ರಾಮನಗರದಲ್ಲಿ ಅಯೋಧ್ಯೆ ಮಾದರಿಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ಲಾನ್: ಅಶ್ವಥ್ ನಾರಾಯಣ್ ಘೋಷಣೆ

By
3 Min Read

ಬೆಂಗಳೂರು: ರಾಮ ದೇವರ ಬೆಟ್ಟದಲ್ಲಿ ದಕ್ಷಿಣ ಅಯೋಧ್ಯೆ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ. ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಲು ಸಿಎಂ ಸೂಚನೆ ನೀಡಿದ್ದಾರೆ ಎಂದು ಸಚಿವ ಅಶ್ವತ್ಥ್ ನಾರಾಯಣ್ (Ashwath Narayan) ಹೇಳಿದರು.

ಸುವರ್ಣಸೌಧದಲ್ಲಿ ರಾಮನಗರ (Ramanagar) ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ರಾಮನಗರ, ರಾಮನಗರ ಎಂದು ಪ್ರೇರಣೆ ಇದೆ. ರಾಮನ ಅಭಿವೃದ್ಧಿ ಇಲ್ಲಿಯೂ ಮಾಡಬೇಕು. ಉತ್ತರ ಭಾರತದಂತೆ ದಕ್ಷಿಣ ಭಾರತದಲ್ಲೂ ರಾಮ ಮಂದಿರ (RamaMandir) ನಿರ್ಮಾಣ ಆಗುತ್ತೆ ವಿಶ್ವಾಸ ಇದೆ. ಬರುವಂತಹ ಬಜೆಟ್ ನಲ್ಲಿ ಸಿಎಂ ಬಜೆಟ್ (Budget) ಘೋಷಣೆ ಮಾಡಬಹುದು. ಈಗಾಗಲೇ ಆಗಲ್ಲ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದರು.

ರಾಮನಗರದ ರಾಮದೇವರ ಬೆಟ್ಟವನ್ನು ದಕ್ಷಿಣ ಅಯೋಧ್ಯೆ ಕೇಂದ್ರವನ್ನಾಗಿ ಮಾಡುತ್ತೇವೆ. ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಲು ಮುಖ್ಯಮಂತ್ರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಅಲ್ಲಿರುವ ರಾಮನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ, ದಕ್ಷಿಣ ಅಯೋಧ್ಯೆ ಕೇಂದ್ರವನ್ನಾಗಿ ಮಾಡುತ್ತೇವೆ. ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಆಹ್ವಾನಿಸಿದ್ದೇವೆ. ಅಭಿವೃದ್ಧಿಗೆ ಬರುವಂತ ಬಜೆಟ್ ನಲ್ಲಿ ಸಿಎಂ ಹಣ ಘೋಷಣೆ ಮಾಡುತ್ತಾರೆ. ಆ ಮೂಲಕ ರಾಮನಗರದ ರಾಮದೇವರ ಬೆಟ್ಟವನ್ನು ಹಿಂದೂ ಧಾರ್ಮಿಕ ಕೇಂದ್ರವನ್ನಾಗಿ ಮಾಡುತ್ತೇವೆ ಎಂದರು. ಇದನ್ನೂ ಓದಿ: ಜೆಡಿಎಸ್‌ ವಿರುದ್ಧ ಶಿವರಾಮೇಗೌಡ ಸ್ವಾಭಿಮಾನದ ಕಹಳೆ

ಗೃಹ ಸಚಿವ ಅಮಿತ್ ಶಾ (AmitShah) ರಾಜ್ಯಕ್ಕೆ ಭೇಟಿ ಕೊಡ್ತಿದ್ದಾರೆ. ಅಮಿತ್ ಶಾ ಭೇಟಿಯಿಂದ ದೊಡ್ಡ ಸಂಚಲನ ಶಕ್ತಿ ತುಂಬುವಂತಾಗಲಿದೆ. ಪಕ್ಷಕ್ಕೆ ದೊಡ್ಡ ಶಕ್ತಿ ಬರಲಿದೆ. ಹಳೆ ಮೈಸೂರು ಭಾಗದಲ್ಲಿ ಸಂಖ್ಯೆ ಹೆಚ್ಚಿಸುವ ಪ್ರಯತ್ನ ಮಾಡುತ್ತೇವೆ. ಮೈಶುಗರ್ ಕಾರ್ಖಾನೆಯನ್ನೇ ಸರಿಯಾಗಿ ನಿರ್ವಹಣೆ ಮಾಡುವುದಕ್ಕೆ ಜೆಡಿಎಸ್ ಕಾಂಗ್ರೆಸ್ ಗೆ ಆಗಲಿಲ್ಲ. ಹಳೆ ಮೈಸೂರು ಭಾಗದ ಜನ ಜೆಡಿಎಸ್ (JDS), ಕಾಂಗ್ರೆಸ್ (Congress) ಅನ್ನು ಬಹಳ ನಂಬಿದ್ದರು. ಅವರನ್ನು ನಂಬಿ ಏನೂ ಆಗಿಲ್ಲ. ಪಾಂಡವಪುರ ಮೈಶುಗರ್ ಸೇರಿದಂತೆ ಎಲ್ಲ ಅಭಿವೃದ್ಧಿ ಕೂಡ ಬಿಜೆಪಿಯಿಂದಲೇ ಆಗಿದೆ. ಎಲ್ಲ ವರ್ಗದ ಜನರನ್ನು ಪ್ರತಿನಿಧಿಸಿ ಸರ್ವಾಂಗೀಣ ಅಭಿವೃದ್ಧಿ ಗೆ ನಾವು ಕೆಲಸ ಮಾಡ್ತೇವೆ. ಅವಧಿಪೂರ್ವ ಚುನಾವಣೆ ವಿಚಾರವನ್ನು ಚುನಾವಣಾ ಆಯೋಗ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.

