ಮದುವೆ ನಂತರ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡ ಸಿದ್-ಕಿಯಾರಾ

Public TV
1 Min Read

ಬಾಲಿವುಡ್‌ನ (Bollywood) ನವ ಜೋಡಿ ಸಿದ್ (Siddarth Malhotra) ಮತ್ತು ಕಿಯಾರಾ (Kiara Advani) ಫೆ.7ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ನಂತರ ಈಗ ಮೊದಲ ಬಾರಿಗೆ ʻಷೇರ್‌ಷಾʼ ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಹಲವು ವರ್ಷಗಳ ಪ್ರೀತಿಗೆ ಸಿದ್-ಕಿಯಾರಾ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ತಮ್ಮ ಪ್ರೀತಿ, ಮದುವೆ ಬಗ್ಗೆ ಅದೆಷ್ಟೇ ಸುದ್ದಿಯಾಗಿದ್ದರೂ ಸೈಲೆಂಟ್ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿರುವ ನವ ಜೋಡಿ ಈಗ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ಮದುವೆ ಫೋಟೋ ಹಂಚಿಕೊಂಡ ಬೆನ್ನಲ್ಲೇ ವೈರಲಾಯ್ತು ಸಿದ್- ಕಿಯಾರಾ ಆಮಂತ್ರಣ ಪತ್ರಿಕೆ

 

View this post on Instagram

 

A post shared by Viral Bhayani (@viralbhayani)

ರಾಜಸ್ಥಾನದಲ್ಲಿ (Rajastan) ಅದ್ದೂರಿ ಮದುವೆ ಬಳಿಕ ವರನ ಸ್ವಗೃಹ ಅಂದರೆ ಸಿದ್ಧಾರ್ಥ್ ಮನೆಯತ್ತ ಈ ಜೋಡಿ ಸತಿ-ಪತಿಗಳಾಗಿ ಕಾಲಿಟ್ಟಿದ್ದಾರೆ. ದೆಹಲಿಯತ್ತ ಪ್ರಯಾಣ ಮಾಡುವ ಮುನ್ನ ಜೈಸಲ್ಮೇರ್‌ನ ವಿಮಾನ ನಿಲ್ದಾಣದಲ್ಲಿ ಸಿದ್-ಕಿಯಾರಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಹೊಸ ಜೋಡಿಗೆ ಪಾಪರಾಜಿಗಳು ಶುಭಹಾರೈಸಿದ್ದಾರೆ. ಧನ್ಯವಾದಗಳನ್ನ ತಿಳಿಸಿ ದೆಹಲಿಗೆ ಹಾರಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಸಿದ್ ಜೋಡಿಯ ಮದುವೆಯ ಬಗ್ಗೆಯೇ ಸುದ್ದಿಯಾಗುತ್ತಿದೆ. ಹೊಸ ಜೋಡಿಗೆ ಫ್ಯಾನ್ಸ್, ಸಿನಿಮಾ ಸ್ನೇಹಿತರು ವಿಶ್ ಮಾಡ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *