ಆಳುವುದು ಕಾಂಗ್ರೆಸ್‌, ಅಳುವುದು ಜೆಡಿಎಸ್‌, ಸೇವೆ ಮಾಡೋದು ಬಿಜೆಪಿ – ಕಟೀಲ್‌

Public TV
2 Min Read

ರಾಯಚೂರು: ರಾಜ್ಯದಲ್ಲಿ ಆಳುವ ಪಾರ್ಟಿ, ಅಳುವ ಪಾರ್ಟಿ, ಸೇವೆ ಮಾಡುವ ಪಾರ್ಟಿ ಅಂತಾ ಮೂರು ಪಾರ್ಟಿ ಇವೆ. ಆಳುವ‌ ಪಾರ್ಟಿ ಕಾಂಗ್ರೆಸ್ (Congress), ಅಳುವ ಪಾರ್ಟಿ ಜೆಡಿಎಸ್ (JDS), ಸೇವಕನ ಪಾರ್ಟಿ ಬಿಜೆಪಿ (BJP). ಸೇವೆ ಮಾಡುವ ಪಾರ್ಟಿಯನ್ನ ಆರಿಸಿ ತನ್ನಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಕುಟುಕಿದರು.

ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಆಯೋಜಿಸಿದ್ದ ವಿಜಯಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕ್ಷೇತ್ರ ಸಿಗದೇ ಅಲೆಮಾರಿಯಂತೆ ತಿರುಗುತ್ತಿದ್ದಾರೆ. ಬಾದಾಮಿಯಿಂದ ಜನ ಓಡಿಸಿದ್ದಾರೆ, ಚಾಮುಂಡಿಯಿಂದಲೂ ಓಡಿಸಿದ್ದಾರೆ. ಕೋಲಾರದಲ್ಲೂ ಅವಕಾಶ ಇಲ್ಲ. ಅವರಿಗೆ ಕ್ಷೇತ್ರವೇ ಇಲ್ಲದೇ ಅಲೆಮಾರಿಯಂತೆ ಅಲೆದಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕಮಲ ಅರಳುತ್ತೆ. ಸಿದ್ರಾಮಯ್ಯ, ಡಿ.ಕೆ.ಶಿವಕುಮಾರ್ ನಿರುದ್ಯೋಗಿಗಳಾಗ್ತಾರೆ.‌ ಹುಲಿ ಕಾಡಿಗೆ ಹೋಗುತ್ತೆ, ಬಂಡೆ ಹೊಡೆದು ಹೋಗುತ್ತೆ ಎಂದರು. ಇದನ್ನೂ ಓದಿ: ಇನ್ಮುಂದೆ ಬಿಜೆಪಿಗೆ ವೋಟ್ ಹಾಕ್ತಾ ಇರಿ, ಪ್ರತಿ ವರ್ಷ ಸೈಟ್ ಕೊಡ್ತೀವಿ – ವಿ.ಸೋಮಣ್ಣ

ಕಲ್ಯಾಣ ಕರ್ನಾಟಕ ಘೋಷಣೆ ಮಾಡಿ ಅತಿ ಹೆಚ್ಚು ಅನುದಾನ ಕೊಟ್ಟಿದ್ದು ಯಡಿಯೂರಪ್ಪ. ಬೊಮ್ಮಾಯಿ ಸರ್ಕಾರ ರೈತ ವಿದ್ಯಾನಿಧಿ ಯೋಜನೆ ಘೋಷಣೆ ಮಾಡಿದೆ. ಎಸ್ಸಿ-ಎಸ್ಟಿಗಳಿಗೆ ಮೀಸಲಾತಿಯಲ್ಲಿ ಹೆಚ್ಚಳ ಮಾಡಿದ್ದು ಬೊಮ್ಮಾಯಿ ಸರ್ಕಾರ. ಡಿಕೆಶಿಗೆ ನಾಚಿಕೆಯಾಗಬೇಕು, ನಿಮ್ ಸರ್ಕಾರ ಅಧಿಕಾರದಲ್ಲಿದ್ದಾಗ ಕರೆಂಟೇ ಕೊಟ್ಟಿಲ್ಲ. ಈಗ ಉಚಿತ ವಿದ್ಯುತ್‌ ಕೊಡ್ತೀರಾ ಎಂದು ಗುಡುಗಿದರು.

ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ, ವಿಶ್ವಾದ್ಯಂತ 200 ಕೋಟಿ ಜನರಿಗೆ ಲಸಿಕೆ ಕೊಟ್ಟಿದೆ. ಲಸಿಕೆ ಕಂಡು ಹಿಡಿದಾಗ ರಾಹುಲ್ ಗಾಂಧಿ ಟೀಕೆ ಮಾಡಿದ್ದರು. ಲಸಿಕೆ ತಗೋಬೇಡಿ ಮಕ್ಕಳಾಗೋದಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಕಳ್ಳತನದಿಂದ ರಾಹುಲ್ ಗಾಂಧಿ, ಸಿದ್ದರಾಮಯ್ಯ ಇಬ್ಬರೂ ಲಸಿಕೆ ತೆಗೆದುಕೊಂಡರು ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಕುಮಾರಣ್ಣನ ಸರ್ಕಾರ ಹೋದ್ಮೇಲೆ ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ – ಹೆಚ್.ಡಿ.ರೇವಣ್ಣ ಬೇಸರ

ದೇಶದಲ್ಲಿ‌ ಪರಿವರ್ತನೆಯ ಗಾಳಿ ಬೀಸುತ್ತಿದೆ. ಜನ ಭಾರತೀಯ ಜನತಾ ಪಾರ್ಟಿಯನ್ನು ಗೆಲ್ಲಿಸಬೇಕು ಎಂದು ನಿಶ್ಚಯ ಮಾಡಿದ್ದಾರೆ. ಕಾಂಗ್ರೆಸ್‌ಗೆ ಸವಾಲು ಮಾಡ್ತೇನೆ. ಈ ದೇಶದಲ್ಲಿ ಅಬ್ದುಲ್ ಕಲಾಂರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ. ಮಾನವ ಬಾಂಬರ್ ಜೈಲಿಗೆ ಹೋದಾಗ ಸಿದ್ದರಾಮಯ್ಯನ ಕಣ್ಣಲ್ಲಿ ನೀರು ಬಂದಿತ್ತು. ಬಡವರಿಗಾಗಿ ಕಣ್ಣಲ್ಲಿ ನೀರು ಬಂದಿಲ್ಲ ಎಂದು ಟೀಕಿಸಿದರು.

Share This Article
1 Comment

Leave a Reply

Your email address will not be published. Required fields are marked *