ದಕ್ಷಿಣ ಕರ್ನಾಟಕದಲ್ಲಿ ವಿಶೇಷ ಸಂಘಟನೆ ಮಾಡಲು ಅಮಿತ್ ಶಾ ಅವರ ಮಾರ್ಗದರ್ಶನ ಅವಶ್ಯಕತೆ ಇದೆ. ಹೆಚ್ಚು ಶಾಸಕರು ಆಯ್ಕೆ ಆಗಬೇಕು, ಈ ನಿಟ್ಟಿನಲ್ಲಿ ಅಮಿತ್ ಶಾ ರಾಜ್ಯಕ್ಕೆ ಬರ್ತಿದ್ದಾರೆ. ಮುಂಚಿತವಾಗಿಯೇ ಚುನಾವಣೆ ಆಗುತ್ತೆ ಎಂಬ ಚರ್ಚೆ ಇನ್ನೂ ಉದ್ಭವಾಗಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಅಶ್ವತ್ಥ್ ನಾರಾಯಣ್ ಕಿಡಿಕಾರಿದರು.

ಈಗಾಗಲೇ ಪ್ರತಿಪಕ್ಷ ಜೆಡಿಎಸ್ ಮಂಡ್ಯದಲ್ಲಿ ಮಲೈ ಶುಗರ್ಸ್ ಕಾರ್ಖಾನೆ (My Sugar Factory) ನಿರ್ವಹಣೆ ಮಾಡದೇ ಅತೀ ಹೆಚ್ಚು ಸಮಸ್ಯೆಗೆ ಸಿಲುಕಿಸಿದೆ. ಜೊತೆಗೆ ಇಂದು ಮಂಡ್ಯ ಜಿಲ್ಲೆ ಯಾವ ಪರಿಸ್ಥಿತಿಗೆ ಬಂದಿದೆ ಅಂತ ಇಡೀ ದೇಶಕ್ಕೆ ಗೊತ್ತಿದೆ. ಅವರನ್ನು ನಂಬಿ ಯಾವ ಅಭಿವೃದ್ಧಿ ಆಗಿಲ್ಲ. ನಮ್ಮ ಸರ್ಕಾರ ಎಲ್ಲಾ ಕ್ಷೇತ್ರದಲ್ಲಿ ಒತ್ತು ನೀಡಿ ಆ ಭಾಗದ ಜನರಿಗೆ ಮೂಲ ಸೌಕರ್ಯಗಳು ನೀಡಿದೆ. ರಾಜ್ಯದಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಒತ್ತು ನೀಡಿದೆ ಎಂದರು. ಇದನ್ನೂ ಓದಿ: ಇಡೀ ದೇಶದಲ್ಲೇ ಬೊಮ್ಮಾಯಿ ಅಧಿಕಾರವಿಲ್ಲದ ಮುಖ್ಯಮಂತ್ರಿ: ಸಿಎಂ ಇಬ್ರಾಹಿಂ

ಕೇವಲ ರಾಜಕೀಯ ಮಾಡೋಕಷ್ಟೇ ಜೆಡಿಎಸ್ (JDS) ಇರೋದು. ನಮ ಪಕ್ಷಕ್ಕೆ ಯಾವ ಕೊರತೆ ಇಲ್ಲ. ಎಲ್ಲಾ ವರ್ಗದ ಸಮುದಾಯದ ನಾಯಕರನ್ನು ಬಿಜೆಪಿ ಪ್ರತಿನಿಧಿಸುತ್ತಿದ್ದೇವೆ. ಅಂಬೇಡ್ಕರ್, ಕೆಂಪೇಗೌಡ ಸಂಗೊಳ್ಳಿ ರಾಯಣ್ಣ, ನಾರಾಯಣ ಗುರು ಸೇರಿದಂತೆ ಮಹಾಪುರುಷರಿಗೆ ಗೌರವ ಸಲ್ಲಿಸುತ್ತೇವೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಹೆಸರು ಕೂಡ ಘೋಷಣೆ ಮಾಡಿದೆ. ಬಿಜೆಪಿ ಜನರ ಪಕ್ಷ, ಒಂದು ಕುಟುಂಬದ ಪಕ್ಷ ಅಲ್ಲ ಎಂದು ಹೇಳಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *