KCC 3- ಕಿಚ್ಚನಿಗೆ ಧನ್ಯವಾದ ಹೇಳಿದ ಕ್ರಿಕೆಟಿಗ ಸುರೇಶ್ ರೈನಾ

Public TV
1 Min Read

ನಿನ್ನೆಯಷ್ಟೇ ಕೆಸಿಸಿ ಸೀಸನ್ 3 ಮುಕ್ತಾಯವಾಗಿದೆ. ವಿಜಯನಗರ ಪ್ಯಾಟ್ರಿಯಾಟ್ಸ್ ಮತ್ತು ಗಂಗಾ ವಾರಿಯರ್ಸ್ (Ganga Warriors) ನಡುವೆ ನಡೆದ ಪಂದ್ಯದಲ್ಲಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದವರು ಕ್ರಿಕೆಟಿಗ ಸುರೇಶ್ ರೈನಾ (Suresh Raina). 29 ಎಸೆತಗಳಲ್ಲಿ ಅಜೇಯ 54 ರನ್ ಬಾರಿಸುವ ಮೂಲಕ ತಂಡವನ್ನು ಗೆಲ್ಲುವಂತೆ ಮಾಡಿದರು. ಅಲ್ಲದೇ, ಬೌಲಿಂಗ್ ನಲ್ಲೂ ಅವರು ಹಿಂದೆ ಬೀಳಲಿಲ್ಲ. 2 ವಿಕೆಟ್ ಪಡೆಯುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಕಾರಣವಾದರು.

ಅಂತಾರಾಷ್ಟ್ರೀಯ ಪಂದ್ಯದಂತೆಯೇ ಆಯೋಜನೆ ಮಾಡಿದ್ದ ಆಯೋಜಕರಿಗೆ ಸುರೇಶ್ ರೈನಾ ಧನ್ಯವಾದಗಳನ್ನು ತಿಳಿಸಿದ್ದಾರೆ. ಅದರಲ್ಲೂ ಈ ಪಂದ್ಯಾವಳಿಯಲ್ಲಿ ಆಡುವುದಕ್ಕೆ ಅವಕಾಶ ಮಾಡಿಕೊಟ್ಟ ಕಿಚ್ಚ ಸುದೀಪ್ (Kiccha Sudeep) ಅವರಿಗೆ ವಿಶೇಷ ಧನ್ಯವಾದ ತಿಳಿಸಿದ್ದಾರೆ. ಇಂತಹ ಪಂದ್ಯವನ್ನು ನಾನು ಯಾವತ್ತೂ ನೋಡಿಲ್ಲ. ನನಗೆ ಇದು ಮರೆಯಲಾರದ ಕ್ಷಣವಾಗಿತ್ತು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ನಟ ಉಪೇಂದ್ರ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣಾ ಆಯೋಗ

ಈ ಬಾರಿ ಆರು ತಂಡಗಳ ನಡುವೆ ಪಂದ್ಯಾವಳಿ ಆಯೋಜನೆ ಆಗಿತ್ತು. ದಿನಕ್ಕೆ ಮೂರು ಪಂದ್ಯಗಳಂತೆ ಒಟ್ಟು ಆರು ತಂಡಗಳು ಕಪ್ ಗಾಗಿ ಸೆಣೆಸಿದವು. ನುರಿತ ಕ್ರಿಕೆಟ್ ಆಟಗಾರರಂತೆಯೇ ಸಿನಿಮಾ ರಂಗದ ಕಲಾವಿದರು ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದರು. ಕಿಚ್ಚ ಸುದೀಪ್, ಗಣೇಶ್, ಧನಂಜಯ್, ಶಿವರಾಜ್ ಕುಮಾರ್, ಡಾರ್ಲಿಂಗ್ ಕೃಷ್ಣ ಸೇರಿದಂತೆ ಇತರರು ಒಂದೊಂದು ತಂಡದ ನೇತೃತ್ವವಹಿಸಿದ್ದರು.

Share This Article
1 Comment

Leave a Reply

Your email address will not be published. Required fields are marked *