ಯುದ್ಧ ವಿಮಾನದ ಹಿಂದಿದ್ದ ಹನುಮಂತನ ಚಿತ್ರ ತೆಗೆದ ಹೆಚ್‌ಎಎಲ್

Public TV
1 Min Read

ಬೆಂಗಳೂರು: ಏರೋ ಇಂಡಿಯಾ ‘ಏರ್ ಶೋ 2023’ (Aero India-2023) ರಲ್ಲಿ ಪ್ರದರ್ಶನದಲ್ಲಿದ್ದ ಹೆಚ್‌ಎಲ್‌ಎಫ್‌ಟಿ-42 ತರಬೇತುದಾರ ಯುದ್ಧ ವಿಮಾನದ ಹಿಂಭಾಗದಲ್ಲಿದ್ದ ಹನುಮಾನ್ ಚಿತ್ರವನ್ನು (Hanuman Photo) ಹೆಚ್‌ಎಎಲ್ (HAL) ತೆಗೆದುಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದು, ಈ ನಡುವೆ ಭಗವಾನ್ ಹನುಮಾನ್ ಚಿತ್ರ ತೆಗೆದುಹಾಕಿರುವುದು ಹಲವು ಪ್ರಶ್ನೆಗೆ ಕಾರಣವಾಗಿದೆ.

ಹಿಂದೂಸ್ತಾನ್ ಲೀಡ್ ಇನ್ ಫೈಟರ್ ಟ್ರೈನರ್ (HLFT-42) ಅನ್ನು ಸೋಮವಾರ ಹೆಚ್‌ಎಎಲ್ ಪ್ರದರ್ಶಿಸಿತ್ತು. ತರಬೇತಿ ಯುದ್ಧ ವಿಮಾನದ ಹಿಂಭಾಗದಲ್ಲಿ ಲಂಬವಾದ ರೆಕ್ಕೆ ಮೇಲೆ ಭಗವಾನ್ ಹನುಮಂತನ ಫೋಟೋವನ್ನು ಪ್ರದರ್ಶಿಸಲಾಗಿತ್ತು. ಹೆಚ್‌ಎಲ್‌ಎಫ್‌ಟಿ-42 ವಿಮಾನವು ಮೊದಲ ಸ್ವದೇಶಿ ವಿಮಾನವಾದ ಹೆಚ್‌ಎಎಲ್ ‘ಮಾರುತ್’ನ ಉತ್ತರಾಧಿಕಾರಿಯಾಗಿದೆ.

ಮಾರುತ್ ಎಂಬುದು ಗಾಳಿಯ ಇನ್ನೊಂದು ಹೆಸರು, ಅಥವಾ ಹಿಂದಿಯಲ್ಲಿ ಇದನ್ನು ‘ಪವನ’ ಎಂದು ಕರೆಯಲಾಗುತ್ತದೆ. ಹಿಂದೂ ಪುರಾಣದಲ್ಲಿ ವಾಯುವಿನ ಪುತ್ರ ಹನುಮಂತ. ಈ ಕಾರಣಕ್ಕೆ ಹನುಮಂತನ ಚಿತ್ರವನ್ನು ಮಾದರಿ ವಿಮಾನದಲ್ಲಿ ಪ್ರದರ್ಶಿಸಲಾಗಿತ್ತು.

ಹೆಚ್‌ಎಲ್‌ಎಫ್‌ಟಿ-42 ಮುಂದಿನ ಪೀಳಿಗೆಯ ಸೂಪರ್‌ಸಾನಿಕ್‌ ತರಬೇತುದಾರ ಯುದ್ಧ ವಿಮಾನವಾಗಿದ್ದು. ಆಧುನಿಕ ಯುದ್ಧ ವಿಮಾನ ತರಬೇತಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಈ ವಿಮಾನವು ಅಸ್ತಿತ್ವದಲ್ಲಿರುವ ತರಬೇತುದಾರ ವಿಮಾನಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ದೆಹಲಿ, ಮುಂಬೈನಲ್ಲಿರುವ BBC ಕಚೇರಿಗಳಲ್ಲಿ ಐಟಿ ಪರಿಶೀಲನೆ – ಸಿಬ್ಬಂದಿ ಮೊಬೈಲ್‌, ಲ್ಯಾಪ್‌ಟಾಪ್‌ ವಶ

ಹಾಕ್-132 ಸಬ್‌ಸಾನಿಕ್ ಟ್ರೈನರ್ ಮತ್ತು ಮಿಗ್-21, ಇವುಗಳನ್ನು ಸೂಪರ್‌ಸಾನಿಕ್ ತಂತ್ರಜ್ಞಾನದಲ್ಲಿ ಪೈಲಟ್‌ಗಳಿಗೆ ತರಬೇತಿ ನೀಡಲು ಬಳಸಲಾಗುತ್ತದೆ. ಹೆಚ್‌ಎಲ್‌ಎಫ್‌ಟಿ-42 ಫ್ಲೈ ಬೈ ವೈರ್ ಕಂಟ್ರೋಲ್ (FBW) ವ್ಯವಸ್ಥೆಗಳೊಂದಿಗೆ ಸಕ್ರಿಯ ಎಲೆಕ್ಟ್ರಾನಿಕ್ ಸ್ಕ್ಯಾನ್ಡ್ ಅರೇ (AESA), ಎಲೆಕ್ಟ್ರಾನಿಕ್ ವಾರ್‌ಫೇರ್ (EW) ಸೂಟ್, ಇನ್‌ಫ್ರಾರೆಡ್ ಸರ್ಚ್ ಮತ್ತು ಟ್ರ‍್ಯಾಕ್ (IRST) ನಂತಹ ಅತ್ಯಾಧುನಿಕ ಏವಿಯಾನಿಕ್ಸ್ಗಳನ್ನು ಹೊಂದಿದೆ. ಇದನ್ನೂ ಓದಿ: ಪುಲ್ವಾಮಾ ದಾಳಿಗೆ 4 ವರ್ಷ: ಆ ಒಂದು ಕರಾಳ ದಿನದಲ್ಲಿ ನಡೆದಿದ್ದೇನು?

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *