ಸಿದ್ದರಾಮಯ್ಯಗೆ ನರೇಂದ್ರ ಮೋದಿ ಹೆಸರು ಹೇಳೋ ಯೋಗ್ಯತೆ ಇಲ್ಲ; ಆತ ಅಯೋಗ್ಯ – ಈಶ್ವರಪ್ಪ ಕಿಡಿ

Public TV
2 Min Read

ರಾಯಚೂರು: ಸಿದ್ದರಾಮಯ್ಯನಿಗೆ (Siddaramaiah) ನರೇಂದ್ರ ಮೋದಿ (Narendra Modi) ಹೆಸರು ಹೇಳೋ ಯೋಗ್ಯತೆ ಇಲ್ಲ. ಆತ ಒಬ್ಬ ಅಯೋಗ್ಯ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa) ಕಿಡಿಕಾರಿದರು.

ರಾಯಚೂರಿನಲ್ಲಿ (Raichuru) ಮಾತನಾಡಿದ ಕೆ.ಎಸ್.ಈಶ್ವರಪ್ಪ, ನರೇಂದ್ರ ಮೋದಿ ಇಡೀ ದೇಶವೇ ಮೆಚ್ಚಿದೆ ವಿಶ್ವನಾಯಕ. ಸೂರ್ಯ ಯಾವತ್ತಿದ್ರೂ ಸೂರ್ಯನೇ. ಸೂರ್ಯನಿಗೆ ಉಗುಳಿದ್ರೆ ವಾಪಸ್ ಮುಖಕ್ಕೆ ಬೀಳುತ್ತೆ. ಮೋದಿಯವರನ್ನ ಬೈದ್ರೆ ದೊಡ್ಡ ಲೀಡರ್ ಆಗ್ತೇನೆ ಅನ್ನೋ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೆಟ್ಟ ಸಂಸ್ಕೃತಿ ರಾಜಕಾರಣಕ್ಕೆ ಪ್ರವೇಶಿಸಲು ಕಾಂಗ್ರೆಸ್ ಮಹಾದ್ವಾರ: ಬೊಮ್ಮಾಯಿ

ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಹುಡುಕಾಡುತ್ತಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋತ್ರು, ಬದಾಮಿಯಲ್ಲಿ ಸೋಲಿನ ಭಯ ಇದೆ. ಹೀಗಾಗಿ ಕೋಲಾರಕ್ಕೆ ಬಂದಿದ್ದಾರೆ. ಅಲ್ಲಿ ನಿಲ್ತಾರೋ ಇಲ್ವೋ ಗೊತ್ತಿಲ್ಲ. ಸಿದ್ದರಾಮಯ್ಯ ಮೊದಲು ಕೋಲಾರದಲ್ಲಿ ನಿಲ್ಲಲಿ, ಗೆಲವು ಸೋಲು ಆಮೇಲೆ. ನನಗೆ ಗೊತ್ತಿಲ್ಲ ಅಂತ ಡಿ.ಕೆ.ಶಿವಕುಮಾರ್ ಹೇಳ್ತಾರೆ. ಇವರು ತಾವೇ ಕ್ಯಾಂಡಿಡೇಟ್ ಅಂತ ಡಿಕ್ಲೇರ್ ಮಾಡಿಕೊಂಡ್ರೆ ಆಗುತ್ತಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ, ಹೆಚ್.ವಿಶ್ವನಾಥ್‌ಗೆ ಯಾವ ಪಕ್ಷದಲ್ಲಿರಬೇಕು ಅಂತೇನಿಲ್ಲಾ. ಅವರು ಅಧಿಕಾರದಲ್ಲಿರಬೇಕು ಅಷ್ಟೇ. ನನ್ನದು ಹಂಗಲ್ಲಾ, ಪಕ್ಷ ನನ್ನ ತಾಯಿ. ತಾಯಿಗೆ ಜೀವನದಲ್ಲಿ ಎಂದೂ ದ್ರೋಹ ಮಾಡಿಲ್ಲ. ಅವರಿಬ್ಬರೂ ಎಲ್ಲಿ ಅಧಿಕಾರ ಇರುತ್ತೋ ಅಲ್ಲಿಗೆ ಹೋಗಬೇಕು ಅಂತ ಇಷ್ಟಪಡ್ತಾರೆ ಎಂದು ಚಾಟಿ ಬೀಸಿದರು. ಇದನ್ನೂ ಓದಿ: ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಈಶ್ವರಪ್ಪ

ಕಾಂಗ್ರೆಸ್‌ನವರು ಬಸ್ ಯಾತ್ರೆ ಮಾಡುತ್ತಿರುವುದು ಸಂತೋಷ. ಒಂದೇ ಪೊಲಿಟಿಕಲ್ ಪಾರ್ಟಿ ಪೂರ್ಣ ಅಧಿಕಾರ ಇಟ್ಟುಕೊಂಡು ಕೂರಬಾರದು. ವಿರೋಧ ಪಕ್ಷವೂ ಇರಬೇಕು. ಇಡೀ ದೇಶದಲ್ಲಿ ವಿರೋಧಪಕ್ಷ ಎಲ್ಲಿದೆ. ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್, ಖರ್ಗೆ ಬಡಿದಾಡುತ್ತಾ ಕುಳಿತರೆ ಅಧಿಕಾರ ಬರುವುದಿರಲಿ ವಿರೋಧ ಪಕ್ಷವೂ ಉಳಿಯಲ್ಲ ಎಂದು ಟಾಂಗ್‌ ನೀಡಿದರು.

ಯಾವುದೇ ವ್ಯಕ್ತಿ ಪಕ್ಷ ಕಟ್ಟಿಕೊಂಡು ಬರ್ತೀನಿ ಅಂದ್ರೆ ಬಿಜೆಪಿಗೆ ಯಾವ ಎಫೆಕ್ಟ್‌ ಕೂಡ ಆಗಲ್ಲ. ಬಿಜೆಪಿ ಟಿಕೆಟ್ ವಂಚಿತರು ಹೋಗಬೇಕು ಅಂದ್ರೆ ಜನಾರ್ದನ ರೆಡ್ಡಿ ಪಕ್ಷ ಒಂದೇ ಇಲ್ಲ. ಎಲ್ಲಿ ಬೇಕಾದರೂ ಹೋಗಬಹುದು. ಬಿಜೆಪಿ ಪಕ್ಷದ ನಿಷ್ಠಾವಂತರು ಪಕ್ಷ ಬಿಟ್ಟು ಹೋಗಲ್ಲ ಅನ್ನೋದು ನನ್ನ ನಂಬಿಕೆ ಎಂದರು. ಇದನ್ನೂ ಓದಿ: ಸ್ಯಾಂಟ್ರೋ ರವಿ ವಿರುದ್ಧ ತನಿಖೆಯಿಂದ ಕಾಂಗ್ರೆಸ್‌ಗೆ ನಡುಕ – ಕೈಪಡೆಗೆ ಬಿಜೆಪಿ ಗುದ್ದು

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *