ದ್ವಿಶತಕ ಸಿಡಿಸಿ ಅಬ್ಬರದ ಸಂಭ್ರಮದಲ್ಲಿ ವಾರ್ನರ್ ಎಡವಟ್ಟು – ಕೈ,ಕೈ ಹಿಡಿದು ಪೆವಿಲಿಯನ್‌ಗೆ ಕರೆತಂದ ಫಿಸಿಯೋ

By
1 Min Read

ಮೆಲ್ಬರ್ನ್: ಆಸ್ಟ್ರೇಲಿಯಾದ (Australia) ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಎರಡನೇ ಟೆಸ್ಟ್ (Test) ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ ಈ ಸಂಭ್ರಮ ಕೆಲ ಸೆಕೆಂಡುಗಳಲ್ಲಿ ವಾರ್ನರ್ ನೋವಿನಿಂದ ನರಳಾಡುವಂತೆ ಮಾಡಿದೆ.

ಮೆಲ್ಬರ್ನ್‍ನಲ್ಲಿ (Melbourne) ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ವಾರ್ನರ್ ಭರ್ಜರಿಯಾಗಿ ಬ್ಯಾಟ್ ಬೀಸಿ 200 ರನ್ (254 ಎಸೆತ, 16 ಬೌಂಡರಿ, 2 ಸಿಕ್ಸ್) ಚಚ್ಚಿದರು. ಈ ಸಂಭ್ರಮಾಚರಣೆಯಲ್ಲಿ ವಾರ್ನರ್ ಎಡವಟ್ಟು ಮಾಡಿಕೊಂಡಿದ್ದಾರೆ. ದ್ವಿಶತಕದ ಖುಷಿಯಲ್ಲಿ ತಮ್ಮ ಎಂದಿನ ಸ್ಟೈಲ್‍ನಲ್ಲಿ ಹಾರಿ ಸಂಭ್ರಮಿಸುತ್ತಿದ್ದಂತೆ ಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ಇದರಿಂದಾಗಿ ಕಡೆಗೆ ವಾರ್ನರ್‌ರನ್ನು ಫಿಸಿಯೋ ಕೈ,ಕೈ ಹಿಡಿದು ಪೆವಿಲಿಯನ್‍ಗೆ ಕರೆ ತರುವಂತಾಯಿತು. ಇದನ್ನೂ ಓದಿ: ತನ್ನ ವಿಕೆಟ್ ಪಡೆದ ಬಾಂಗ್ಲಾ ಬೌಲರ್‌ಗೆ ವಿಶೇಷ ಉಡುಗೊರೆ ನೀಡಿದ ಕೊಹ್ಲಿ

ಈ ವೀಡಿಯೋ ಇದೀಗ ವೈರಲ್ ಆಗುತ್ತಿದ್ದು, ಸಂಭ್ರಮದ ಜಂಪ್ ಬೆಲೆ ತೆರುವಂತಾಗಿದೆ ಎಂಬ ಮಾತು ನೆಟ್ಟಿಗರಿಂದ ಕೇಳಿ ಬರುತ್ತಿದೆ. ಪಂದ್ಯದಲ್ಲಿ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 2ನೇ ದಿನದಾಟದ ಅಂತ್ಯಕ್ಕೆ 91 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 386 ರನ್ ಬಾರಿಸಿ 197 ರನ್‍ಗಳ ಮುನ್ನಡೆ ಪಡೆದುಕೊಂಡಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *