಕೊಂದು ತಾನೂ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನ

Public TV
1 Min Read

ನವದೆಹಲಿ: ವ್ಯಕ್ತಿಯೊಬ್ಬ, ಹೆಂಡತಿ ಹಾಗೂ ತನ್ನಿಬ್ಬರ ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ದೆಹಲಿಯ (Delhi) ಪಶ್ಚಿಮ ಭಾಗದ ವಿಪಿನ್ ಗಾರ್ಡನ್ (Vipin Garden) ಬಳಿ ಭಾನುವಾರ ನಡೆದಿದೆ.

ರಾಜೇಶ್ (38) ಎಂಬಾತ ತೀವ್ರವಾದ ಆರ್ಥಿಕ ಸಮಸ್ಯೆಯಿಂದ ಕಂಗೆಟ್ಟಿದ್ದ. ತಡರಾತ್ರಿ ಮಲಗಿದ್ದಾಗ ಪತ್ನಿ ಸುನಿತಾ (35), ನಾಲ್ಕು ವರ್ಷದ ಮಗ ಹಾಗೂ ನಾಲ್ಕು ತಿಂಗಳ ಹಸುಳೆಯನ್ನು ಚಾಕುವಿನಿಂದ ಇರಿದು ಕೊಂದು ತಾನೂ ಆತ್ಮಹತ್ಯಗೆ ಮುಂದಾಗಿದ್ದಾನೆ. ತನ್ನ ಕೈಗೆ ಆಳವಾದ ಗಾಯ ಮಾಡಿಕೊಂಡಿದ್ದ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಾರ್ಚ್ 3ರಂದು ಅಮಿತ್ ಶಾ ಬಸವಕಲ್ಯಾಣ ಪ್ರವಾಸ

ಭಾನುವಾರ ಮುಂಜಾನೆ ತನ್ನ ಆರ್ಥಿಕ ಸಮಸ್ಯೆಯ ಬಗ್ಗೆ ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದ. ಆತನ ಸ್ನೇಹಿತರು ಆತನ ಸಹೋದರನಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರಿಗೆ ತಿಳಿಸಿದ್ದಾರೆ. ಘಟನೆ ನಡೆದಾಗ ರಾಜೇಶ್‍ನ ತಂದೆ ತಾಯಿ ಬೇರೊಂದು ಕೋಣೆಯಲ್ಲಿದ್ದರು ಎಂದು ಉಪ ಪೊಲೀಸ್ ಆಯುಕ್ತ (Deputy Commissioner of Police) ಎಂ.ಹರ್ಷ ವರ್ಧನ್ ಹೇಳಿದ್ದಾರೆ.

ಜನರಲ್ ಸ್ಟೋರ್ ನಡೆಸುತ್ತಿದ್ದ ರಾಜೇಶ್, ಈ ಹಿಂದೆ ಐಎಸ್‍ಓ ಪ್ರಮಾಣೀಕರಣಕ್ಕೆ ಸಂಬಂಧಿಸಿದ ಕಂಪನಿಯೊಂದನ್ನು ನಡೆಸುತ್ತಿದ್ದ. ಮೋಹನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕೊಲೆ (Murder) ಪ್ರಕರಣ ದಾಖಲಾಗಿದೆ ಎಂದು ಹರ್ಷ ವರ್ಧನ್ ತಿಳಿಸಿದ್ದಾರೆ.

ಸುನಿತಾರನ್ನು 2015ರಲ್ಲಿ ಮದುವೆಯಾಗಿದ್ದ ರಾಜೇಶ್, ಆರಂಭದಲ್ಲಿ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ನಂತರದ ದಿನಗಳಲ್ಲಿ ಆಸ್ತಿಗಾಗಿ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದ ಎಂದು ಸುನಿತಾ ಕುಟುಂಬ ಆರೋಪಿಸಿದೆ. ಇದನ್ನೂ ಓದಿ: ಆಶಾ ಕಾರ್ಯಕರ್ತರಿಗೆ ವಿದೇಶಿ ಹಣ ಹಂಚಿದ ಶಾಸಕ ಜಮೀರ್

Share This Article
Leave a Comment

Leave a Reply

Your email address will not be published. Required fields are marked *